Super Six: ಚಹಾಲ್​ಗೆ ಹೊಸ ಲವ್.. ಹೆದರಿದ ಪಾಕ್.. ಆರ್​ಸಿಬಿಗೆ ಮತ್ತೊಂದು ಚಾನ್ಸ್..!

ರಾಯಲ್ ಚಾಲೆಂಜರಸ್​ ಬೆಂಗಳೂರು ವುಮೆನ್ಸ್ ಮತ್ತು ಮುಂಬೈ ಇಂಡಿಯನ್ಸ್​ ವುಮೆನ್ಸ್, ಇಂದು ಬರೋಡಾದಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿದ್ದಾರೆ. ಕ್ರಿಕೆಟ್ ಲೋಕದ ಆರು ಸುದ್ದಿಗಳು ಇಲ್ಲಿದೆ.

author-image
Ganesh Kerekuli
Chahal
Advertisment

ಬೆದರಿದ ಪಾಕ್, T20 ವಿಶ್ವಕಪ್​​​ಗೆ ತಂಡ ಪ್ರಕಟ..!

ಫೆಬ್ರವರಿ 7ರಂದು ಆರಂಭವಾಗಲಿರುವ ಟಿ-20 ವಿಶ್ವಕಪ್​​​ ಟೂರ್ನಿಗೆ ಕೊನೆಗೂ ಪಾಕಿಸ್ತಾನ ತಂಡ ಪ್ರಕಟಿಸಿದೆ. ಭದ್ರತೆ ಕಾರಣ ಬಾಂಗ್ಲಾದೇಶ ಟಿ-20 ಟೂರ್ನಿಯಿಂದ ಹಿಂದೆ ಸರಿದಿತ್ತು. ಬಾಂಗ್ಲಾ ನಡೆಗೆ ಪಾಕ್ ಸಹ ಬೆಂಬಲ ಸೂಚಿಸಿತ್ತು. ಜೊತೆಗೆ ತಾವೂ ವಿಶ್ವಕಪ್ ಟೂರ್ನಿಯನ್ನ ಬಹಿಷ್ಕರಿಸೋದಾಗಿ ಹೇಳಿಕೆ ನೀಡಿತ್ತು. ಐಸಿಸಿ ಕೊಟ್ಟ ಖಡಕ್ ವಾರ್ನಿಂಗ್​​ಗೆ ಬೆದರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತಂಡವನ್ನ ಘೋಷಿಸಿದೆ. ಪಾಕ್ ಟಿ-20 ವಿಶ್ವಕಪ್​ನ ಎಲ್ಲಾ ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಲಿದೆ.

ಚಹಲ್​​ಗೆ ಹೊಸ ಲವ್

ಟೀಮ್ ಇಂಡಿಯಾದ ಲೆಗ್​ಸ್ಪಿನ್ನರ್​ ಯುಜುವೇಂದ್ರ ಚಹಲ್​​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮಾಜಿ ಪತ್ನಿ ಧನಶ್ರೀ ವರ್ಮಾ ಜೊತೆ ಡಿವೋರ್ಸ್ ಆದ ಬಳಿಕ ಚಹಲ್, ಆರ್​.ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದ್ರು. ಇದೀಗ ಚಹಲ್ ಮತ್ತು ಮಹ್ವಾಶ್ ಸೋಶಿಯಲ್ ಮೀಡಿಯಾದಲ್ಲಿ ಅನ್​ಫಾಲೋ ಮಾಡಿಕೊಂಡಿರೋ ವಿಚಾರ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಚಹಲ್ ಟಿವಿ ನಿರೂಪಕಿ ಶೆಫಾಲಿ ಬಗ್ಗಾ ಜೊತೆ ಒಟ್ಟೊಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಅಂತ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಡಿಜಿಟಲ್ ಮೀಡಿಯಾಗೆ ಶಿಫ್ಟ್ ಆದ ಜನರು: ಮೂರು ವರ್ಷದಲ್ಲಿ ಬಾಗಿಲು ಮುಚ್ಚಿದ 50 ಚಾನಲ್‌ ಗಳು!

