ಭಾರತ ತಂಡದ ಓಪನರ್ ಸ್ಲಾಟ್​ಗೆ ಬಿಗ್​ ರೇಸ್​..​ ಏಷ್ಯಾಕಪ್​ನಲ್ಲಿ ಆ ಅದೃಷ್ಟ ಸಿಗೋದು ಯಾರಿಗೆ?

ಮಿನಿ ವಿಶ್ವ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಬಲಿಷ್ಠ ತಂಡವನ್ನು ಪ್ರಕಟಿಸಿರುವ ಟೀಮ್ ಇಂಡಿಯಾ, ಇನ್ನು ದುಬೈಗೆ ಹಾರುವುದೊಂದೇ ಬಾಕಿ ಇದೆ. ಆದರೆ, ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸಿರುವ ಬೆನ್ನಲ್ಲೇ ಒಂದಿಲ್ಲೊಂದು ಪ್ರಶ್ನೆಗಳು ಕಾಡ್ತಿವೆ.

author-image
Bhimappa
ABHISHEK_SHARMA (1)
Advertisment

ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟವಾಗಿದ್ದಾಗಿದೆ. ಆದ್ರೆ, ಈ ತಂಡದ ಆಯ್ಕೆಯ ಪ್ರಶ್ನೆಗಳು, ಚರ್ಚೆಗಳು ಮಾತ್ರ ಇನ್ನು ನಿಂತಿಲ್ಲ. ಆದ್ರೀಗ ಸಂಜು ಸ್ಯಾಮ್ಸನ್​​ ಬ್ಯಾಟಿಂಗ್ ಕ್ರಮಾಂಕದ ಪ್ರಶ್ನೆ ಎದ್ದಿದೆ. ಈ ಸ್ಟೋರಿನಾ ನೋಡಿದ್ರೆ, ಸಂಜು ಸ್ಲಾಟ್​ ಬಗ್ಗೆ ಮ್ಯಾನೇಜ್​ಮೆಂಟ್​ಗೂ ಗೊಂದಲ ಸೃಷ್ಟಿಯಾಗೋದ್ರಲ್ಲಿ ಡೌಟೇ ಇಲ್ಲ. ಅದು ಯಾಕೆ?. 

ಮಿನಿ ವಿಶ್ವ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಬಲಿಷ್ಠ ತಂಡವನ್ನು ಪ್ರಕಟಿಸಿರುವ ಟೀಮ್ ಇಂಡಿಯಾ, ಇನ್ನು ದುಬೈಗೆ ಹಾರುವುದೊಂದೇ ಬಾಕಿ ಇದೆ. ಆದ್ರೆ, ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸಿರುವ ಬೆನ್ನಲ್ಲೇ ಒಂದಿಲ್ಲೊಂದು ಪ್ರಶ್ನೆಗಳು ಕಾಡ್ತಿದೆ. ಈ ಪೈಕಿ ಒಂದು ಸಂಜು ಸ್ಯಾಮ್ಸನ್ ಸ್ಲಾಟ್​.

ABHISHEK_SHARMA

ನಿರೀಕ್ಷೆಯಂತೆ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೀಗ ಏಷ್ಯಾಕಪ್​ ಸ್ಥಾನ ಗಿಟ್ಟಿಸಿಕೊಂಡಿರುವ ಸಂಜು ಸ್ಯಾಮ್ಸನ್​​​ಗೆ ಈಗ ಬ್ಯಾಟಿಂಗ್ ಸ್ಲಾಟ್​​ನದ್ದೇ ಚಿಂತೆ. ಇದಕ್ಕೆ ಕಾರಣ ವೈಸ್ ಕ್ಯಾಪ್ಟನ್ ಶುಭ್​ಮನ್ ಗಿಲ್​ & ನಂಬರ್.1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ.

ಏಷ್ಯಾಕಪ್​​ನಲ್ಲಿ ಸಂಜು ಬ್ಯಾಟಿಂಗ್ ಸ್ಲಾಟ್​ನದ್ದೇ ಪ್ರಶ್ನೆ..!

