/newsfirstlive-kannada/media/media_files/2025/08/11/kl_rahul_sanju-2025-08-11-14-06-56.jpg)
ಇಂಗ್ಲೆಂಡ್​ ಪ್ರವಾಸ ಅಂತ್ಯದ ಬಳಿಕ ಬಿಸಿಸಿಐ ವಲಯದಲ್ಲಿ ಏಷ್ಯಾಕಪ್​ ಟೂರ್ನಿಗೆ ಸಿದ್ಧತೆ ಆರಂಭವಾಗಿದೆ. ಸೆಪ್ಟೆಂಬರ್​​ನಲ್ಲಿ ನಡೆಯೋ ಟೂರ್ನಿಗೆ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್ ಕಮ್​ಬ್ಯಾಕ್ ಬಹುತೇಕ ಫಿಕ್ಸ್ ಆಗಿದ್ದಾರೆ. ಆದ್ರೆ, ಇವರಿಬ್ಬರ ಕಮ್​​ಬ್ಯಾಕ್ ಟೀಮ್ ಇಂಡಿಯಾದಲ್ಲಿ ಹೊಸ ತಲೆನೋವಿಗೆ ಕಾರಣವಾಗಲಿದೆ.
ಏಷ್ಯಾಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾ ವಿಶ್ವಕಪ್​​ಗೆ ಇದೇ ತಿಂಗಳ 3ನೇ ವಾರಂತ್ಯದಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸಲು ಬಿಸಿಸಿಐ ನಿರ್ಧರಿಸಿಲಾಗಿದ್ದು, ಈ ಏಷ್ಯನ್ ಬ್ಯಾಟಲ್​​ನಲ್ಲಿ ಯಾರಿಗೆ ಚಾನ್ಸ್​ ಸಿಗುತ್ತೆ..? ಇಲ್ಲ.? ಎಂಬ ಚರ್ಚೆಗಳೂ ಈಗಾಗಲೇ ಭಾರೀ ಸುದ್ದು ಮಾಡ್ತಿವೆ. ಅದ್ರಲ್ಲೂ, ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಓಪನರ್ಸ್ ಯಾರು​ ಎಂಬ ಪ್ರಶ್ನೆ ಗಿರಕಿ ಹೊಡೆಯುತ್ತಿದೆ. ಇದಕ್ಕೆಲ್ಲ ಕಾರಣ ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್ ಕಮ್​ಬ್ಯಾಕ್.
2025ರಲ್ಲಿ ಟಿ20 ಫಾರ್ಮೆಟ್​​ನಲ್ಲಿ ಆಡದ ಶುಭ್​ಮನ್ ಗಿಲ್​, ಏಷ್ಯಾಕಪ್​​ನೊಂದಿಗೆ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಆದ್ರೆ, ಈ ಕಮ್​​ಬ್ಯಾಕ್​, ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಮಾತ್ರವಲ್ಲ. ಸೆಲೆಕ್ಷನ್ ಕಮಿಟಿಯೂ ಹೊಸ ಟೆನ್ಶನ್ ತಂದಿಟ್ಟಿದೆ.
ಏಷ್ಯನ್​​ ಸಮರದಲ್ಲಿ ಭಾರತದ ಓಪನಿಂಗ್ ಜೋಡಿ ಯಾರು.?
ಬಿಸಿಸಿಐ ಸೆಲೆಕ್ಷನ್ ಕಮಿಟಿಯ ಟೆನ್ಶನ್​​ಗೆ ಕಾರಣವೇ ಓಪನರ್ಸ್​.! ಯಾಕಂದ್ರೆ, ಏಷ್ಯಾಕಪ್​​ನಲ್ಲಿ ಆಡಲು ಒಬ್ಬರಲ್ಲ, ಇಬ್ರಲ್ಲ ಬರೋಬ್ಬರಿ 7 ಓಪನರ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಶುಭ್​ಮನ್​ ಗಿಲ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್ & ಇಶಾನ್ ಕಿಶನ್. ಈ 7 ಮಂದಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಸೆಲೆಕ್ಷನ್​ ಕಮಿಟಿಗೆ ಇದೇ ಬಿಗ್ ಚಾಲೆಂಜ್ ಆಗಿದೆ.
ಆರಂಭಿಕರಾಗಿ ಮುಂದುವರಿತಾರಾ ಅಭಿಷೇಕ್​​​​, ಸಂಜು..?
ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್.. ಟೀಮ್​ ಇಂಡಿಯಾ ಟಿ20 ತಂಡದ ಓಪನರ್ಸ್..! ಆದ್ರೆ, ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಬ್ಯುಸಿಯಾಗಿದ್ದ ಕಾರಣಕ್ಕೆ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಈ ಹಿಂದಿನ ಸರಣಿಗಳಲ್ಲಿ ಟೀಮ್ ಇಂಡಿಯಾದ ಓಪನರ್​ಗಳಾಗಿದ್ದರು. ಸಿಕ್ಕ ಅವಕಾಶದಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿದ್ರು. ಇದೀಗ ಖಾಯಂ ಓಪನರ್​ಗಳಾದ ಶುಭ್​ಮನ್ ಗಿಲ್​, ಯಶಸ್ವಿ ಜೈಸ್ವಾಲ್ ಟಿ20 ತಂಡಕ್ಕೆ ಕಮ್​ಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ಅಭಿಷೇಕ್​​​​, ಸಂಜು ಸ್ಯಾಮ್ಸನ್​​ ಸ್ಥಾನ ಅಂತತ್ರಕ್ಕೆ ಸಿಲುಕಿದೆ.
ಸಂಜು ಸ್ಯಾಮ್ಸನ್ ಸ್ಥಾನ ಪಲ್ಲಟ ಗ್ಯಾರಂಟಿ..!
ಯಶಸ್ವಿ ಜೈಸ್ವಾಲ್ ಮಾತ್ರವಲ್ಲ.. ಈ ಹಿಂದೆ ಶುಭ್​ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾನೂ ಇನ್ನಿಂಗ್ಸ್​ ಓಪನ್ ಮಾಡಿದ್ದಿದೆ. ಅಗ್ರೆಸ್ಸಿವ್ ಇಂಟೆಂಟ್​​ನಲ್ಲಿ ಬ್ಯಾಟ್ ಬೀಸಿದ್ದಿದೆ. ಇನ್​ಫ್ಯಾಕ್ಟ್​_ ಸದ್ಯ ನಂಬರ್ 1 ಟಿ20 ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾನ ತಂಡದಿಂದ ಹೊರಗಿಡೋದು ಕಷ್ಟ.! ಗಿಲ್​ ಅಥವಾ ಜೈಸ್ವಾಲ್​ ಅಥವಾ ಅಭಿಷೇಕ್​ ಓಪನರ್​ಗಳಾಗಿ ಆಡೋದೆ ಸಾಧ್ಯತೆ ಹೆಚ್ಚಿದೆ. ಸಂಜು ಸ್ಯಾಮ್ಸನ್​​ಗೆ ಆರಂಭಿಕನ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
ರೇಸ್​​ನಲ್ಲಿದ್ದಾರೆ ಸಾಯಿ ಸುದರ್ಶನ್​, ರಾಹುಲ್, ಕಿಶನ್​..!
ಶುಭ್​ಮನ್​ ಗಿಲ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಸದ್ಯಕ್ಕೆ ಈ ನಾಲ್ವರೇ ತಂಡದ ಫಸ್ಟ್ ಚಾಯ್ಸ್ ಓಪನರ್ಸ್ ಎನಿಸಿದ್ದಾರೆ. ಐಪಿಎಲ್​​ನಲ್ಲಿ ಸದ್ದು ಮಾಡಿದ್ದ ಸಾಯಿ ಸುದರ್ಶನ್​​, ಕೆ.ಎಲ್.ರಾಹುಲ್​, ಇಶಾನ್​ ಕಿಶನ್​ ಕೂಡ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ರಾಹುಲ್​, ಕಿಶನ್​ ಕಮ್​ಬ್ಯಾಕ್​ನ ಎದುರು ನೋಡ್ತಿದ್ರೆ, ಯಂಗ್​ಗನ್​ ಸಾಯಿ ಸುದರ್ಶನ್​ ಎರಡನೇ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
2 ಸ್ಥಾನಗಳ ಮೇಲೆ 7 ಆಟಗಾರರ ಕಣ್ಣಿದೆ. ಇವ್ರ ಪೈಕಿ ಯಾವೊಬ್ಬ ಆಟಗಾರನನ್ನೂ ಸುಲಭಕ್ಕೆ ಸೈಡ್​​ಲೈನ್​ ಮಾಡುವಂತಿಲ್ಲ. ಏಷ್ಯಾಕಪ್​ಗೆ ಓಪನರ್ಸ್​ ಆಯ್ಕೆ ಸೆಲೆಕ್ಷನ್ ಕಮಿಟಿಗೆ ಕಗ್ಗಂಟು ಆಗೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