/newsfirstlive-kannada/media/media_files/2025/08/25/cheteshwar_pujara_bat-2025-08-25-10-23-44.jpg)
15 ವರ್ಷಗಳ ಸುದೀರ್ಘ ಜರ್ನಿ, ಈ ಸುದೀರ್ಘ ಜರ್ನಿಯಲ್ಲಿ ಪೂಜಾರ ಅದೆಷ್ಟೋ ಮ್ಯಾಚ್ಗಳನ್ನು ಗೆಲ್ಲಿಸಿದ್ದಾರೆ. ಮರೆಯಲಾಗದ ಇನ್ನಿಂಗ್ಸ್ಗಳನ್ನು ಕಟ್ಟಿಕೊಟ್ಟಿದ್ದಾರೆ. 103 ಟೆಸ್ಟ್ಗಳನ್ನಾಡಿ 7195 ರನ್ಗಳಿಸಿದ್ದಾರೆ. ಆದ್ರೆ, ಚೇತೇಶ್ವರ ಪೂಜಾರ ಮಿಸ್ಟರ್ ಡಿಪೆಂಡೆಬಲ್, ಸೇವಿಯರ್ ಎಂದೆನಿಸಿಕೊಳ್ಳಲು ಕಾರಣ ಈ ಇನ್ನಿಂಗ್ಸ್ಗಳು.
ಚೇತೇಶ್ವರ್ ಪೂಜಾರ.! ಮಿಸ್ಟರ್ ಡಿಪೆಂಡೇಬಲ್, ಟೆಸ್ಟ್ ಸ್ಪೆಷಲಿಸ್ಟ್. ದಿ ವಾಲ್ 2.0.. ಟೀಮ್ ಇಂಡಿಯಾದ ಆಪ್ತ ರಕ್ಷಕ. ಪೂಜಾರ ಅಂದ್ರೆ, ಟೆಸ್ಟ್ ಕ್ರಿಕೆಟ್ಗೇ ಸೊಬಗು. ಅದ್ಭುತ, ಅಮೋಘ, ರೋಚಕ, ಮನಮೋಹಕ. ಅಬ್ಬಾ, ಈ ಟೆಸ್ಟ್ ಸ್ಪೆಷಲಿಸ್ಟ್ನ ಬ್ಯಾಟಿಂಗ್ ವೈಭವ ನೋಡೋದೆ ಚೆಂದ. 15 ವರ್ಷಗಳ ಸುದೀರ್ಘ ಟೆಸ್ಟ್ ಕರಿಯರ್ನಲ್ಲಿ ಮೆಸ್ಮರೈಸ್ ಇನ್ನಿಂಗ್ಸ್ಗಳನ್ನ ಕಟ್ಟಿದ್ದಾರೆ. ಟೀಮ್ ಇಂಡಿಯಾಗೆ ಆಸರೆಯಾಗಿದ್ದಾರೆ. ಮರೆಯಲಾಗದ ನೆನಪುಗಳನ್ನ ಕೊಟ್ಟಿದ್ದಾರೆ. ಅಂತಹ ಇನ್ನಿಂಗ್ಸ್ಗಳ ಪೈಕಿ, ಈ ಇನ್ನಿಂಗ್ಸ್ಗಳು ಕ್ರಿಕೆಟ್ ಪ್ರೇಮಿಗಳ ಮನದಾಳದಲ್ಲಿ ಎಂದೆಂದಿಗೂ ಅಜರಾಮರ.!
