/newsfirstlive-kannada/media/media_files/2025/12/15/csk-mini-auction-2025-12-15-18-03-28.jpg)
ಚೆನ್ನೈಸೂಪರ್​​ಕಿಂಗ್ಸ್​ ಫ್ರಾಂಚೈಸಿ, ಸದ್ಯ ಅಡ್ಡ ದಾರಿಯಲ್ಲಿ ಸಾಗ್ತಿದೆ. ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾರನ್ನ ಟ್ರೇಡ್ ಮಾಡಿ ಭಾರೀ ಸಂಚಲನ ಮೂಡಿಸಿದ್ದ ಸಿಎಸ್​​ಕೆ, ಇದೀಗ ಅರ್ಜೆಂಟ್​ ಆಗಿ ಸ್ಲಾಟ್ ಫಿಲ್ ಮಾಡಲು ಮುಂದಾಗಿದೆ. ಬಿಗ್​ಪರ್ಸ್​​ನೊಂದಿಗೆ ಮಿನಿ ಹರಾಜಿಗೆ ರೆಡಿಯಾಗಿರುವ ಚೆನ್ನೈ, ಭರ್ಜರಿ ಬೇಟೆಗೆ ಸಜ್ಜಾಗಿದೆ.
2026ರ ಐಪಿಎಲ್, ಚೆನ್ನೈ ಸೂಪರ್​ಕಿಂಗ್ಸ್ ತಂಡಕ್ಕೆ RE-SET ಇದ್ದಂತೆ. 5 ಬಾರಿ ಐಪಿಎಲ್ ಚಾಂಪಿಯನ್​ ಎನಿಸಿಕೊಂಡಿರೋ ಸಿಎಸ್​​ಕೆ, ಧೋನಿಯನ್ನ ಬಿಟ್ಟು ಮುಂದೆ ಸಾಗಲು ಹೊರಟಿದೆ. ಸ್ಟೆಬಿಲಿಟಿ ಮತ್ತು ಎಮೋಷನಲ್ ಲಾಯಲ್ಟಿಯೊಂದಿಗೆ ತಂಡ ಕಟ್ಟಿದ್ದ ಸಿಎಸ್​ಕೆ ಫ್ರಾಂಚೈಸಿ , ಇದೀಗ ಕೆಲ ಕಠಿಣ ನಿರ್ಧಾರಗಳನ್ನ ಕೈಗೊಳ್ಳಲು ಹೊರಟಿದೆ.
9 ಸ್ಲಾಟ್, 4 ವಿದೇಶಿ ಆಟಗಾರರು, ಪರ್ಸ್​ನಲ್ಲಿ 43.40 ಕೋಟಿ..!
2026ರ ಐಪಿಎಲ್​​ ಸೀಸನ್​ಗೂ ಮುನ್ನ ಸಿಎಸ್​ಕೆ 16 ಆಟಗಾರರನ್ನ ರೀಟೇನ್ ಮಾಡಿಕೊಂಡು, 11 ಆಟಗಾರರನ್ನ ರಿಲೀಸ್ ಮಾಡಿದೆ. ಸದ್ಯ ಚೆನ್ನೈ ಸೂಪರ್​ಕಿಂಗ್ಸ್​​ ಮಿನಿ ಹರಾಜನ್ನ ಎದುರು ನೋಡ್ತಿದೆ. 43.40 ಕೋಟಿ ರೂಪಾಯಿ ಬ್ಯಾಲೆನ್ಸ್ ಹೊಂದಿರುವ ಚೆನ್ನೈ, 9 ಸ್ಲಾಟ್​ಗಳನ್ನ ಫಿಲ್ ಮಾಡಬೇಕಿದೆ. 4 ವಿದೇಶಿ ಆಟಗಾರರನ್ನ ಹರಾಜಿನಲ್ಲಿ ಖರೀದಿಸೋದೇ, ಸಿಎಸ್​ಕೆ ಮುಂದಿರೋ ದೊಡ್ಡ ಸವಾಲು.​
ಸಿಎಸ್​ಕೆಗೆ ಲೋವರ್ ಆರ್ಡರ್ ಬ್ಯಾಟರ್ಸ್ ಬೇಕು..!
ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಇಲ್ಲದ ಸಿಎಸ್​ಕೆ ತಂಡಕ್ಕೆ, ಎಂ.ಎಸ್.ಧೋನಿಗೆ ಸಪೋರ್ಟ್​ ಮಾಡುವಂತಹ ಲೋವರ್ ಆರ್ಡರ್ ಬ್ಯಾಟರ್ಸ್ ಬೇಕಾಗಿದ್ದಾರೆ. ಸದ್ಯ ಸಿಎಸ್​ಕೆ ಇಂಗ್ಲೆಂಡ್​ನ ಲಿಯಾಮ್ ಲಿವಿಂಗ್​ಸ್ಟೋನ್ ಮತ್ತು ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್​ ಮೇಲೆ ಕಣ್ಣಿಟ್ಟಿದೆ.
ಫ್ರಂಟ್​ಲೈನ್ ಸ್ಪಿನ್ನರ್ ಮೇಲೆ ಚೆನ್ನೈ ಸೂಪರ್​ಕಿಂಗ್ಸ್​ ಕಣ್ಣು..!
