ಚಹಲ್​ಗೆ ಮತ್ತೆ ‘ಬ್ರೇಕ್​ ಅಪ್​’ ನೋವು.. ಸಿಕ್ಕ ಮತ್ತೊಬ್ಬ ಗೆಳತಿಗೂ ಟಾಟಾ ಹೇಳಿದ ಸ್ಪಿನ್ನರ್..!

ಡಿವೋರ್ಸ್​​ನೊಂದಿಗೆ ಯುಜುವೇಂದ್ರ ಚಹಲ್​ -ಧನಶ್ರೀ ವರ್ಮಾ ಚಾಪ್ಟರ್​ ಕ್ಲೋಸ್​ ಆಗಿ 8-9 ತಿಂಗಳುಗಳೇ ಉರುಳಿದ್ವು. ಆ ಬಳಿಕ ಚಹಲ್​ ಬಾಳಿಗೆ ಆರ್​ಜೆ ಮಹ್ವಾಶ್​ ಎಂಟ್ರಿಕೊಟ್ಟಿದ್ರು. ಈಗ ನೋಡಿದ್ರೆ ಆ ಮಹ್ವಾಶ್​ ಕೂಡ ಚಹಲ್​ಗೆ ಟಾಟಾ ಮಾಡಿ ಹೋಗಿದ್ದಾರೆ.

author-image
Ganesh Kerekuli
Yuzvendra Chahal
Advertisment

ಡಿವೋರ್ಸ್​​ನೊಂದಿಗೆ ಯುಜುವೇಂದ್ರ ಚಹಲ್​ -ಧನಶ್ರೀ ವರ್ಮಾ ಚಾಪ್ಟರ್​ ಕ್ಲೋಸ್​ ಆಗಿ 8-9 ತಿಂಗಳುಗಳೇ ಉರುಳಿದ್ವು. ಆ ಬಳಿಕ ಚಹಲ್​ ಬಾಳಿಗೆ ಆರ್​ಜೆ ಮಹ್ವಾಶ್​ ಎಂಟ್ರಿಕೊಟ್ಟಿದ್ರು. ಈಗ ನೋಡಿದ್ರೆ ಆ ಮಹ್ವಾಶ್​ ಕೂಡ ಚಹಲ್​ಗೆ ಟಾಟಾ ಮಾಡಿ ಹೋಗಿದ್ದಾರೆ. 

ಯಾಕೋ ಟೀಮ್​ ಇಂಡಿಯಾ ಆಟಗಾರ ಯುಜುವೇಂದ್ರ ಚಹಲ್​ ಟೈಮೇ ಸರಿಯಿಲ್ಲ ಅನ್ಸುತ್ತೆ. ಕಳೆದ 2 ವರ್ಷದಿಂದ ಅಂತೂ ಎಲ್ಲವನ್ನೂ ಕಳೆದುಕೊಳ್ತಾನೆ ಬಂದಿದ್ದಾರೆ. ಬಹು ಕಾಲ ಪ್ರೀತಿಸಿ, ಇಷ್ಟು ಪಟ್ಟು ವಿವಾಹವಾದ ಧನಶ್ರೀ ವರ್ಮಾ, ಚಹಲ್​ ಬಾಳಲ್ಲಿ  ತುಂಬಾ ವರ್ಷ ನಿಲ್ಲಲೇ ಇಲ್ಲ. ಡಿವೋರ್ಸ್​ ಕೊಟ್ಟು ಧನಶ್ರೀ ದೂರಾದ್ರು. ಇದ್ರ ಬೆನ್ನಿಗೆ ಟೀಮ್​ ಇಂಡಿಯಾದಲ್ಲಿ ಸ್ಥಾನವೂ ಹೋಯ್ತು. ಇದೀಗ ನೋಡಿದ್ರೆ ಧನಶ್ರೀ ದೂರಾದ ಬಳಿಕ ಬಾಳಿಗೆ ಹೊಸದಾಗಿ ಎಂಟ್ರಿ ಕೊಟ್ಟಿದ್ದ ಗೆಳತಿ ಆರ್​​ಜೆ ಮಹ್ವಾಶ್​ ಕೂಡ, ಚಹಲ್​ಗೆ ಟಾಟಾ ಮಾಡಿ ಹೋಗಿದ್ದಾರೆ. 

ಚಹಲ್​-ಮಹ್ವಾಶ್​ ದೂರ.. ದೂರ!

