/newsfirstlive-kannada/media/media_files/2025/12/21/ishan-kishan-2025-12-21-10-50-42.jpg)
ಬೆಂಗಳೂರಿಗೆ ಬಂದಿಳಿದ ತಿಲಕ್​ ವರ್ಮಾ
ಇಂಜುರಿಗೆ ತುತ್ತಾಗಿ ನ್ಯೂಜಿಲೆಂಡ್​ ಸರಣಿಯ ಮೊದಲ 3 ಪಂದ್ಯಗಳಿಂದ ಹೊರಬಿದ್ದಿರೋ ತಿಲಕ್​ ವರ್ಮಾ ಬೆಂಗಳೂರಿಗೆ ಬಂದಿಳಿದಿದ್ದಾರೆ. ಬಿಸಿಸಿಐ ಸೆಂಟರ್​ ಆಫ್​​ ಎಕ್ಸಲೆನ್ಸ್​ನಲ್ಲಿ ಇಂದಿನಿಂದ ತಿಲಕ್​ ವರ್ಮಾ ರಿಹ್ಯಾಬ್​ಗೆ ಒಳಗಾಗಲಿದ್ದಾರೆ. ಫಿಟ್​​ನೆಸ್​ ಟೆಸ್ಟ್​ ಪಾಸಾದ ಬಳಿಕ ಟೀಮ್​ ಇಂಡಿಯಾವನ್ನ ಕೂಡಿಕೊಳ್ಳಲಿದ್ದಾರೆ. ವಿಜಯ್​ ಹಜಾರೆ ಪಂದ್ಯದ ವೇಳೆ ಇಂಜುರಿಗೆ ತುತ್ತಾದ ತಿಲಕ್​ ವರ್ಮಾ, ಸರ್ಜರಿಗೆ ಒಳಗಾಗಿದ್ರು.
/filters:format(webp)/newsfirstlive-kannada/media/media_files/2025/12/12/tilak-varma-2025-12-12-07-59-04.jpg)
3ನೇ ಕ್ರಮಾಂಕದಲ್ಲಿ ಇಶಾನ್​ ಕಿಶನ್​ ಕಣಕ್ಕೆ
ಇಂದು ನ್ಯೂಜಿಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್​ ಕಿಶನ್ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದು ಕನ್​ಫರ್ಮ್​ ಆಗಿದೆ. ಇಂದಿನ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್​ ಬ್ಯಾಟಿಂಗ್​ ನಡೆಸಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್​ ಯಾದವ್​ ಸ್ಪಷ್ಟಪಡಿಸಿದ್ದಾರೆ. ಗಾಯಗೊಂಡು ಸರಣಿಯಿಂದ ಹೊರಬಿದ್ದ ತಿಲಕ್​ ವರ್ಮಾ ಜಾಗದಲ್ಲಿ ಕಿಶನ್​ ಬ್ಯಾಟಿಂಗ್ ನಡೆಸಲಿದ್ದಾರೆ. 2023ರಲ್ಲಿ ಇಶಾನ್​ ಟೀಮ್​ ಇಂಡಿಯಾ ಪರ ಕೊನೆಯ ಟಿ20 ಪಂದ್ಯವನ್ನಾಡಿದ್ರು.
/filters:format(webp)/newsfirstlive-kannada/media/media_files/2025/12/25/ishan-kishan-2-2025-12-25-15-30-02.jpg)
ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​ಗೆ ಆಘಾತ
ಭಾರತದ ವಿರುದ್ಧದ T20 ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್​​ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕಲ್​ ಬ್ರೇಸ್​ವೆಲ್​ ಇಡೀ ಸರಣಿಯಿಂದಲೇ ಹೊರಗುಳಿಯೋ ಸಾಧ್ಯತೆ ಎದುರಾಗಿದೆ. ಇಂದೋರ್​ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಬ್ರೇಸ್​ವೆಲ್ ಕಾಲು ನೋವಿಗೆ ಒಳಗಾಗಿ ಮೈದಾನ ತೊರೆದಿದ್ರು. ಸಂಪೂರ್ಣ ಫಿಟ್​ ಆಗಿಲ್ಲ ಎಂದು ತಿಳಿದು ಬಂದಿದ್ದು, ಇಂದಿನ ಪಂದ್ಯದಿಂದ ಹೊರಗುಳಿಯೋದು ಬಹುತೇಕ ಕನ್​ಫರ್ಮ್​ ಆಗಿದೆ.
