/newsfirstlive-kannada/media/media_files/2025/10/04/dhruv-jurel-2025-10-04-12-59-45.jpg)
ವೆಸ್ಟ್​ ಇಂಡೀಸ್​ ಸರಣಿ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ಒಂದು ಸಣ್ಣ ಆತಂಕವಿತ್ತು. ಮ್ಯಾಚ್​ ವಿನ್ನರ್​ ರಿಷಭ್​ ಪಂತ್​ ಅಲಭ್ಯತೆ ತಂಡಕ್ಕೆ ಕಾಡುತ್ತೆ ಅನ್ನೋ ಟಾಕ್​ ಇತ್ತು. ಆದ್ರೆ ಆ ಚಿಂತೆ ಈಗ ದೂರಾಗಿದೆ. ರಿಷಭ್​​ ಪಂತ್​ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲೇ ಅನ್ನೋ ಸಂದೇಶ ಯಂಗ್​ ಬ್ಯಾಟರ್​​​ ದೃವ್​​ ಜುರೇಲ್​ ಬ್ಯಾಟ್​ನಿಂದ ರವಾನೆಯಾಗಿದೆ.
ಕೆರಬಿಯನ್​ ಕದನದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳದ್ದೇ ಕಾರುಬಾರು. ಇಂಡಿಯನ್​ ಬ್ಯಾಟರ್​ಗಳ ಆಟಕ್ಕೆ ವಿಂಡೀಸ್​ ಬೌಲಿಂಗ್​ ಅಟ್ಯಾಕ್​ ಉಡೀಸ್​ ಆಗಿ ಹೋಗಿದೆ. 2ನೇ ದಿನದಾಟದಲ್ಲಿ ಕೆ.ಎಲ್​ ರಾಹುಲ್​, ರವೀಂದ್ರ ಜಡೇಜಾ, ದೃವ್​ ಜುರೇಲ್​ ಶತಕದ ಅಬ್ಬರಕ್ಕೆ ವಿಂಡೀಸ್​​ ಪಡೆ ನಲುಗಿಬಿಡ್ತು. ಅನುಭವಿಗಳಾದ ರಾಹುಲ್​, ಜಡೇಜಾ ಆಟ ಬಿಡಿ. ಯುವ ಆಟಗಾರ ಜುರೇಲ್​ ಜಬರ್ದಸ್ತ್​​​ ಇನ್ನಿಂಗ್ಸ್​ ಕ್ರಿಕೆಟ್​ ಲೋಕದ ಕಣ್ಮನ ಸೆಳೆದಿದೆ.
ಅಹ್ಮದದಾಬಾದ್​ ಟೆಸ್ಟ್​ನಲ್ಲಿ ಜುರೇಲ್​ ಜಬರ್ದಸ್ತ್​​ ಆಟ
patience, technic, temperament.. ದೃವ್​​ ಜುರೇಲ್​ ವೆಸ್ಟ್​ ಇಂಡೀಸ್​ ವಿರುದ್ಧ ಕಟ್ಟಿದ ಶತಕದ ಇನ್ನಿಂಗ್ಸ್​ನಲ್ಲಿ ಟೆಸ್ಟ್​​ ಕ್ರಿಕೆಟ್​​​ ಟೆಕ್ಸ್ಟ್​​ಬುಕ್​ನ ಈ ಬೇಸಿಕ್​ ಪ್ರಿನ್ಸಿಪಲ್ಸ್ ಇದ್ವು. ಒದೊಂದು ಎಸೆತವನ್ನ ಎದುರಿಸಿದಾಗಲೂ ಯುವ ಆಟಗಾರನ ಕಾನ್ಫಿಡೆನ್ಸ್​ ಎದ್ದು ಕಾಣ್ತಿತ್ತು. ತಾಳ್ಮೆಯಿಂದ ಡಿಫೆಂಡ್​ ಮಾಡ್ತಿದ್ದ ಈತ, ಅಷ್ಟೇ ಅಗ್ರೆಸ್ಸಿವ್​ ಆಗಿ ಬೌಂಡರಿಗಳನ್ನೂ ಬಾರಿಸಿ ಬೌಲರ್ಸ್​​​ ಕಂಗೆಡಿಸಿಬಿಟ್ಟ.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ದೃವ್​ ಜುರೇಲ್ ಆರಂಭದಲ್ಲಿ ಕಂಪ್ಲೀಟ್​ ತಾಳ್ಮೆಯ ಆಟವಾಡಿದ್ರು. ಸಿಂಗಲ್​, ಟೂಡಿಗಳಲ್ಲೇ ರನ್​ಗಳಿಸ್ತಿದ್ದ ಜುರೇಲ್​ ಮೊದಲ ಬೌಂಡರಿ ಬಾರಿಸಿದ್ದು ಎದುರಿಸಿದ 38 ಎಸೆತದಲ್ಲಿ. ಸೆಟಲ್​ ಆಗೋದು ಅಷ್ಟು ಟೈಮ್​ ತೆಗೆದುಕೊಂಡ ದೃವ್​ ಜುರೇಲ್​ ಸೆಟಲ್​ ಆದ ಮೇಲೆ ವಿಂಡೀಸ್​​​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. 2 ಸಿಕ್ಸ್, 5 ಬೌಂಡರಿ ಬಾರಿಸಿದ ಜುರೇಲ್​, 91 ಎಸೆತಕ್ಕೆ ಅರ್ಧಶತಕ ಪೂರೈಸಿ ತಂದೆಗೆ ಅರ್ಪಿಸಿದ್ರು.