Chahal

ಪರ್ತ್​​ ಸ್ಕಾರ್ಚರ್ಸ್​​​​ ಬಿಗ್ ಬ್ಯಾಷ್ ಚಾಂಪಿಯನ್ಸ್

ಬಿಗ್ ಬ್ಯಾಷ್ ಲೀಗ್ ಟಿ-ಟ್ವೆಂಟಿ ಚಾಂಪಿಯನ್ ತಂಡವಾಗಿ ಪರ್ತ್​​ ಸ್ಕಾರ್ಚರ್ಸ್ ಹೊರಹೊಮ್ಮಿದೆ. ಪರ್ತ್​​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಕಾರ್ಚರ್ಸ್​​ ತಂಡ, ಸಿಡ್ನಿ ಸಿಕ್ಸರ್ಸ್​ ತಂಡವನ್ನ 6 ವಿಕೆಟ್​ಗಳಿಂದ ಮಣಿಸೋ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಆ ಮೂಲಕ ಪರ್ತ್ ಸ್ಕಾರ್ಚರ್ಸ್​​ 6ನೇ ಬಾರಿ ಬಿಬಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆ ಮೂಲಕ ಚಾಂಪಿಯನ್ ಟೀಮ್ ಪರ್ತ್ ಸ್ಕಾರ್ಚರ್ಸ್,​​ 3 ಕೋಟಿ ರೂಪಾಯಿಯನ್ನ ತನ್ನದಾಗಿಸಿಕೊಂಡಿತು. ಬಿಗ್​ಬ್ಯಾಷ್ ಟಿ-ಟ್ವೆಂಟಿ ಲೀಗ್ ಇತಿಹಾಸದಲ್ಲಿ ಪರ್ತ್ ಸ್ಕಾರ್ಚರ್ಸ್​ ಅತಿ ಹೆಚ್ಚು ಬಾರಿ ಟೈಟಲ್ ಗೆಲ್ಲೋ ಮೂಲಕ ದಾಖಲೆ ಕೂಡ ನಿರ್ಮಿಸಿತು.

ಜೋ ರೂಟ್​​​​​​ ಇಂಗ್ಲೆಂಡ್​ನ ದಾಖಲೆಯ ಸರದಾರ.! 

ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್, ನೂತನ ದಾಖಲೆ ನಿರ್ಮಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೂಟ್, ಬ್ಯಾಟಿಂಗ್​ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ರು. ಹಾಗೆ ಬೌಲಿಂಗ್​ನಲ್ಲಿ ಎರಡು ವಿಕೆಟ್ ಪಡೆದ ಜೋ ರೂಟ್, ಪಂದ್ಯಶ್ರೇಷ್ಟ ಪ್ರಶಸ್ತಿಗೂ ಭಾಜನರಾದ್ರು. ಪ್ಲೇಯರ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದ ರೂಟ್, ಇಂಗ್ಲೆಂಡ್​​​ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್​ಸನ್ ದಾಖಲೆ ಮುರಿದ್ರು. ಪೀಟರ್​ಸನ್, 277 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 26 ಬಾರಿ ಮ್ಯಾನ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದಿದ್ರು. ಇದೀಗ ರೂಟ್, 27ನೇ ಬಾರಿ ಪ್ರಶಸ್ತಿ ಪಡೆಯೋ ಮೂಲಕ ಹೊಸ ದಾಖಲೆ ನಿರ್ಮಿಸಿದ್ರು.

