Advertisment

ಗಂಭೀರ್ ವಿರುದ್ಧ ತೊಡೆ ತಟ್ಟಿದ ರೋಹಿತ್ ಶರ್ಮಾ.. ಟಾರ್ಗೆಟ್​ ಫಿಕ್ಸ್​..!

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ರೋಹಿತ್ ಶರ್ಮಾ ಭರ್ಜರಿ ಸಮರಾಭ್ಯಾಸ ನಡೆಸುತ್ತಿದ್ದಾರೆ. ಆಫ್ರಿಕಾ ಸರಣಿಯನ್ನ ಪ್ರತಿಷ್ಟೆಯಾಗಿಸಿಕೊಂಡ ರೋಹಿತ್, ವಿರೋಧಿಗಳಿಗೆ ತಕ್ಕ ಉತ್ತರ ಕೊಡಲು ರೆಡಿಯಾಗಿದ್ದಾರೆ. ತವರಿನಲ್ಲಿ ಹರಿಣಗಳ ಬೇಟೆಯಾಡಿ ಆಯ್ಕೆ ಸಮಿತಿ, ಕೋಚ್​​​​ ಗಂಭೀರ್​ಗೆ ಮೆಸೇಜ್ ನೀಡಲು ಹೊರಟಿದ್ದಾರೆ

author-image
Ganesh Kerekuli
ROHIT_SHARMA_1
Advertisment
  • ರೋಹಿತ್ ಶರ್ಮಾ ನಿನ್ನ ಆಟ ಬಲ್ಲವಱರು..?
  • ಮತ್ತೆ ತೂಕ ಇಳಿಸಿಕೊಂಡ್ರಾ ರೋಹಿತ್ ಶರ್ಮಾ..?
  • ರೋಹಿತ್ ಸೀರಿಯಸ್ ಪ್ರಾಕ್ಟೀಸ್ ಮಾಡ್ತಿರೋದೇಕೆ..?

18 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​​ ಕರಿಯರ್​ನಲ್ಲಿ ರೋಹಿತ್ ಶರ್ಮಾ, ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಟೀಕೆ, ಕಡೆಗಣನೆ, ಅವಮಾನ, ನೋವು ಎಲ್ಲವನ್ನೂ, ರೋಹಿತ್ ಅನುಭವಿಸಿದ್ದಾರೆ. ರೋಹಿತ್ ಶರ್ಮಾ ಪೀಕ್​ನಲ್ಲಿದ್ದಾಗ, ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಆದ್ರೀಗ ರೋಹಿತ್ ಟೆಸ್ಟ್, ಟಿ-20 ತಂಡದಿಂದ ದೂರವಾಗಿ, ಏಕದಿನ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಅಂದು ಹೊಗಳಿದ್ದವರು, ಇಂದು ರೋಹಿತ್ ವಿರುದ್ಧವೇ ನಿಂತಿದ್ದಾರೆ.

Advertisment

ಮುಂಬೈಕರ್ ರೋಹಿತ್ ಶರ್ಮಾ ಪರಿಸ್ಥಿತಿ ಯಾರಿಗೂ ಬೇಡ. ಇಷ್ಟೆಲ್ಲಾ ಅನುಭವಿಸುತ್ತಿರುವ ರೋಹಿತ್, ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದ್ರೂ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ತೋರಿಸೋಕೆ  ಮುಂದಾಗಿದ್ದಾರೆ. 
ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ, ಸಿಕ್ಕಾಪಟ್ಟೆ ಹಾರ್ಡ್​ವರ್ಕ್​ ಮಾಡಿದ್ರು. ಪ್ರತಿನಿತ್ಯ ತಪ್ಪದೇ ಜಿಮ್​ನಲ್ಲಿ ವರ್ಕ್​ಔಟ್ ಮಾಡಿ​ 11 ಕೆ.ಜಿ ತೂಕ ಇಳಿಸಿಕೊಂಡಿದ್ರು. ರೋಹಿತ್ ಅನ್​ಫಿಟ್ ಅಂದೋರಿಗೆ ಅಂದೇ ಉತ್ತರ ಕೊಟ್ರು. ಆದ್ರೀಗ ಸೌತ್ ಆಫ್ರಿಕಾ ಏಕದಿನ ಸರಣಿಗೂ ಮುನ್ನ ರೋಹಿತ್ ಮತ್ತೆ 5 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಫಿಟ್ನೆಸ್​​ಗೆ ಹೆಚ್ಚು ಒತ್ತು ಕೊಡ್ತಿರೋ ರೋಹಿತ್, ಯುವ ಕ್ರಿಕೆಟಿಗರಿಗಿಂತ ಹೆಚ್ಚು ಫಿಟ್ ಆಗಿ ಕಾಣ್ತಿದ್ದಾರೆ.

