Advertisment

ಕ್ರಿಕೆಟರ್‌ ರಿಚಾ ಘೋಷ್‌ಗೆ ಡಿವೈಎಸ್ಪಿ ಹುದ್ದೆ : ಸಿಲಿಗುರಿ ಎಸಿಪಿ ಆಗಿ ಅಧಿಕಾರ ಸ್ವೀಕಾರ

ಮಹಿಳಾ ವಿಶ್ವಕಪ್ ನಲ್ಲಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಹುದ್ದೆ ನೀಡಿದೆ. ಸಿಲಿಗುರಿ ಎಸಿಪಿ ಆಗಿ ರಿಚಾ ಘೋಷ್ ಅಧಿಕಾರ ವಹಿಸಿಕೊಂಡಿದ್ದಾರೆ. ರಿಚಾ ಘೋಷ್ ಗೆ ಈ ಹಿಂದೆ ರಾಜ್ಯ ಸರ್ಕಾರ ಸನ್ಮಾನಿಸಿತ್ತು.

author-image
Chandramohan
Richa ghosh took charge as ACP IN siliguri

ಸಿಲಿಗುರಿ ಎಸಿಪಿ ಆಗಿ ಅಧಿಕಾರ ವಹಿಸಿಕೊಂಡ ರಿಚಾ ಘೋಷ್!

Advertisment
  • ಸಿಲಿಗುರಿ ಎಸಿಪಿ ಆಗಿ ಅಧಿಕಾರ ವಹಿಸಿಕೊಂಡ ರಿಚಾ ಘೋಷ್!
  • ಮಹಿಳಾ ಕ್ರಿಕೆಟರ್ ರಿಚಾ ಘೋಷ್ ರನ್ನು ಡಿವೈಎಸ್ಪಿ ಆಗಿ ನೇಮಿಸಿದ ಪಶ್ಚಿಮ ಬಂಗಾಳ ಸರ್ಕಾರ

ಭಾರತ ತಂಡಕ್ಕೆ ಮಹಿಳಾ  ವಿಶ್ವಕಪ್ ಗೆದ್ದುಕೊಟ್ಟ  ರಿಚಾ ಘೋಷ್ ಬುಧವಾರ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಹುದ್ದೆಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ . ಕಳೆದ ತಿಂಗಳು ಭಾರತ ಮಹಿಳಾ ತಂಡವು ತಮ್ಮ ಮೊದಲ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಅವರನ್ನು  ಸಿಲಿಗುರಿ ಕಮಿಷನರೇಟ್‌ನಲ್ಲಿ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಆಗಿ ನೇಮಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆಯು  ಟ್ವೀಟ್ ಮಾಡಿದೆ. "ರಿಚಾ, ಪಶ್ಚಿಮ ಬಂಗಾಳ ಪೊಲೀಸ್ ಕುಟುಂಬಕ್ಕೆ ಸ್ವಾಗತ. ಅನೇಕ ಶುಭಾಶಯಗಳು ಮತ್ತು ಅಭಿನಂದನೆಗಳೊಂದಿಗೆ," ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. 

Advertisment



ವಿಶ್ವಕಪ್ ವಿಜೇತ ರಿಚಾ ಘೋಷ್ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಸಿಲಿಗುರಿ ಎಸಿಪಿಯಾಗಿ ಭಾರತದ ವಿಶ್ವಕಪ್ ವಿಜೇತ ಆಟಗಾರ್ತಿ ರಿಚಾ ಘೋಷ್ ಬುಧವಾರ ಅಧಿಕೃತವಾಗಿ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಹುದ್ದೆಯಲ್ಲಿ ಸೇರ್ಪಡೆಗೊಂಡಿದ್ದಾರೆ. 

Richa ghosh took charge as ACP IN siliguri (1)



ಭಾರತದ ಮಹಿಳಾ ವಿಶ್ವಕಪ್ ಗೆಲುವಿನಲ್ಲಿ ರಿಚಾ ಅವರ ನಿರ್ಣಾಯಕ ಕೊಡುಗೆಗಳನ್ನು ಪರಿಗಣಿಸಿ, ಪಶ್ಚಿಮ ಬಂಗಾಳ ಸರ್ಕಾರವು ಅವರನ್ನು ರಾಜ್ಯದಲ್ಲಿ ಡಿಎಸ್‌ಪಿಯಾಗಿ ನೇಮಕ ಮಾಡುವುದಾಗಿ ಘೋಷಿಸಿತ್ತು.
ವಿಕೆಟ್ ಕೀಪರ್ ಆಗಿ ಸ್ಟಂಪ್‌ಗಳ ಹಿಂದೆ ಮತ್ತು ಬ್ಯಾಟರ್‌ ಆಗಿ ತಮ್ಮ ಪವರ್-ಹಿಟ್ಟಿಂಗ್ ಹೊಡೆತಗಳ ಮೂಲಕ ಭಾರತ ತಂಡಕ್ಕೆ ಗೆಲುವು ಅನ್ನು ತಂದುಕೊಟ್ಟರು.

Advertisment


ವಿಶ್ವ ಕಪ್  ಟೂರ್ನಿಯಲ್ಲಿ ರಿಚಾ ಘೋಷ್‌ ಪ್ರಮುಖ ಪಾತ್ರಕ್ಕಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ) ಅವರನ್ನು ಸನ್ಮಾನಿಸಿತು.

ಮಹಿಳಾ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು (12) ಬಾರಿಸಿದ ವೆಸ್ಟ್ ಇಂಡೀಸ್‌ನ ಹಿಟ್ಟರ್ ಡಿಯಾಂಡ್ರಾ ಡಾಟಿನ್ ಅವರೊಂದಿಗೆ ಟೈ ಮಾಡಿಕೊಂಡಿದ್ದ ಪಂದ್ಯಾವಳಿಯಲ್ಲಿನ ಸ್ಟಾರ್ ಆಟಗಾರ್ತಿಯ ಪ್ರದರ್ಶನಕ್ಕಾಗಿ ಅವರನ್ನು ಗೌರವಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಎಬಿ ಅಧ್ಯಕ್ಷ ಸೌರವ್ ಗಂಗೂಲಿ ಐಕಾನಿಕ್ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಹಾಜರಿದ್ದರು.

ಗಂಗೂಲಿ,  ರಿಚಾ ಅವರಿಗೆ 34 ಲಕ್ಷ ರೂಪಾಯಿ ಬಹುಮಾನ ಮತ್ತು ಚಿನ್ನದ ಬ್ಯಾಟ್ ನೀಡಿದರು. ಭಾರತೀಯ ಮಹಿಳಾ ಕ್ರಿಕೆಟ್‌ನ ವೇಗದ ದಂತಕಥೆ ಜೂಲನ್ ಗೋಸ್ವಾಮಿ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisment

ವಿಶ್ವಕಪ್‌  ಟೂರ್ನಮೆಂಟ್‌ನಲ್ಲಿ, ರಿಚಾ ಎಂಟು ಇನ್ನಿಂಗ್ಸ್‌ಗಳಲ್ಲಿ 39.16 ಸರಾಸರಿ ಮತ್ತು 133 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 235 ರನ್ ಗಳಿಸಿದರು.

Richa ghosh took charge as ACP IN siliguri (2)




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Women cricketer Richa ghosh appointed as Dysp
Advertisment
Advertisment
Advertisment