ಕ್ರಿಕೆಟ್​ಗೆ ವಿರಾಟ್ ಕೊಹ್ಲಿನೇ ಕಿಂಗ್- ಝ್ಯಾಂಪ್

ಆಸ್ಟ್ರೇಲಿಯಾ ತಂಡದ ಲೆಗ್​ಸ್ಪಿನ್ನರ್ ಌಡಂ ಝ್ಯಾಂಪ್, ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಯನ್ನ ಹಾಡಿ ಹೊಗಳಿದ್ದಾರೆ. ಕೊಹ್ಲಿ ವೈಟ್​ಬಾಲ್ ಕ್ರಿಕೆಟ್​​​​​​ನಲ್ಲಿ ಸಾಕಷ್ಟು ದಾಖಲೆಗಳನ್ನ ಮಾಡುತ್ತಿದ್ದಾರೆ. ಕೊಹ್ಲಿ ಇದೇ ಫಾರ್ಮ್ ಮುಂದುವರೆಸಿದ್ರೆ, ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ನೂರು ಶತಕಗಳನ್ನ ಪೂರೈಸೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕೊಹ್ಲಿ ಕೇವಲ ವೈಟ್​ಬಾಲ್ ಕ್ರಿಕೆಟ್​​​ ಮಾತ್ರವಲ್ಲ.! ಕ್ರಿಕೆಟ್​​ಗೆ ವಿರಾಟ್ ಕೊಹ್ಲಿನೇ ಕಿಂಗ್ ಎಂದಿದ್ದಾರೆ. ಹಾಗೆ ಕೊಹ್ಲಿ ಮಾಡಿರೋ ದಾಖಲೆಗಳನ್ನ ಬ್ರೇಕ್ ಮಾಡೋಕೆ, ಮುಂದೆ ಯಾರ ಕೈಯಿಂದಲೂ ಸಾಧ್ಯವಿಲ್ಲ ಅಂತ ಆಸಿಸ್ ಲೆಗ್​ಸ್ಪಿನ್ನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನ ಹುಡುಗಿಯರಿಗೆ ಷುಗರ್ ಡ್ಯಾಡಿ ಬೇಕು, ಬ್ಲ್ಯಾಕ್ ಮೇಲ್ ಮಾಡ್ತಾರೆ- ನಟ ಗೋವಿಂದ ಪತ್ನಿ ಸುನೀತಾ ಅಹುಜಾ

Kohli

ಮುಂಬೈ ವಿರುದ್ಧ ಆರ್​ಸಿಬಿಗೆ ಗೆಲ್ಲೋ ವಿಶ್ವಾಸ

ರಾಯಲ್ ಚಾಲೆಂಜರಸ್​ ಬೆಂಗಳೂರು ವುಮೆನ್ಸ್ ಮತ್ತು ಮುಂಬೈ ಇಂಡಿಯನ್ಸ್​ ವುಮೆನ್ಸ್, ಇಂದು ಬರೋಡಾದಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ ಫೈಟ್ ನಡೆಸಲಿದ್ದಾರೆ. ಈಗಾಗಲೇ ಟೂರ್ನಿಯಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ, ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಸದ್ಯ ಫ್ಲೇ ಆಫ್​​ಗೆ ಎಂಟ್ರಿ ಕೊಟ್ಟಿರುವ ಬೆಂಗಳೂರು ಮಹಿಳೆಯರು, ಮುಂಬೈ ವಿರುದ್ಧ ಗೆಲ್ಲಲೇಬೇಕು ಅಂತ ಪಣತೊಟ್ಟಿದ್ದಾರೆ. ಮುಂಬೈ ಮತ್ತು ಯು.ಪಿ.ವಾರಿಯರ್ಸ್​ ವಿರುದ್ಧ ಉಳಿದ ಎರಡೂ ಪಂದ್ಯಗಳು ಗೆದ್ರೆ, ಆರ್​ಸಿಬಿ ಫೈನಲ್ ಸುತ್ತಿಗೆ ಎಂಟ್ರಿ ಕೊಡೋದು ಖಚಿತವಾಗಲಿದೆ. 

RCB (10)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cricket news in Kannada cricketers love
Advertisment