/filters:format(webp)/newsfirstlive-kannada/media/media_files/2025/08/24/cheteshwar-pujara-2025-08-24-15-27-54.jpg)
ಇಂಗ್ಲೆಂಡ್ ವಿರುದ್ಧ ಅಜೇಯ 206 ರನ್
ಇದು ಪೂಜಾರ ಟೆಸ್ಟ್ ಕರಿಯರ್ನ ಮೊದಲ ದ್ವಿಶತಕ.! 513 ನಿಮಿಷಗಳ ಕಾಲ ಬ್ಯಾಟ್ ಬೀಸಿದ್ದ ಪೂಜಾರ, 2012ರಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ 389 ಎಸೆತಗಳನ್ನ ಎದುರಿಸಿದ್ದರು. ಅಹ್ಮದಬಾದ್ನಲ್ಲಿ ಮ್ಯಾರಥಾನ್ ಇನ್ನಿಂಗ್ಸ್ ಕಟ್ಟಿದ್ದ ಸೌರಾಷ್ಟ್ರ ಬ್ಯಾಟ್ಸ್ಮನ್ ಪೂಜಾರ 206 ರನ್ ಗಳಿಸಿದ್ರು. ಆ ಮೂಲಕ ಭಾರತದ ಗೆಲುವಿನಲ್ಲಿ ಪಾತ್ರವಹಿಸಿದ್ರು.
ರಾಂಚಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 202 ರನ್
ಚೇತೇಶ್ವರ್ ಪೂಜಾರರ 3ನೇ ಡಬಲ್ ಸೆಂಚುರಿ ಇದಾಗಿದೆ. 2017ರಲ್ಲಿ ನಡೆದ ಆಸಿಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಅಕ್ಷರಶಃ ಗೋಡೆಯಾಗಿ ನಿಂತಿದ್ರು. ರಾಂಚಿಯ ಟಫ್ ಪಿಚ್ನಲ್ಲಿ ಬರೋಬ್ಬರಿ 672 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದ ಪೂಜಾರ, 525 ಬಾಲ್ಗಳಲ್ಲಿ 202 ರನ್ ಗಳಿಸಿದ್ರು. ಅಂದು ಮ್ಯಾಚ್ ಡ್ರಾ ಆಗಿತ್ತು.
ಅಡಿಲೇಡ್ನಲ್ಲಿ ಮ್ಯಾಚ್ ಸೇವಿಂಗ್ ಇನ್ನಿಂಗ್ಸ್.!
2018ರ ಆಸ್ಟ್ರೇಲಿಯಾ ಪ್ರವಾಸ.. ಈ ಪ್ರವಾಸದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಮುಗ್ಗರಿಸಬೇಕಿತ್ತು. 41 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಕಥೆ ಮುಗೀತು ಅಂತಾನೇ ಎಲ್ಲರ ಭಾವಿಸಿದ್ದರು. ಆದ್ರೆ, ಬರೋಬ್ಬರಿ 376 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದ ಪೂಜಾರ, ತಾನೆದುರಿಸಿದ 246 ಎಸೆತಗಳಿಂದ 123 ರನ್ ಗಳಿಸಿದರು. ಈ ಇನ್ನಿಂಗ್ಸ್ ಅಡಿಲೇಡ್ ಟೆಸ್ಟ್ ಗೆಲುವಿಗೆ ಪಾತ್ರವಾಯ್ತು.
ಎಂದೆಂದಿಗೂ ಸ್ಪೆಷಲ್ & ಮೆಮೊರೆಬಲ್ 2021ರ ಸಿಡ್ನಿ ಟೆಸ್ಟ್!
