/newsfirstlive-kannada/media/media_files/2025/10/10/rohit_sharma_tesla_car-2025-10-10-16-14-03.jpg)
ಟೀಮ್ ಇಂಡಿಯಾದ ಒಡಿಐ ಕ್ಯಾಪ್ಟನ್​ ಹಾಗೂ ಲೆಜೆಂಡರಿ ಬ್ಯಾಟ್ಸ್​ಮನ್ ರೋಹಿತ್ ಶರ್ಮಾ ಅವರು ಮುಂಬೈನಲ್ಲಿ ಟೆಸ್ಲಾ ಕಾರನ್ನು ಖರೀದಿ ಮಾಡಿದ್ದಾರೆ. ಸದ್ಯ ಈ ಸಂಬಂಧ ಟೆಸ್ಲಾ ಕಾರನ್ನು ಟೆಸ್ಟ್ ಡ್ರೈವ್ ಮಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ ಅವರು ಎಲಾನ್ ಮಸ್ಕ್​ ಕಂಪನಿಯ ಐಷಾರಾಮಿ ಟೆಸ್ಲಾ ಕಾರನ್ನು ಖರೀದಿ ಮಾಡಿದ್ದಾರೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ರಸ್ತೆಯಲ್ಲಿರುವ ಕಂಪನಿಯ ಟೆಸ್ಲಾ ಕಾರನ್ನು ರೋಹಿತ್ ಶರ್ಮಾ ಟೆಸ್ಟ್​ ಡ್ರೈವ್​ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಎಲಾನ್ ಮಸ್ಕ್​ ಕೂಡ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ತನಿಷಾ ಕುಪ್ಪಂಡ ಯಾವ ಉಡುಪು ಧರಿಸಿದರೂ ಸೂಪರ್​.. ಪಿಂಕ್ ಡ್ರೆಸ್​ನಲ್ಲಿ ಹೇಗಿದ್ದಾರೆ ನಟಿ?
ಟೆಸ್ಲಾ ಕಾಮಿಕ್ಸ್​ ಎಕ್ಸ್​ ಟಕೌಂಟ್​ನಲ್ಲಿ ರೋಹಿತ್ ಶರ್ಮಾ ವಿಡಿಯೋ ಶೇರ್ ಮಾಡಲಾಗಿದ್ದು ಇದನ್ನು ಎಲಾನ್ ಮಸ್ಕ್​ ಅವರು ರೀ ಟ್ವೀಟ್ ಮಾಡಿದ್ದಾರೆ. ಇನ್ನು ಇದಕ್ಕೆ ಈ ರೀತಿ ಟ್ಯಾಗ್ ಲೈನ್ ಬರೆಯಲಾಗಿದೆ. ಈವರೆಗೂ ಟೆಸ್ಲಾ ಕಾರು ಕಂಪನಿ ಯಾಕೆ ಜಾಹೀರಾತಿ ನೀಡಿಲ್ಲ ಗೊತ್ತಾ?. ರೋಹಿತ್ ಶರ್ಮಾ ಅವರಿಗೆ ಇನ್​ಸ್ಟಾದಲ್ಲಿ 45 ಮಿಲಿಯನ್​ ಫಾಲೋವರ್ಸ್ ಇದ್ದಾರೆ. ಸದ್ಯ ಇದೀಗ ಅವರು ಟೆಸ್ಲಾ ಕಾರನ್ನು ಕೊಂಡು ಕೊಂಡಿದ್ದಾರೆ ಎಂದು ಬರೆಯಲಾಗಿದೆ.
ಇನ್ನು ರೋಹಿತ್ ಶರ್ಮಾ ಟೆಸ್ಲಾ ಮಾಡೆಲ್ ವೈ (Tesla Model Y) ಕಾರನ್ನು ಖರೀದಿ ಮಾಡಿದ್ದು ಇದರ ಬೆಲೆ ಆನ್​ ರೋಡ್​ ಇನ್ ಮುಂಬೈ 59.89 ಲಕ್ಷ ರೂಪಾಯಿ ಆಗಿದೆ. ಈ ಟೆಸ್ಲಾ ಕಾರಿನ ನಂಬರ್ MH01 FB 3015 ಆಗಿದ್ದು ಇದರಲ್ಲಿ ರೋಹಿತ್ ಅವರ ಮಗಳು ಹಾಗೂ ಮಗನ ಹುಟ್ಟಿದ ದಿನಾಂಕ ಇದೆ. ಹೀಗಾಗಿ ರೋಹಿತ್ ಶರ್ಮಾ ಫ್ಯಾಮಿಲಿಗೆ ಈ ಕಾರು ಸೆಂಟಿಮೆಂಟ್ ಅಂತಾನೇ ಹೇಳಬಹುದು. ರೋಹಿತ್ ಮಗಳು ಸಮೈರಾ ಬರ್ತ್​ಡೇ 2018ರ ಡಿಸೆಂಬರ್ 30 ಆದ್ರೆ, ಆಹಾನ್ ಹುಟ್ಟಿದ ದಿನಾಂಕ 2024ರ ನವೆಂಬರ್ 15 ಆಗಿದೆ.
This is why Tesla doesn’t need to advertise - Rohit Sharma (captain of India’s national cricket team), who has 45M followers on Instagram, just bought a new Tesla Model Ypic.twitter.com/m02awSltMRhttps://t.co/XQSLYyo4XZ
— Teslaconomics (@Teslaconomics) October 9, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