ದೃವ್​​ ಜುರೇಲ್​ ಸಂಭ್ರಮ​
ಅರ್ಧಶತಕ ಸಿಡಿಸಿದ ಬಳಿಕ ಮತ್ತಷ್ಟು ಸೊಗಸಾದ ಬ್ಯಾಟಿಂಗ್​ ನಡೆಸಿದ ದೃವ್​ ಜುರೇಲ್​ ಶತಕದ ಗಡಿ ತಲುಪೋದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲೇ ಇಲ್ಲ. 190 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್​​ ಶತಕ ಪೂರೈಸಿದ್ರು. 2 ಸಿಕ್ಸ್​, 12 ಬೌಂಡರಿಗಳ ನೆರವಿನಿಂದ ಸೆಂಚುರಿ ತಲುಪುತ್ತಿದ್ದಂತೆ ಸ್ಪೆಷಲ್​ ಸೆಲಬ್ರೇಷನ್​ ಮಾಡಿ ಯಂಗ್​​ ವಿಕೆಟ್​ ಕೀಪರ್​ ಸಂಭ್ರಮಿಸಿದರು.
ಐವರಿಗೆ ಸಂಕಟ
ದೃವ್​​ ಜುರೇಲ್​ಗೆ ಆಡೋ ಅವಕಾಶ ಸಿಕ್ಕಿದ್ದೇ ಅದೃಷ್ಟದಲ್ಲಿ. ಖಾಯಂ ವಿಕೆಟ್​ ಕೀಪರ್​ ರಿಷಭ್​ ಪಂತ್​ ಅಲಭ್ಯತೆಯಲ್ಲಿ ಅನಿವಾರ್ಯವಾಗಿ ಟೀಮ್​ ಮ್ಯಾನೇಜ್​ಮೆಂಟ್​​​ ಜುರೇಲ್​ಗೆ ಚಾನ್ಸ್ ನೀಡ್ತು. ಸಿಕ್ಕ ಅವಕಾಶವನ್ನ ದೃವ್​ ಜುರೇಲ್​ ಎರಡೂ ಕೈಗಳಲ್ಲಿ ಬಾಚಿಕೊಂಡಿದ್ದಾರೆ. ಇದೀಗ ಜುರೇಲ್​ ಜಬರ್ದಸ್ತ್​ ಆಟ ಇದೀಗ ರಿಷಭ್​ ಪಂತೂ ಸೇರಿ ಐವರರು ಆಟಗಾರರಿಗೆ ಸಂಕಷ್ಟ ತಂದಿಟ್ಟಿದೆ.