ಧನಶ್ರೀ ವರ್ಮಾ ದೂರಾದ ಬಳಿಕ ಆರ್​​.ಜೆ ಮಹ್ವಾಶ್​​ ಜೊತೆ ಚಹಲ್​ ಹೆಚ್ಚು ಹೆಚ್ಚು ಕಾಣಿಸಿಕೊಂಡಿದ್ರು. ದೇಶ-ವಿದೇಶಗಳಲ್ಲಿ ಇಬ್ಬರೂ ಒಟ್ಟಾಗಿ ಸುತ್ತಾಟ ನಡೆಸಿದ್ರು. ಇಬ್ಬರ ತಮ್ಮ ಗೆಳೆತನದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡ್ತಿದ್ರು. ಸೋಷಿಯಲ್​ ಮೀಡಿಯಾಗಳಲ್ಲಿ ಇಬ್ಬರ ಬಗ್ಗೆ ಒಬ್ಬರು ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ರು. ಇಬ್ಬರ ನಡೆ ಡೇಟಿಂಗ್​ನ ಗಾಸಿಪ್​ಗೆ ದಾರಿ ಮಾಡಿಕೊಟ್ಟಿತ್ತು. ಇದೆಲ್ಲಾ ಆಗಿದ್ದು ಕೆಲವೇ ಕೆಲವು ಕೆಲ ತಿಂಗಳ ಅಂತರದಲ್ಲಿ.! ಆದ್ರೆ, ಈಗ ನೋಡಿದ್ರೆ, ಅಚ್ಚರಿಯ ಬೆಳವಣಿಗೆಯಲ್ಲೂ ಇಬ್ಬರೂ ದೂರ ದೂರ ಆದ ಸುದ್ದಿ ಬಂದಿದೆ. 

ಫ್ರೆಂಡ್​ಶಿಪ್​ ‘ಬ್ರೇಕ್​ ಅಪ್​’.!

ಆರ್​​ಜೆ ಮಹ್ವಾಶ್​ ಹಾಗೂ ಚಹಲ್​​ ದೂರಾದ ಸುದ್ದಿ ಸದ್ಯ ಸಾಕಷ್ಟು ಸದ್ದು ಮಾಡ್ತಿದೆ. ಇಬ್ಬರ ಗೆಳೆತನದಲ್ಲಿ ಬಿರುಕು ಮೂಡಿದ್ದು, ಅಸಮಾಧಾನದಿಂದ ದೂರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಇನ್ಸ್​​ಸ್ಟಾಗ್ರಾಂನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ.  ಸೋಷಿಯಲ್​ ಮೀಡಿಯಾದಲ್ಲೂ ಇಬ್ಬರೂ ದೂರಾದ ಬೆನ್ನಲ್ಲೇ ಇಬ್ಬರ ಫ್ರೆಂಡ್​​ಶಿಪ್​ ಬ್ರೇಕ್​ ಅಪ್​ ಆಗಿದೆ ಎಂಬ ಸುದ್ದಿ ಜೋರಾಗಿ ಹರಿದಾಡ್ತಿದೆ. 

ಇದನ್ನೂ ಓದಿ:ಕನ್ನಡದ ‘ಅಕ್ಷರ ಯೋಗಿ’ ಅಂಕೇಗೌಡರಿಗೆ ಪದ್ಮಶ್ರೀ ಗೌರವ; 10 ಲಕ್ಷ ಪುಸ್ತಕಗಳ ‘ಪುಸ್ತಕ ಮನೆ’ಗೆ ಸಂದ ದೊಡ್ಡ ಮನ್ನಣೆ..!

yazuevendra chahal and dhanasree (2)

2 ತಿಂಗಳ ಹಿಂದೆ ಕಳೆದ ನವೆಂಬರ್​ನಲ್ಲಿ ಚಹಲ್​ 2ನೇ ವಿವಾಹದ ಬಗ್ಗೆ ಮಾತನಾಡಿದ್ರು. ಹೊಸ ವಿನ್ಯಾಸದ ಬ್ಲ್ಯಾಕ್​ ಸೂಟ್​ ತೊಟ್ಟು ಫೋಟೋಶೂಟ್​ ಮಾಡಿಸಿದ್ದ ಫೋಟೋಗಳನ್ನ ಚಹಲ್​ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ರು. ಆ ಪೋಸ್ಟ್​ಗೆ​ ಶಾದಿ ಕೆಲಿಯೇ ರೆಡಿ ಹೂ. ಬಸ್​ ಲಡ್ಕಿ ಚಾಹಿಯೇ.. (Shadi k lie ready hoon bas ladki chaiye) ಎಂಬ ಕ್ಯಾಪ್ಶನ್​ ನೀಡಿದ್ರು. ಇದನ್ನ ನೋಡಿದ ಎಲ್ಲರೂ ಚಹಲ್​ - ಮಹ್ವಾಶ್​ ಮದುವೆಯಾಗ್ತಿದ್ದಾರೆ ಎಂದೇ ಊಹಿಸಿದ್ರು. 