ಸಂಜು ಸ್ಯಾಮ್ಸನ್, ದಿ ಬೆಸ್ಟ್ ಪ್ಲೇಯರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ, ಏಷ್ಯಾಕಪ್​​ನಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡುವ ಬಗ್ಗೆ ಅನುಮಾನ ಇಲ್ಲ. ಆದ್ರೆ, ಕಳೆದ 3 ಟಿ20 ಸರಣಿಗಳಿಂದ ಆರಂಭಿಕನಾಗಿ ಆಡಿರುವ ಸಂಜು ಸ್ಯಾಮ್ಸನ್, ಅದ್ಬುತ ಪ್ರದರ್ಶನವನ್ನು ನೀಡಿದ್ದಾರೆ. ಆದ್ರೀಗ ಶುಭ್​ಮನ್ ಗಿಲ್​ ಕಮ್​ಬ್ಯಾಕ್, ಸಂಜು ಸ್ಯಾಮ್ಸನ್​​ ಬ್ಯಾಟಿಂಗ್ ಸ್ಲಾಟ್​​ನ ಪ್ರಶ್ನೆಗೆ ನಾಂದಿಯಾಡಿದೆ. ಆರಂಭಿಕನಾಗಿ ಮುಂದುವರಿಯುತ್ತಾರಾ..? ಇಲ್ಲ ಮಿಡಲ್ ಆರ್ಡರ್​ಗೆ ಶಿಫ್ಟ್​ ಆಗ್ತಾರಾ ಎಂಬ ಕ್ಯೂರಿಯಾಸಿಟಿ ಹುಟ್ಟುಹಾಕಿದೆ. 

ಓಪನರ್ ‘ಸಂಜು’ ಸೂಪರ್​..! ಮಿಡ್ಲ್​​ನಲ್ಲಿ ಮಂಕು..!

2025ರಲ್ಲಿ ಟ್ರ್ಯಾಕ್ ರೆಕಾರ್ಡ್​ ನೋಡಿದ್ರೆ, ಸಂಜು ಸ್ಯಾಮ್ಸನ್​ ಅಗ್ರೆಸ್ಸಿವ್ ಬ್ಯಾಟಿಂಗ್​. ಮ್ಯಾಚ್ ವಿನ್ನಿಂಗ್ ನಾಕ್ಸ್​, ಮೈ ರೋಮಾಚನಗೊಳಿಸುತ್ತೆ. ಹೊಸ ಸಂಜು ಸ್ಯಾಮ್ಸನ್​ರನ್ನೇ ಪರಿಚಯಿಸುತ್ತೆ. ಆದ್ರೆ. ಓಪನರ್ ಆಗಿ ಬೊಂಬಾಟ್ ಆಟವಾಡಿರುವ ಸಂಜು, ನಾನ್ ಓಪರ್ ಆಗಿ ಕಂಪ್ಲೀಟ್ ಫೇಲಾಗಿದ್ದಾರೆ.

2024ರ ಅಕ್ಟೋಬರ್​​​ನಿಂದ T20ಯಲ್ಲಿ ಸಂಜು  

2024ರ ಅಕ್ಟೋಬರ್​​ನಿಂದ 12 ಟಿ20 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 417 ರನ್ ಸಿಡಿಸಿದ್ದಾರೆ. ಈ ಪೈಕಿ 3 ಶತಕ ಗಳಿಸಿರುವ ಸಂಜು ಸ್ಯಾಮ್ಸನ್, 183.7ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ ಹೊಂದಿದ್ದಾರೆ. 

ಇಂಟ್ರೆಸ್ಟಿಂಗ್ ಅಂದ್ರೆ, ಈ 12 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಆಡಿದ್ದು ಓಪನರ್ ಆಗಿಯೇ ಅನ್ನೋದು ವಿಶೇಷ. ಆದ್ರೆ, ನಾನ್​ ಓಪನ್ ಆಗಿ ಸಂಜು ಸ್ಯಾಮ್ಸನ್ ಆಟ ನೋಡಿದ್ರೆ, ಟೀಮ್ ಮ್ಯಾನೇಜ್​ಮೆಂಟ್​ಗೆ ಹೊಸ ಆತಂಕ ಹುಟ್ಟುಹಾಕೋದ್ರಲ್ಲಿ ಅನುಮಾನ ಇಲ್ಲ.

ಟಿ20ಯಲ್ಲಿ ಸಂಜು ಸ್ಯಾಮ್ಸನ್​ ಪ್ರದರ್ಶನ

ಟಿ20ಯಲ್ಲಿ ಆರಂಭಿಕನಾಗಿ 17 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 522 ರನ್ ಗಳಿಸಿದ್ದಾರೆ. 3 ಶತಕ, 1 ಅರ್ಧಶತಕ ದಾಖಲಿಸಿರುವ ಸಂಜು, 178.76ರ ಸ್ಟ್ರೈಕ್​​ರೇಟ್​ ಹೊಂದಿದ್ದಾರೆ. ಆದ್ರೆ, ಮಿಡಲ್ ಆರ್ಡರ್​​ನಲ್ಲಿ 25 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, ಸಿಡಿಸಿದ್ದು ಕೇವಲ 1 ಅರ್ಧಶತಕ. ಸ್ಟ್ರೈಕ್​​ರೇಟ್​ ಕೇವಲ 124.17... ಹೀಗಾಗಿ ಸಂಜು ಸ್ಲಾಟ್ ಯಾವುದು ಅನ್ನೋ ಪ್ರಶ್ನೆ ಸಹಜವಾಗೇ ಉದ್ಬವಾಗುತ್ತೆ.

