/newsfirstlive-kannada/media/media_files/2025/08/17/yash-dayal-3-2025-08-17-12-15-17.jpg)
ಐಪಿಎಲ್​ ಸೀಸನ್​ 19ಕ್ಕೆ ಐಪಿಎಲ್​ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಕೆಲ ತಂಡಗಳಂತೂ ಪ್ರಿ ಸೀಸನ್​ ಕ್ಯಾಂಪ್​ಗಳನ್ನೇ ಆಯೋಜಿಸಿ ಆಟಗಾರರ ಸಿದ್ಧತೆಗೆ ನೆರವಾಗ್ತಿವೆ. ಆರ್​​ಸಿಬಿ ಮಾತ್ರ ಗೊಂದಲದ ಗೂಡಾಗಿದೆ. ಒಂದೆಡೆ ಹೋಮ್​​ಗ್ರೌಂಡ್​​​ ಯಾವುದು ಅನ್ನೋದೆ ಇನ್ನೂ ಫೈನಲ್​ ಆಗಿಲ್ಲ. ಇನ್ನೊಂದೆಡೆ ಹರಾಜಿಗೂ ಮುನ್ನ ರಿಟೈನ್​ ಮಾಡಿಕೊಂಡ ವೇಗಿ ಯಶ್​​ ದಯಾಳ್​ ಕತೆ ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗೇ ಉಳಿದುಬಿಟ್ಟಿದೆ.
ಯಶ್​​ ದಯಾಳ್​ಗೆ ನ್ಯಾಯಾಲಯದಿಂದ ಬಿಗ್​ ರಿಲೀಫ್
ಆರೋಪಿಯಾಗಿರೋ ಯಶ್​ ದಯಾಳ್​​ಗೆ ಸದ್ಯ ಬಿಗ್​ ರಿಲೀಫ್​ ಸಿಕ್ಕಿದೆ. ಬಂಧನದ ಭೀತಿಯಿಂದ ಯಶ್​ ದಯಾಳ್​ ಪಾರಾಗಿದ್ದಾರೆ. ಕಳೆದ ಡಿಸೆಂಬರ್​ ಫೋಕ್ಸೋ ಪ್ರಕರಣದಡಿ ದಾಖಲಾಗಿದ್ದ ದೂರಿಗೆ ಜಾಮೀನು ಕೋರಿ ಯಶ್​ ದಯಾಳ್​ ಅರ್ಜಿ ಸಲ್ಲಿಸಿದ್ರು. ಬೇಲ್​ ಅರ್ಜಿಯನ್ನ ಸ್ಪೆಷಲ್​ ಪೊಕ್ಸೋ ಕೋರ್ಟ್​ ರಿಜೆಕ್ಟ್​ ಮಾಡಿತ್ತು. ಇದೀಗ ರಾಜಸ್ಥಾನ್​ ಹೈಕೋರ್ಟ್​ನಿಂದ ದಯಾಳ್​ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಯಶ್​ ದಯಾಳ್​ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಜಿಮ್​, ಕ್ರಿಕೆಟ್​ನಿಂದ ದೂರ ಉಳಿದಿದ್ದ ಆರ್​​ಸಿಬಿ ವೇಗಿ ಯಶ್​​ ದಯಾಳ್​ ಮತ್ತೆ ಅಖಾಡಕ್ಕೆ ಮರಳಿದ್ದಾರೆ. ಮುಂಬರುವ ಐಪಿಎಲ್​ ಟಾರ್ಗೆಟ್​ ಮಾಡಿರುವ ಎಡಗೈ ವೇಗಿ ಪ್ರಮುಖವಾಗಿ ಫಿಟ್​ನೆಸ್​ ಮೇಲೆ ಫೋಕಸ್​ ಮಾಡಿದ್ದಾರೆ. ಸುದೀರ್ಘ ಕಾಲದಿಂದ ಮೈದಾನದಿಂದ ದೂರ ಉಳಿದಿರೋದ್ರಿಂದ ಮ್ಯಾಚ್ ಫಿಟ್​ನೆಸ್​ ಸಾಧಿಸಲು ಪರಿಶ್ರಮ ಪಡ್ತಿದ್ದಾರೆ.