ಚಹಲ್​-ಮಹ್ವಾಶ್​ ಮದುವೆಯಾಗ್ತಾರೆ ಎಂದು ಎಲ್ಲರೂ ಊಹಿಸಿದ್ದಕ್ಕೆ ಹಲವು ಕಾರಣಗಳಿವೆ. ಧನಶ್ರೀ ಜೊತೆಗಿನ ಡಿವೋರ್ಸ್​ ಮುಂಚಿನಿಂದಲೂ ಇವರಿಬ್ಬರು ಹಲವು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ರು. ಚಹಲ್‌ಗೂ, ಧನ್ಯಶ್ರೀ ವರ್ಮಾಗೂ ಅಧಿಕೃತ ಡಿವೋರ್ಸ್‌ ಆಗಿದ್ದು 20 ಫೆಬ್ರವರಿ 2025 ರಂದು.. ಅದ್ಕೂ ಮನ್ನವೇ ಚಹಲ್‌ಗೆ ಫ್ರೆಂಡ್‌ ಆಗಿ ಆರ್‌.ಜೆ.ಮಹ್ವಾಶ್‌ ಸಿಕ್ಕಿದ್ದಳು. ಅದಕ್ಕೆ ಸಾಕ್ಷಿ ಫೋಟೋ..!
2024 ಡಿಸೆಂಬರ್‌ನಲ್ಲಿ ನಡೆದ ಕ್ರಿಸ್‌ಮಸ್‌ ಅನ್ನ ಚಹಲ್‌ ಮತ್ತು ಮಹ್ವಾಶ್‌ ಸೆಲೆಬ್ರೆಷನ್‌ ಮಾಡಿದ್ರು. ಆ ಬಳಿಕ ಚಾಂಪಿಯನ್ಸ್​ ಟ್ರೋಫಿ, ಐಪಿಎಲ್​ ಟ್ರೋಫಿಗಳ ವೇಳೆಯೂ ಸ್ಟ್ಯಾಂಡ್​ನಲ್ಲಿ ಮಹ್ವಾಶ್​ ಕಾಣಿಸಿಕೊಂಡಿದ್ರು. ಜುಲೈನಲ್ಲಿ ಚಹಲ್​ ಹುಟ್ಟುಹಬ್ಬವನ್ನ ಲಂಡನ್​ನಲ್ಲಿ ಮಹ್ವಾಶ್​ ವಿಶೇಷವಾಗಿ ಸೆಲಬ್ರೇಟ್​ ಕೂಡ ಮಾಡಿದ್ರು.

ಇದನ್ನೂ ಓದಿ: ‘ಅಕ್ಷರ ಯೋಗಿ’ ಅಂಕೇಗೌಡ ಯಾರು..? KSRTC ನೌಕರನ ಅಕ್ಷರ ಪ್ರೇಮ ‘ಪದ್ಮಶ್ರೀ’ ಮಟ್ಟಕ್ಕೆ ಬೆಳೆದ ಅಪರೂಪದ ಕಥೆ..!

ಸೂರ್ಯ, ಸಿರಾಜ್ ಸೇರಿ ಈ ಆಟಗಾರರು ಇನ್ಮುಂದೆ ಒನ್​ಡೇ ಮ್ಯಾಚ್ ಆಡುವುದೇ ಡೌಟ್​

ಇವರಿಬ್ಬರು ಇಷ್ಟು ಆತ್ಮೀಯವಾಗಿದ್ರಿಂದಲೇ 2ನೇ ಮದುವೆಯ ಸುದ್ದಿ ಸಾಕಷ್ಟು ಜೋರಾಗಿ ಓಡಾಡಿತ್ತು. ಆದ್ರೆ, ಇವರಿಬ್ಬರು ನಾವು ಬೆಸ್ಟ್​ ಫ್ರೆಂಡ್ಸ್​ ಎಂದುಕೊಂಡೇ ಓಡಾಡಿದ್ರು. ಈಗ ನೋಡಿದ್ರೆ, ಆ ಫ್ರೆಂಡ್​ಶಿಪ್​ ಕೂಡ ಬ್ರೇಕ್ಅಪ್​ ಆಗಿದೆ. ಚಹಲ್​ ಮತ್ತೆ ಒಂಟಿಯಾಗಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yuzvendra Chahal DHANASREE VERMA
Advertisment