ಇದನ್ನೂ ಓದಿ: ಸಚಿವ ಜಮೀರ್​ಗೆ 2 ಕೋಟಿ ಹಣ.. ಲೋಕಾಯುಕ್ತ ವಿಚಾರಣೆಯಲ್ಲಿ ನಟಿ ರಾಧಿಕಾ ಹೇಳಿದ್ದೇನು?

suryakumar_SANJU

ನಾನ್ ಓಪನರ್ ಆಗಿ ಸಂಜು ಸ್ಯಾಮ್ಸನ್

3ನೇ ಕ್ರಮಾಂಕದಲ್ಲಿ 3 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್, 126.92ರ ಸ್ಟ್ರೈಕ್​ರೇಟ್​ನಲ್ಲಿ 33 ರನ್ ಗಳಿಸಿದ್ರೆ. 4ನೇ ಕ್ರಮಾಂಕದಲ್ಲಿ ಆಡಿದ 11 ಪಂದ್ಯಗಳಿಂದ 213 ರನ್ ಗಳಿಸಿದ್ದಾರೆ. 129ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿರುವ ಸಂಜು, ಒಂದೇ ಒಂದು ಅರ್ಧಶತಕ ಗಳಿಸಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಆಡಿರೋ 5 ಪಂದ್ಯಗಳಿಂದ 62 ರನ್ ಗಳಿಸಿರುವ ಸಂಜು ಸ್ಟ್ರೈಕ್​ರೇಟ್​, 131.91 ಆಗಿದೆ. ಇನ್ನು 6 ಹಾಗೂ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರು. ಅದು ನಾಮಕವಸ್ಥೆಯಷ್ಟೇ. 

ಸಂಜು ‘ಫೇವರಿಟ್ ಸ್ಲಾಟ್’​ ತ್ಯಾಗ ಮಾಡ್ತಾರಾ ಅಭಿಷೇಕ್?

ಕೇವಲ ಆರಂಭಿಕನಾಗಿ ಅದ್ಬುತ ಟ್ರ್ಯಾಕ್ ರೆಕಾರ್ಡ್​ ಹೊಂದಿರುವ ಸಂಜು, ಉಳಿದ್ಯಾವ ಸ್ಲಾಟ್​ನಲ್ಲಿ ಆಡಿಲ್ಲ. ಹೀಗಾಗಿ ಸಂಜು ಆರಂಭಿಕನಾಗಿ ಆಡಬೇಕಾದ್ರೆ, ಶುಭ್​ಮನ್ ಗಿಲ್ ಅಥವಾ ಅಭಿಷೇಕ್ ಶರ್ಮಾ ತ್ಯಾಗ ಮಾಡಬೇಕು. ಆದ್ರೆ, ಶುಭ್​ಮನ್ ಗಿಲ್, ಅಭಿಷೇಕ್ ಶರ್ಮಾ ಟಿ20ಯಲ್ಲಿ ಆರಂಭಿಕರಾಗಿಯೇ ಪಳಗಿದವರು. ಪವರ್ ಪ್ಲೇನಲ್ಲೇ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಆದ್ರೆ, ಮೂವರಿಗೂ ಫೇವರಿಟ್ ಸ್ಲಾಟ್​ ಆಗಿರುವ ಆರಂಭಿಕ ಸ್ಥಾನವನ್ನ ಒಬ್ಬರು ತ್ಯಾಗ ಮಾಡಬೇಕು. ಇಲ್ಲ ಸಂಜು 3ನೇ ಕ್ರಮಾಂಕದಲ್ಲಿ ಆಡಬೇಕು. ಆದ್ರೆ, ಅಲ್ಲೂ ಕೂಡ ತಿಲಕ್ ವರ್ಮ, ಸೂರ್ಯಕುಮಾರ್ ಇದ್ದಾರೆ. ಹೀಗಾಗಿ ಸಂಜು ಸ್ಥಾನ ಏನು ಅನ್ನೋದೆ ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Shubman Gill Captaincy Vaibhav Suryavanshi Surya kumar Yadav Sanju Samson
Advertisment