ಪೂಜಾರ ಎಂದೆಂದಿಗೂ ರಿಯಲ್ ಫೈಟರ್ ಅನ್ನೋದನ್ನು ಫ್ರೂವ್ ಮಾಡುವ ಪಂದ್ಯವೇ 2021ರ ಸಿಡ್ನಿ ಟೆಸ್ಟ್. ಈ ಟೆಸ್ಟ್ನಲ್ಲಿ ಟೀಮ್ ಇಂಡಿಯಾಗೆ ತಡೆಗೋಡೆಯಂತೆ ನಿಂತಿದ್ದ ಪೂಜಾರ, ಎರಡೂ ಇನ್ನಿಂಗ್ಸ್ಗಳಲ್ಲಿ ಕಟ್ಟಿದ್ದು ಮ್ಯಾರಥಾನ್ ಇನ್ನಿಂಗ್ಸ್.. ಮೊದಲ ಇನ್ನಿಂಗ್ಸ್ 176 ಎಸೆತಗಳಲ್ಲಿ 50 ರನ್ ದಾಖಲಿಸಿದ್ದ ಪೂಜಾರ, 2ನೇ ಇನ್ನಿಂಗ್ಸ್ನಲ್ಲಿ ಬುಲೆಟ್ ವೇಗದಲ್ಲಿ ಬಂದ ಚೆಂಡು ಎದೆಗೆ ಅಪ್ಪಳಿಸುತ್ತಿದ್ದರೂ ಎದೆಯೊಡ್ಡಿ ಕ್ರೀಸ್ನಲ್ಲಿ ನೆಲೆ ನಿಂತಿದ್ದರು. 205 ಎಸೆತಗಳನ್ನ ಎದುರಿಸಿ ಪಂದ್ಯವನ್ನ ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಇವತ್ತಿಗೂ ಈ ಇನ್ನಿಂಗ್ಸ್ ನೋಡುಗರ ಎದೆಯನ್ನು ಝಲ್ ಎನಿಸುತ್ತೆ.
ಇದನ್ನೂ ಓದಿ:KGF, ರಣವಿಕ್ರಮ ಖ್ಯಾತಿಯ ಶೆಟ್ಟಿ ಭಾಯ್ ದಿನೇಶ್ ಮಂಗಳೂರು ಇನ್ನಿಲ್ಲ
ಸೌತ್ ಆಫ್ರಿಕಾ ವಿರುದ್ಧ 153 ರನ್ಗಳ ಅಮೋಘ ಇನ್ನಿಂಗ್ಸ್
ಜೋಹಾನ್ಸ್ ಬರ್ಗ್ನ ಟಫ್ ಟ್ರ್ಯಾಕ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಪರದಾಡ್ತಿದ್ರೆ, ಆಪತ್ಭಾಂದವ, ಅಬ್ಬರಿಸಿ ಮಿಂಚಿದ್ರು. 270 ಎಸೆತಗಳನ್ನ ಎದುರಿಸಿ 153 ರನ್ ಚಚ್ಚಿದ್ರು 2013ರಲ್ಲಿ ನಡೆದ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಫೆಂಟಾಸ್ಟಿಕ್ ಆಟವಾಡಿದ್ರು. ಇದು ಔಟ್ ಸೈಡ್ ಏಷ್ಯಾದಲ್ಲಿ ದಾಖಲಾದ ಮೊದಲ ಟೆಸ್ಟ್ ಶತಕ ಆಗಿತ್ತು.
ಇದಿಷ್ಟೇ ಅಲ್ಲ, 2015ರಲ್ಲಿ ಶ್ರೀಲಂಕಾ ವಿರುದ್ಧದ ಕೊಲೊಂಬೀ ಟೆಸ್ಟ್ನಲ್ಲಿ ಅಜೇಯ 145 ರನ್. 2017ರಲ್ಲಿ ಶ್ರೀಲಂಕಾ ಎದುರಿನ ಗಾಲೆ ಟೆಸ್ಟ್ನಲ್ಲಿ 133 ರನ್ಗಳ ಇನ್ನಿಂಗ್ಸ್. 2018ರ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ನಲ್ಲಿ 193 ರನ್ಗಳ ಇನ್ನಿಂಗ್ಸ್ ಪೂಜಾರ ಪಾಲಿಗೇ ಅಲ್ಲ. ಅಭಿಮಾನಿಗಳ ಪಾಲಿಗೂ ಅವಿಸ್ಮರಣೀಯ ಇನ್ನಿಂಗ್ಸ್ಗಳಾಗಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