ಯುಪಿ ವಾರಿಯರ್ಸ್​- ಗುಜರಾತ್​ ಮುಖಾಮುಖಿ
ಮಹಿಳಾ ಪ್ರೀಮಿಯರ್​​ ಲೀಗ್​​​ನ ಇಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್​​ ಹಾಗೂ ಗುಜರಾತ್​ ಜೈಂಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ಇಂದಿನ ಪಂದ್ಯ ನಡೆಯಲಿದೆ. ಉಭಯ ತಂಡಗಳು ಸೀಸನ್​ನಲ್ಲಿ ಆಡಿದ 5 ಪಂದ್ಯಗಳಲ್ಲಿ 2 ಗೆಲುವು ದಾಖಲಿಸಿದ್ದು, 3 ಪಂದ್ಯದಲ್ಲಿ ಸೋಲುಂಡಿವೆ. 4 ಪಾಯಿಂಟ್ಸ್​ ಹೊಂದಿರೋ ಎರಡೂ ತಂಡಗಳಿಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.
ತಿಂಗಳುಗಟ್ಟಲೇ ರಿಷಭ್ ಪಂತ್​ ಮೈದಾನದಿಂದ ಔಟ್​
ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರಬಿದ್ದಿದೆ. ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಇಂಜುರಿಗೆ ತುತ್ತಾಗಿದ್ದ ರಿಷಭ್​ ಪಂತ್​ರ ಲೇಟೆಸ್ಟ್​ ರಿಪೋರ್ಟ್​​ ಹೊರಬಂದಿದೆ. ರಿಬ್​ ಮಸಲ್​ ಬಳಿ ಗಂಭೀರ ಇಂಜುರಿಗೆ ಪಂತ್​ ತುತ್ತಾಗಿರೋದು ದೃಢಪಟ್ಟಿದೆ. ಸುಮಾರು ತಿಂಗಳಿಗೂ ಅಧಿಕ ಕಾಲ ಪಂತ್ ಮೈದಾನದಿಂದ ಹೊರಗಿರಲಿದ್ದಾರೆ ಎನ್ನಲಾಗ್ತಿದೆ.
/filters:format(webp)/newsfirstlive-kannada/media/media_files/2025/08/08/rishabh_pant-5-2025-08-08-11-04-19.jpg)
ಮುಂಬೈ ತಂಡಕ್ಕೆ ವೈಷ್ಣವಿ ಶರ್ಮಾ ಎಂಟ್ರಿ
ಮಹಿಳಾ ಪ್ರೀಮಿಯರ್​ ಲೀಗ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಯುವ ಆಟಗಾರ್ತಿ ವೈಷ್ಣವಿ ಶರ್ಮಾರನ್ನ ಅದೃಷ್ಠ ಹುಡುಕಿಕೊಂಡು ಬಂದಿದೆ. ಮುಂಬೈ ತಂಡದ ಆಟಗಾರ್ತಿ ಕಮಲಿನಿ ಇಂಜುರಿಗೆ ತುತ್ತಾಗಿ ಸೀಸನ್​ನಿಂದ ಹೊರಬಿದ್ದಿದ್ದಾರೆ. ಕಮಲಿನಿ ಸ್ಥಾನಕ್ಕೆ ಬದಲಿ ಆಟಗಾರ್ತಿಯಾಗಿ ವೈಷ್ಣವಿ ಶರ್ಮಾರನ್ನ ಮುಂಬೈ ತಂಡ ಆಯ್ಕೆ ಮಾಡಿಕೊಂಡಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಪರ ಡೆಬ್ಯೂ ಮಾಡಿದ್ದ ವೈಷ್ಣವಿ ಶರ್ಮಾ, 5 ವಿಕೆಟ್​​ ಕಬಳಿಸಿ ಗಮನ ಸೆಳೆದಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us