ಪಂತ್​, ಪಡಿಕ್ಕಲ್​ ಸ್ಥಾನಕ್ಕೆ ಕುತ್ತು ತಂದ ಜುರೇಲ್​
ಇಂಗ್ಲೆಂಡ್​ ಸರಣಿ ಬಳಿಕ ತಂಡದಿಂದ ಹೊರಬಿದ್ದಿರೋ ಪಂತ್, ಮುಂದಿನ ಸೌತ್​ ಆಫ್ರಿಕಾ ಎದುರಿನ ಟೆಸ್ಟ್​ ಸರಣಿಗೂ ವಾಪಾಸ್ಸಾಗೋದು ಅನುಮಾನ. ಪಂತ್​ ಅಲಭ್ಯತೆಯಲ್ಲಿ ಜುರೇಲ್​ಗೆ ಸ್ಥಾನ ಕನ್ಫರ್ಮ್​. ಮುಂದಿನ ಪಂದ್ಯಗಳಲ್ಲೂ ಜುರೇಲ್​ ಜಬರ್ದಸ್ತ್​ ಆಟ ಮುಂದುವರೆಸಿದ್ರೆ, ಪಂತ್​ಗೆ ಸಂಕಷ್ಟ ತಪ್ಪಿದ್ದಲ್ಲ. ಜುರೇಲ್​ ಮಿಡಲ್​ ಆರ್ಡರ್​​ನಲ್ಲಿ ಮಿಂಚಿರೊದ್ರೀಂದ ಕನ್ನಡಿಗ ದೇವದತ್​​ ಪಡಿಕ್ಕಲ್​ ಮುಂದೆಯೊ ಬೆಂಚ್​​ಗೆ ಸೀಮಿತವಾಗಿರಬೇಕಾದ ಪರಿಸ್ಥಿತಿ ಸದ್ಯಕ್ಕಂತೂ ಇದೆ.
ಅಯ್ಯರ್, ಸರ್ಫರಾಜ್​ಗೆ ಡೋರ್​ ಕ್ಲೋಸ್​?
ಶ್ರೇಯಸ್​ ಅಯ್ಯರ್​, ಸರ್ಫರಾಜ್​ ಖಾನ್​ ಈಗಾಗಲೇ ಟೆಸ್ಟ್​ ತಂಡದಿಂದ ಹೊರಬಿದ್ದಿದ್ದಾರೆ. ಕಮ್​ಬ್ಯಾಕ್​ಗೆ ಶತಪ್ರಯತ್ನ ಮಾಡ್ತಿದ್ದರೂ ಸೆಲೆಕ್ಷನ್​ ಕಮಿಟಿ ಮಾತ್ರ ಆಯ್ಕೆಗೆ ಪರಿಣಿಸ್ತಿಲ್ಲ. ಇದೀಗ ದೇವದತ್​ ಪಡಿಕ್ಕಲ್​ ಮಿಂಚಿರೋದ್ರಿಂದಾಗಿ ಸರ್ಫರಾಜ್ ಖಾನ್, ಶ್ರೇಯಸ್​​ ಅಯ್ಯರ್​ಗೆ ಪ್ಲೇಯಿಂಗ್​ ಇಲೆವೆನ್​ ಬಿಡಿ, ತಂಡದಲ್ಲೂ ಸ್ಥಾನ ಸಿಗೋದು ಅನುಮಾನ. ಮುಂದಿನ ದಿನಗಳಲ್ಲಿ ಜುರೇಲ್​ನ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ಪರಿಗಣಿಸೋ ಸಾಧ್ಯತೆಯೆ ದಟ್ಟವಾಗಿದೆ.
3ನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್​ ಸತತ ವೈಫಲ್ಯ ಅನುಭವಿಸ್ತಿದ್ದಾರೆ. ನಂಬರ್​ 3 ಸ್ಲಾಟ್​​ನಲ್ಲಿ ಸಕ್ಸಸ್​ ಕಂಡಿದ್ದ ಶುಭ್​ಮನ್​ ಗಿಲ್​ ಶಿಫ್ಟ್​ ಆಗೋ ಸಾಧ್ಯತೆಯೂ ಇದೆ. ಹಾಗೇನಾದ್ರೂ ದೃವ್​ ಜುರೇಲ್​​ ನಂಬರ್​ 4 ಸ್ಲಾಟ್​ ಖಾಯಂ ಆಟಗಾರನಾಗಲಿದ್ದಾರೆ. ಆಗ ಸಾಯಿ ಸುದರ್ಶನ್​ ಹೊರಬೀಳಲಿದ್ದಾರೆ. ಒಟ್ಟಿನಲ್ಲಿ ದೃವ್​ ಜುರೇಲ್​ ಸಿಡಿಸಿರೋ ಒಂದು ಶತಕ ಐವರು ಆಟಗಾರರಿಗೆ ಸಂಕಷ್ಟ ತಂದಿಟ್ಟಿದೆ. ಮುಂದಿನ ಪಂದ್ಯಗಳಲ್ಲೂ ಜುರೇಲ್ ಅಬ್ಬರ ಮುಂದುವರೆದ್ರೆ ಐವರಲ್ಲಿ ಒಬ್ಬರದಾದ್ರೂ ಕರಿಯರ್​ಗೆ ಕುತ್ತು ಬರೋದ್ರಲ್ಲಿ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