/newsfirstlive-kannada/media/media_files/2025/10/25/gill_aus-2025-10-25-08-42-00.jpg)
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 236 ರನ್ ಗಳಿಗೆ ಅಲ್ ಔಟ್ ಮಾಡುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ ಬರೀ 3 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿತ್ತು. ಬಳಿಕ ಕೊನೆಯ 7 ವಿಕೆಟ್ ಕಳೆದುಕೊಂಡು ಬರೀ 53 ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಭಾರತದ ಬೌಲರ್ ಗಳು ಕೊನೆಯ 7 ವಿಕೆಟ್ ಗಳನ್ನು ಬೇಗನೇ ಪಡೆದರು. ಭಾರತದ ಬೌಲರ್ ಹರ್ಷಿತ್ ರಾಣಾ 39 ರನ್ ನೀಡಿ ನಾಲ್ಕು ವಿಕೆಟ್ ಪಡೆದು ಆಸ್ಟ್ರೇಲಿಯಾ ಬ್ಯಾಟರ್ ಗಳನ್ನು ಅಲ್ ಔಟ್ ಮಾಡುವಲ್ಲಿ ತಮ್ಮ ಮಹತ್ವದ ಕೊಡುಗೆ ನೀಡಿದ್ದರು. 46.4 ಓವರ್ ಗಳಿಗೆ ಆಸ್ಟ್ರೇಲಿಯಾ ತಂಡ 236 ರನ್ ಗಳಿಸಿ ಆಲ್ ಔಟ್ ಆಯಿತು. ಕರ್ನಾಟಕದ ಬೌಲರ್ ಪ್ರಸಿದ್ದ್ ಕೃಷ್ಣ ಕೂಡ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಈಗಾಗಲೇ ಭಾರತದ ಬ್ಯಾಟಿಂಗ್ ಆರಂಭವಾಗಿದ್ದು, 8 ಓವರ್‌ಗೆ 48 ರನ್ ಗಳನ್ನು ಭಾರತ ಕಲೆ ಹಾಕಿದೆ. ರೋಹಿತ್ ಶರ್ಮಾ 29 ರನ್ ಗಳಿಸಿ ಆಟವಾಡುತ್ತಿದ್ದರೇ, ಶುಭಮನ್ ಗಿಲ್ 10 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us