ಇದನ್ನೂ ಓದಿ:ಹೀನಾಯವಾಗಿ ಸೋತ ಸೂರ್ಯ ಪಡೆ.. ಸೋಲಿಗೆ ಕಾರಣವಾಯ್ತು ಆ ಮೂರು ತಪ್ಪುಗಳು..!
/filters:format(webp)/newsfirstlive-kannada/media/media_files/2025/08/07/yash_dayal_new-2025-08-07-07-33-36.jpg)
ಜೂನ್​ 3, 2025.. ಅಹ್ಮದಾಬಾದ್​ನ ನಮೋ ಮೈದಾನದಲ್ಲಿ ನಡೆದ ಕಳೆದ ಐಪಿಎಲ್​ ಫೈನಲ್​ ಪಂದ್ಯವೇ ಕೊನೆ. ಆ ಬಳಿಕ ಒಂದೇ ಒಂದು ಪಂದ್ಯವನ್ನೂ ಯಶ್​ ದಯಾಳ್​ ಆಡಿಲ್ಲ. ಸುದೀರ್ಘ ಕಾಲದಿಂದ ಕಾಂಪಿಟೇಟಿವ್​ ಕ್ರಿಕೆಟ್​ನಿಂದ ದೂರ ಉಳಿದಿರೋ ಯಶ್​ ದಯಾಳ್​, ಇದೀಗ ಮೈದಾನಕ್ಕೂ ಕಮ್​ಬ್ಯಾಕ್​ ಮಾಡಿದ್ದಾರೆ. ನೆಟ್ಸ್​ನಲ್ಲಿ ಬೌಲಿಂಗ್​ ಅಭ್ಯಾಸವನ್ನ ಆರಂಭಿಸಿದ್ದಾರೆ.
ಆರ್​​ಸಿಬಿ ಮ್ಯಾನೇಜ್​ಮೆಂಟ್​​ಗೆ ಹೊಸ ಟೆನ್ಶನ್
ದಯಾಳ್​ಗೆ ಕೋರ್ಟ್​ನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ. ಮುಂದಿನ ಐಪಿಎಲ್​ಗೂ ಸಿದ್ಧತೆ ಆರಂಭಿಸಿದ್ದಾಗಿದೆ. ಆದ್ರೆ, ಯಶ್​ ದಯಾಳ್​ ಟೂರ್ನಿಯಲ್ಲಿ ಆಡಿಸಬೇಕಾ.? ಬೇಡ್ವಾ.? ಎಂಬ ಗೊಂದಲ ಇದೀಗ ಆರ್​​ಸಿಬಿ ಮ್ಯಾನೇಜ್​​ಮೆಂಟ್​ ವಲಯದಲ್ಲಿ ಇನ್ನೂ ಬಗೆಹರಿದೇ ಇಲ್ಲ. ಯಶ್​ ದಯಾಳ್​ ಮೇಲೆ ಆರೋಪ ಕೇಳಿ ಬಂದ ಬೆನ್ನಲ್ಲೇ ಉತ್ತರ ಪ್ರದೇಶ ಕ್ರಿಕೆಟ್​ ಅನಧಿಕೃತವಾಗಿ ಬ್ಯಾನ್ ಮಾಡಿದೆ. ಉತ್ತರಪ್ರದೇಶ ಟಿ20 ಲೀಗ್​, ಡೊಮೆಸ್ಟಿಕ್ ಕ್ರಿಕೆಟ್​ನಿಂದ ದಯಾಳ್​ನ ದೂರ ಇಟ್ಟಿದೆ. ಇದೀಗ ನಿರೀಕ್ಷಣಾ ಜಾಮೀನು ಸಿಕ್ಕಿದ್ರೂ, ಕೇಸ್​ ಕ್ಲೀಯರ್​ ಆಗಿಲ್ಲ. ಹೀಗಾಗಿ ಆರ್​​ಸಿಬಿ ಮ್ಯಾನೇಜ್​ಮೆಂಟ್​ಗೆ ಹೊಸ ಟೆನ್ಶನ್​ ಆರಂಭವಾಗಿದೆ.
