ಫಸ್ಟ್ ಓವರ್,​ ಫಸ್ಟ್ ಬಾಲ್​, ಫಸ್ಟ್ ವಿಕೆಟ್ ಡಕೌಟ್​​.. ಪಾಂಡ್ಯ, ಬೂಮ್ರಾ ಬೌಲಿಂಗ್​ಗೆ ನಡುಗಿದ ಪಾಕ್

ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್​ನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮೊದಲ ವಿಕೆಟ್​ ಆನ್ನು ಬೇಟೆಯಾಡಿದ್ದಾರೆ. ತಂಡದ ಮೊದಲ ಓವರ್​ನಲ್ಲಿ ಮೊದಲ ಬಾಲ್​, ಮೊದಲ ರನ್​ಗೆ, ಮೊದಲ ವಿಕೆಟ್​ ಅನ್ನು ಹಾರ್ದಿಕ್ ಪಾಂಡ್ಯ ಡಕೌಟ್​ ಮಾಡಿದ್ದಾರೆ.

author-image
Bhimappa
PANDYA_TILAK
Advertisment

ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್​ನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಮೊದಲ ವಿಕೆಟ್​ ಆನ್ನು ಬೇಟೆಯಾಡಿದ್ದಾರೆ. ತಂಡದ ಮೊದಲ ಓವರ್​ನಲ್ಲಿ ಮೊದಲ ಬಾಲ್​, ಮೊದಲ ರನ್​ಗೆ, ಮೊದಲ ವಿಕೆಟ್​ ಅನ್ನು ಹಾರ್ದಿಕ್ ಪಾಂಡ್ಯ ಡಕೌಟ್​ ಮಾಡಿದ್ದಾರೆ. 

ದುಬೈನ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾ ಕಪ್​ನ 6ನೇ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡುತ್ತಿದೆ. ಪಾಕ್ ಪರ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ್ದ ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್ ಜೋಡಿ ಆರಂಭದಲ್ಲೇ ಆಘಾತಕ್ಕೆ ಒಳಗಾಗಿದೆ.

ಇದನ್ನೂ ಓದಿ: ಸೂರ್ಯಕುಮಾರ್​ಗೆ ಕೈಕೊಟ್ಟ ಟಾಸ್​.. ಟೀಮ್ ಇಂಡಿಯಾದ ಪ್ಲೇಯಿಂಗ್-11, ಯಾರಿಗೆ ಅದೃಷ್ಟ?

BUMRHA (2)

ಟೀಮ್ ಇಂಡಿಯಾ ಪರ ಮೊದಲ ಓವರ್​ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಪಾಕ್ ಎದೆಯಲ್ಲಿ ಭಯವನ್ನಿಟ್ಟಿದ್ದಾರೆ. ತಂಡದ ಮೊದಲ ಓವರ್​ನಲ್ಲಿ ಮೊದಲ ಬಾಲ್ ಅನ್ನು ಪಾಂಡ್ಯ ವೈಡ್ ಹಾಕಿದರು. ಮತ್ತೊಂದು ಬಾಲ್​ನಲ್ಲಿ ಪಾಕ್ ಓಪನರ್ ಸೈಮ್ ಅಯೂಬ್​ನನ್ನ ಡಕೌಟ್ ಮಾಡಿದ್ದಾರೆ. ಕೇವಲ 1 ಬಾಲ್​ಗೆ ಸೈಮ್ ಅಯೂಬ್ ಡಕೌಟ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. 

ಸೈಮ್ ಅಯೂಬ್ ಡಕೌಟ್ ಆಗುತ್ತಿದ್ದಂತೆ ಕ್ರೀಸ್​ಗೆ ಆಗಮಿಸಿದ ವಿಕೆಟ್ ಕೀಪರ್ ಮೊಹಮ್ಮದ್ ಹ್ಯಾರಿಸ್ ಕೇವಲ 3 ರನ್​ಗೆ ಆಟ ಮುಗಿಸಿದ್ದಾರೆ. ಜಸ್​ಪ್ರೀತ್​ ಬೂಮ್ರಾ ಹಾಕಿದ ಬಾಲ್ ಅನ್ನು ಬಾರಿಸಲು ಹೋದ ಮೊಹಮ್ಮದ್ ಹ್ಯಾರಿಸ್ ನೇರವಾಗಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್​ ಕೊಟ್ಟು ಕ್ರೀಸ್ ಖಾಲಿ ಮಾಡಿದ್ದಾರೆ. ಕೇವಲ 6 ರನ್​ಗೆ ಪಾಕ್​ 2 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ವಿಕೆಟ್​ಗಳು​ ಬೀಳುತ್ತಿದ್ದಂತೆ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಮಸ್ತ್ ಸೆಲೆಬ್ರೆಟ್ ಮಾಡಿದೆ. ​  

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Hardik Pandya india vs pakistan asia cup Asia Cup 2025
Advertisment