/newsfirstlive-kannada/media/media_files/2025/11/19/ksca-vinay-mrutanjaya-interview-2025-11-19-18-34-39.jpg)
KSCA ಕಾರ್ಯದರ್ಶಿ ಸ್ಥಾನದ ಸ್ಪರ್ಧಿ ವಿನಯ ಮೃತ್ಯುಂಜಯ ಸಂದರ್ಶನ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಭಾರತ ತಂಡದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ವಿನಯ್ ಮೃತ್ಯುಂಜಯ ಸಾರಥ್ಯದ ತಂಡ, ಹಾಗೆ
ದಿಗ್ಗಜ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಬೆಂಬಲಿತ ಟೀಮ್ ಗೇಮ್ ಚೇಂಜರ್ಸ್ ಹಾಗೂ ಮಾಜಿ ಕ್ರಿಕೆಟಿಗ, KSCA ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಪತ್ರಕರ್ತ ಶಾಂತ ಕುಮಾರ್ ನೇತೃತ್ವದ ತಂಡದ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದೆ. ಉಭಯ ತಂಡಗಳು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಚುನಾವಣಾ ಕಾವು ಮತ್ತಷ್ಟು ಹೆಚ್ಚಿದೆ. ವೆಂಕಟೇಶ್ ಪ್ರಸಾದ್ ತಂಡದಿಂದ ಕಾರ್ಯದರ್ಶಿ ಸ್ಥಾನಕ್ಕೆ ಸ್ಫರ್ದಿಸಿರುವ ವಿನಯ್ ಮೃತ್ಯುಂಜಯ ಚುನಾವಣೆಯ ಬಗ್ಗೆ ಏನ್ ಹೇಳ್ತಾರೆ? ಈ ಸ್ಪೋಟಕ ಸಂದರ್ಶನವನ್ನ ಮಿಸ್ ಮಾಡದೇ ನ್ಯೂಸ್ ಫಸ್ಟ್ ನಲ್ಲಿ ನೋಡಿ!!!
ಸಂದರ್ಶನದ ಯೂಟ್ಯೂಬ್ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ನ್ಯೂಸ್ ಫಸ್ಟ್ ಸ್ಪೋರ್ಟ್ಸ್ ಬ್ಯೂರೋ ಮುಖ್ಯಸ್ಥ ಗಂಗಾಧರ್ ಅವರು ವಿನಯ್ ಮೃತ್ಯುಂಜಯ ಅವರನ್ನು ಸಂದರ್ಶನ ಮಾಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us