ಆರ್.ಅಶ್ವಿನ್ ನಿವೃತ್ತಿ ಮತ್ತು ರವೀಂದ್ರ ಜಡೇಜಾ ಟ್ರೇಡ್ ಆದ ಕಾರಣ, ಚೆನ್ನೈ ಸೂಪರ್​ಕಿಂಗ್ಸ್​ಗೆ ಫ್ರಂಟ್​ಲೈನ್ ಸ್ಪಿನ್ನರ್ ಅವಶ್ಯಕತೆ ಇದೆ. ಆಘ್ಘಾನಿಸ್ತಾನದ ನೂರ್ ಅಹ್ಮದ್​ ಮತ್ತು ಶ್ರೇಯಸ್ ಗೋಪಾಲ್ ತಂಡದಲ್ಲಿದ್ರೂ, ಅನುಭವಿ ರಾಹುಲ್ ಚಹರ್ ಮತ್ತು ರವಿ ಬಿಷ್ನೋಯ್​​​ರನ್ನ ಹರಾಜಿನಲ್ಲಿ ಖರೀದಿಸುವ ಪ್ಲಾನ್​ನಲ್ಲಿದೆ.
ವಿದೇಶಿ ಪೇಸರ್​ ಮೇಲೆ ಚೆನ್ನೈ ಕಣ್ಣು..! ಮತ್ತೆ ಪತಿರಣ ರಿಟರ್ನ್ಸ್​.?
ನಾಥನ್ ಎಲೀಸ್, ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಫ್ರಂಟ್​ಲೈನ್ ಪೇಸರ್​ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಎಲೀಸ್​ಗೆ ಜೋಡಿ ಹುಡುಕೋದ್ರಲ್ಲಿ, ಚೆನ್ನೈ ಬ್ಯುಸಿಯಾಗಿದೆ. ಬಾಂಗ್ಲಾದ ಮುಸ್ತಾಫಿಝುರ್ ರಹಮಾನ್ ಮತ್ತು ಆಘ್ಘನ್​​ನ ನವೀನ್​​-ಉಲ್-ಹಕ್ ಚೆನ್ನೈ ಕಂಡೀಷನ್ಸ್​ಗೆ ಸಖತ್ ಸೂಟ್ ಆಗೋದ್ರಿಂದ, ಇಬ್ಬರ ಹೆಸರನ್ನ ಲಿಸ್ಟ್​ನಲ್ಲಿ ಸೇರಿಸಿಕೊಂಡಿದೆ. ಒಂದು ವೇಳೆ ಹರಾಜಿನಲ್ಲಿ ಲಂಕನ್ ವೇಗಿ ಮಥೀಶ ಪತಿರಣ ಚೀಪ್​ ಆಗಿ ಸಿಕ್ಕಿದ್ರೆ, ಮತ್ತೆ ತಂಡಕ್ಕೆ ಕರೆತರಲು ಸಿಎಸ್​ಕೆ ಮುಂದಾಗಲಿದೆ.
ಬ್ಯಾಕ್ ​ಅಪ್ ಇಂಡಿಯನ್ ಬ್ಯಾಟರ್ಸ್​​​ ಹುಡುಕಾಟ..!
ಯಂಗ್ ಆಯುಷ್ ಮ್ಹಾತ್ರೆ ಸಿಎಸ್​ಕೆ ತಂಡದ ಬೆಸ್ಟ್ ಟಾಪ್ ಆರ್ಡರ್ ಆಪ್ಶನ್. ಆದ್ರೆ ಮ್ಹಾತ್ರೆ ಕನ್ಸಿಸ್ಟೆನ್ಸಿ, ಫ್ರಾಂಚೈಸಿಗೆ ತೃಪ್ತಿ ತಂದಿಲ್ಲ. ಸದ್ಯ ಪೃಥ್ವಿ ಶಾ ಮತ್ತು ವೆಂಕಟೇಶ್ ಅಯ್ಯರ್​​​​​​​​​​​​​ ಇಬ್ಬರೂ ಹರಾಜಿನಲ್ಲಿ ಲಭ್ಯರಿದ್ದಾರೆ. ವೆಂಕಿ ಅಯ್ಯರ್ ಮಿಡಲ್ ಆರ್ಡರ್​​​​​​​ಗೆ ಬೆಸ್ಟ್ ಆಪ್ಶನ್ ಆಗಿರೋದ್ರಿಂದ, ಸಿಎಸ್​​ಕೆ ಇವರ ಕಡೆ ಗಮನ ಹರಿಸೋದು ಪಕ್ಕಾ..!
/filters:format(webp)/newsfirstlive-kannada/media/media_files/2025/12/15/csk-mini-auction-1-2025-12-15-18-05-08.jpg)
ಒಟ್ನಲ್ಲಿ..! ಆಟಗಾರರ ಖರೀದಿಯಲ್ಲಿ ಸಿಎಸ್​​ಕೆ ಫ್ರಾಂಚೈಸಿ ಮಾಲೀಕರಿಗೆ ಹೇಳಿ ಕೊಡೋ ಆಗಿಲ್ಲ. ಬೇಕು ಅಂದ್ರೆ ಎಷ್ಟೇ ಕೋಟಿ ಖರ್ಚಾದ್ರೂ ಖರೀಸಿರೋ ಮಾಲೀಕರು, ತಂಡಕ್ಕೆ ಫಿಟ್ ಆಗದ ಆಟಗಾರರಿಗೆ, ನಯಾಪೈಸೆ ಕೂಡ ಖರ್ಚು ಮಾಡೋದಿಲ್ಲ.
ಗಂಗಾಧರ್. ಜಿ.ಎಸ್. ಸ್ಪೋರ್ಟ್ಸ್​ ಬ್ಯೂರೋ, ನ್ಯೂಸ್​​ ಫಸ್ಟ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us