/newsfirstlive-kannada/media/media_files/2025/08/05/gautam_gambhir-1-2025-08-05-15-28-14.jpg)
ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಯಾವಾಗಲೂ ನಗು ಮುಖದಿಂದ ಇರುವವರೇ ಅಲ್ಲ. ಯಾವಾಗಲೂ ಗಂಭೀರವಾದ ಮುಖ ಇಟ್ಟುಕೊಂಡು ತಂಡದಲ್ಲಿ ಕೋಚ್ ಬೆರೆಯುತ್ತಿದ್ದರು. ಆದರೆ ನಿನ್ನೆ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್ ಅವರು ಸೆಲೆಬ್ರೆಷನ್ ಮಾಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅವರಲ್ಲಿ ಅಷ್ಟೊಂದು ಖುಷಿಯನ್ನು ಇದೇ ಮೊದಲ ಬಾರಿಗೆ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ನೋಡಿದ್ದಾರೆ ಎನ್ನಬಹುದು.
ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದ ಕೊನೆ ದಿನದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್ನಲ್ಲಿದ್ದ ಹೆಡ್ ಕೋಚ್ ಗೌತಮ್ ಗಂಭೀರ್ ಅಗ್ರೆಸ್ಸಿವ್ ಆಗಿ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.
ಇದನ್ನೂ ಓದಿ: ಸಿರಾಜ್, ಪ್ರಸಿದ್ಧ್ ಕೃಷ್ಣ ಬೌಲಿಂಗ್ ದರ್ಬಾರ್, ಟೀಮ್ ಇಂಡಿಯಾಕ್ಕೆ ಭರ್ಜರಿ ಗೆಲವು.. ಸರಣಿ ಸಮಬಲ
ಮೈದಾನದಲ್ಲಿ ಗಿಲ್ ಪಡೆ ಜಯ ಸಾಧಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್ ಮಾಡುತ್ತ ಮಾರ್ನ್ ಮಾರ್ಕೆಲ್ ಅವರ ಮೇಲೆ ಜಂಪ್ ಮಾಡಿ ಖುಷಿ ಪಟ್ಟರು. ಅಲ್ಲಿದ್ದ ಎಲ್ಲರನ್ನು ತಬ್ಬಿಕೊಂಡು, ಕೈಕುಲುಕಿ ಸಂತಸಪಟ್ಟರು. ಇದೇ ವೇಳೆ ಗೌತಮ್ ಗಂಭೀರ್ ಕಣ್ಣಿನಿಂದ ನೀರು ಕೂಡ ಬಂತು. ತುಂಬಾ ಭಾವನಾತ್ಮಕರಾಗಿದ್ದ ಗಂಭೀರ್ ಅತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೋಚ್ ಈ ರೀತಿ ಕಣ್ಣೀರು ಹಾಕಿದ್ದು ಇದೇ ಮೊದಲ ಬಾರಿ ಆಗಿದೆ.
ಅಂತಿಮ ಟೆಸ್ಟ್ನಲ್ಲಿ ಜಯಗಳಿಸಿದ ಬಳಿಕ ಗೌತಮ್ ಗಂಭೀರ್, ಇಂಗ್ಲೆಂಡ್ ಹೆಡ್ಕೋಚ್ ಬ್ರೆಂಡನ್ ಮೆಕಲಮ್ ಪರಸ್ಪರ ಅಭಿನಂದನೆ ಸಲ್ಲಿಸಿದ್ದಾರೆ. ಗೆಲುವಿನ ಬಳಿಕ ಡ್ರೆಸ್ಸಿಂಗ್ರೂಮ್ನಿಂದ ನೇರವಾಗಿ ಮೆಕಲಮ್ ಬಳಿ ತೆರಳಿರೋ ಗಂಭೀರ್ ಹಸ್ತಲಾಘವ ನೀಡಿದ್ದಾರೆ. ಆ ಬಳಿಕ ಇಬ್ಬರೂ ತಬ್ಬಿಕೊಂಡಿದ್ದಾರೆ. ಹೆಡ್ಕೋಚ್ಗಳ ಸಮಾಗಮದ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
RAW EMOTIONS AT OVAL BY INDIAN TEAM. 🥹❤️
— Johns. (@CricCrazyJohns) August 4, 2025
THIS IS INDIAN TEST CRICKET...!!! pic.twitter.com/oVnPfvbJxs
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