ಕೇಸ್​ ಕ್ಲೀಯರ್​ ಆಗದಿದ್ರೂ ಆಡಿಸುತ್ತಾ ಆರ್​​ಸಿಬಿ?
ಈ ಸೀಸನ್​ ಐಪಿಎಲ್​ನಲ್ಲಿ ಯಶ್​ ದಯಾಳ್​ ಆಡೋದು ಬಹುತೇಕ ಅನುಮಾನವೇ.! ಯಾಕಂದ್ರೆ, ಆರೋಪಿ ಸ್ಥಾನದಲ್ಲಿರೋ ಯಶ್​ ದಯಾಳ್​ನ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಆರ್​​ಸಿಬಿ ರಿಟೈನ್​ ಮಾಡಿಕೊಂಡಾಗಲೇ ತೀವ್ರ ಟೀಕೆಗಳು ವ್ಯಕ್ತವಾಗಿದ್ವು. ಆರ್​​ಸಿಬಿ ನಡೆಯನ್ನ ಖಂಡಿಸಿದ್ದ ಫ್ಯಾನ್ಸ್​, ಆಕ್ರೋಶ ವ್ಯಕ್ತಪಡಿಸಿದ್ರು. ಇದೀಗ ಕೇಸ್​ ಕ್ಲೀಯರ್​ ಆಗಿ, ನಿರಪರಾಧಿ ಎಂದು ಪ್ರೂವ್​ ಆಗೋಕೂ ಮುನ್ನ ಆರ್​​​ಸಿಬಿ ಯಶ್​ ದಯಾಳ್​ನ ಆಡಿಸಿದ್ರೆ, ಫ್ಯಾನ್ಸ್​ ಕೆಂಗಣ್ಣಿಗೆ ಗುರಿಯಾಗಲಿದೆ. ಹೀಗಾಗಿ, ಆರ್​​ಸಿಬಿ ರಿಸ್ಕ್​ ತೆಗೆದುಕೊಳ್ಳೋದು ಅನುಮಾನವೇ.
ಇದನ್ನೂ ಓದಿ:ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ವದಂತಿ..! ಇದು ನಿಜಾನಾ? ಸುಳ್ಳಾ? ಸ್ಪಷ್ಟನೆ ಇಲ್ಲಿದೆ
ಒಟ್ಟಿನಲ್ಲಿ ಯಶ್​​ ದಯಾಳ್​ ಐಪಿಎಲ್​ ಭವಿಷ್ಯ ಸದ್ಯ ಆರ್​​ಸಿಬಿ ಮ್ಯಾನೇಜ್​​ಮೆಂಟ್​ ನಿರ್ಧಾರದ ಮೇಲೆ ನಿಂತಿದೆ. IPL ಆರಂಭಕ್ಕೆ ಇನ್ನೂ 2 ತಿಂಗಳು ಇರೋದ್ರಿಂದ ಆರ್​​ಸಿಬಿ ಈ ವಿಚಾರದಲ್ಲಿ ಕಾದು ನೋಡುವ ತಂತ್ರ ಮೊರೆ ಹೋಗಿದೆ. ಅಂತಿಮ ನಿರ್ಧಾರ ಐಪಿಎಲ್​ ಆರಂಭಕ್ಕೂ ಕೆಲ ದಿನಗಳ ಅಂತರದಲ್ಲಿ ಹೊರಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us