/newsfirstlive-kannada/media/media_files/2025/11/26/baskety-ball-player-death-2025-11-26-12-50-11.jpg)
ಬ್ಯಾಸ್ಕೆಟ್ ಬಾಲ್ ಯುವ ಆಟಗಾರ ಹಾರ್ದಿಕ್ ರಾಥಿ ದಾರುಣ ಸಾವು
ಹರಿಯಾಣದ ರೋಹಟಕ್ ನಲ್ಲಿ 16 ವರ್ಷದ ನ್ಯಾಷನಲ್ ಲೆವೆಲ್ ಬ್ಯಾಸ್ಕೆಟ್ ಬಾಲ್ ಆಟಗಾರ, ಬ್ಯಾಸ್ಕೆಟ್ ಬಾಲ್ ಕಂಬ ಕುಸಿದುಬಿದ್ದಿದ್ದರಿಂದ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬ್ಯಾಸ್ಕೆಟ್ ಬಾಲ್ ಆಟದ ಪ್ರಾಕ್ಟೀಸ್ ನಡೆಸುವಾಗ ಕಂಬವನ್ನು ಹಿಡಿದುಕೊಂಡಿದ್ದಾರೆ. ತಕ್ಷಣವೇ ಕಂಬ ಮುರಿದು , ಆಟಗಾರನ ಎದೆಯ ಮೇಲೆ ಬಿದ್ದಿದೆ. ತಕ್ಷಣವೇ ಸ್ಥಳದಲ್ಲಿದ್ದ ಉಳಿದ ಆಟಗಾರರು ಕಂಬವನ್ನು ಎತ್ತಿ, ಯುವ ಆಟಗಾರನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೇ, ಚಿಕಿತ್ಸೆ ಫಲಕಾರಿಯಾಗದೇ ಯುವ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವನ್ನಪ್ಪಿದ್ದಾರೆ.
ಹರಿಯಾಣ ರಾಜ್ಯದ ರೋಹಟಕ್ ಜಿಲ್ಲೆಯ ಲಖನ್ ಮಜ್ರಾ ಗ್ರಾಮದ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ಈ ದುರಂತ ನಡೆದಿದೆ. ಬ್ಯಾಸ್ಕೆಟ್ ಬಾಲ್ ಕೋರ್ಟ್ ನಲ್ಲಿ 16 ವರ್ಷದ ಹಾರ್ದಿಕ್ ರಾಥಿ ಮಾತ್ರವೇ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ದುರಂತದ ದೃಶ್ಯ ಮೈದಾನದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈಗ ವೈರಲ್ ಆಗಿದೆ.
ಈ ಮೈದಾನದ ನವೀಕರಣ, ನಿರ್ವಹಣೆಗಾಗಿ ರೋಹಟಕ್ ಸಂಸದ ದೀಪೀಂದರ್ ಹೂಡಾ 11 ಲಕ್ಷ ರೂಪಾಯಿ ಹಣ ನೀಡಿದ್ದರಂತೆ. ಆದರೇ, ಮೈದಾನವನ್ನು ನವೀಕರಣ, ನಿರ್ವಹಣೆ ಮಾಡಿ ಸುಸಜ್ಜಿತ ಸ್ಥಿತಿಯಲ್ಲಿ ಇಟ್ಟಿರಲಿಲ್ಲ. ಇನ್ನೂ ಸ್ಥಳೀಯರು ಮೈದಾನದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಬಗ್ಗೆ ಸಿಎಂ ನಯಾಬ್ ಸಿಂಗ್ ಸೈನಿ ಅವರಿಗೆ ಮನವಿ ಸಲ್ಲಿಸಿದ್ದರು. ಆದರೂ ಸಿಎಂ ಈ ಬಗ್ಗೆ ಗಮನ ಹರಿಸಿರಲಿಲ್ಲ.
#WATCH: Tragedy in Rohtak as national basketball player Hardik dies after a pole collapses during practice.
— Bishwajeet Maurya (@bishwamaurya_) November 26, 2025
Despite a ₹11 lakh contribution from Congress MP Deepender Hooda four years ago, the stadium received no proper maintenance. Locals had approached CM Nayab Saini three… pic.twitter.com/H3xK97gO7v
ಇದೇ ರೀತಿಯ ಮತ್ತೊಂದು ದುರಂತ 2 ದಿನದ ಹಿಂದೆ ಹರಿಯಾಣದ ಬಹದ್ದೂರ್ ಘಡ್ ನಲ್ಲೂ ಸಂಭವಿಸಿತ್ತು.
ಹರಿಯಾಣ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಪೋತ್ಸಾಹ ಇದೆ. ಆದರೇ, ಕ್ರೀಡಾ ಮೈದಾನಗಳ ಸರಿಯಾದ ನಿರ್ವಹಣೆ ಇಲ್ಲದೇ ದುರಂತಗಳು ಸಂಭವಿಸುತ್ತಿವೆ. ಹರಿಯಾಣ ರಾಜ್ಯ ಸರ್ಕಾರ , ಕ್ರೀಡಾ ಇಲಾಖೆ ಮೈದಾನಗಳನ್ನು ಸುಸ್ಥಿತಿಯಲ್ಲಿ ಇಡುವ ಕೆಲಸ ಮಾಡಬೇಕಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us