ಇದನ್ನೂ ಓದಿ: KSCA ಅಧ್ಯಕ್ಷರಾಗಿ ವೆಂಕಟೇಶ್​ ಪ್ರಸಾದ್​ ಅವಿರೋಧ ಆಯ್ಕೆ -ಅಸಲಿಗೆ ಆಗಿದ್ದೇನು?

Rohit sharma

ಒಂದೆಡೆ ಫಿಟ್ನೆಸ್.. ಮತ್ತೊಂದೆಡೆ ಬ್ಯಾಟಿಂಗ್ ಪ್ರಾಕ್ಟೀಸ್.. ಇವೆರಡಕ್ಕೂ ರೋಹಿತ್, ಹೆಚ್ಚು ಇಂಪಾರ್ಟೆನ್ಸ್ ಕೊಡ್ತಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಗೆಳೆಯ ಅಭಿಷೇಕ್ ನಾಯರ್ ಜೊತೆ, ಬ್ಯಾಟಿಂಗ್ ಸಮರಾಭ್ಯಾಸ ನಡೆಸುತ್ತಿರುವ ರೋಹಿತ್, ಸಾಲಿಡ್ ಟಚ್​ನಲ್ಲಿ ಇರುವಂತೆ ಕಾಣ್ತಿದ್ದಾರೆ. ರೋಹಿತ್ ತನ್ನ ಕ್ರಿಕೆಟ್​ ಕರಿಯರ್​ನಲ್ಲಿ ಯಾವತ್ತೂ ಇಷ್ಟು ಸೀರಿಯಾಸ್ ಆಗಿ ಪ್ರಾಕ್ಟೀಸ್ ಮಾಡಿಲ್ಲ. ಆದ್ರೀಗ ರೋಹಿತ್​ಗೆ ಅದೇನಾಯ್ತೋ ಏನೋ.. ಒಂದೊಂದು ಬ್ಯಾಟಿಂಗ್ ಸೆಷನ್​​​ನನ್ನ, ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.

Advertisment

ನವೆಂಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಆಫ್ರಿಕಾ ವಿರುದ್ಧ ಸರಣಿ ರೋಹಿತ್​ಗೆ ದೊಡ್ಡ ಸವಾಲಾಗಲಿದೆ. ಹರಿಣಗಳ ವಿರುದ್ಧ ರೋಹಿತ್ ಪರ್ಫಾಮ್ ಮಾಡಿದ್ರೆ, ಟೀಕಕಾರರು, ವಿರೋಧಿಗಳು ಸೈಲೆಂಟ್ ಆಗ್ತಾರೆ. ಒಂದು ವೇಳೆ ರೋಹಿತ್ ಆಫ್ರಿಕಾ ವಿರುದ್ಧ ಎಡವಿದ್ರೆ, ಮುಂಬೈಕರ್ ಕ್ರಿಕೆಟ್ ಚಾಪ್ಟರ್ ಕ್ಲೋಸ್ ಮಾಡಲು ಎಲ್ಲರೂ ಒಂದಾಗ್ತಾರೆ. ಸೋ ರೋಹಿತ್, ದಕ್ಷಿಣ ಆಫ್ರಿಕಾ ವಿರುದ್ಧ ಲೆಕ್ಕಾಚಾರದಿಂದಲೇ ಬ್ಯಾಟ್ ಬೀಸಲಿದ್ದಾರೆ.  

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ, 2023ರ ಏಕದಿನ ವಿಶ್ವಕಪ್ ಫೈನಲ್​​​​​ನಲ್ಲಿ ಎಡವಿತ್ತು. ರೋಹಿತ್ ಅಂದೇ ಶಪಥ ಮಾಡಿದ್ರು. 2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಅಲ್ಲಿವರೆಗೂ ಏನೇ ಅಡೆತಡೆ ಬಂದರೂ, ತಲೆಕೆಡಿಸಿಕೊಳ್ಳೋದಿಲ್ಲ ಅಂತ. ಅಂದು ರೋಹಿತ್ ಮಾಡಿದ ದೃಢ ನಿರ್ಧಾರವೇ ಇಂದು ಅವರಲ್ಲಿ ಆ ಟಫ್ ಕ್ಯಾರೆಕ್ಟರ್ ಕಾಣಿಸಿಕೊಳ್ಳೋದಕ್ಕೆ ಕಾರಣ. ಸೌತ್ ಆಫ್ರಿಕಾದಲ್ಲಿ ನಡೆಯಲಿರೋ ಆ ಒಂದು ವಿಶ್ವಕಪ್  ಗೆಲ್ಲಿಸಿಕೊಟ್ಟು ಸೈಲೆಂಟ್ ಆಗಿ ಕ್ರಿಕೆಟ್​ನಿಂದ ದೂರ ಸರಿಯುವ ಪ್ಲಾನ್, ಹಿಟ್​ಮ್ಯಾನ್ ರೋಹಿತ್​ದ್ದಾಗಿದೆ. ಅಲ್ಲಿಯವರೆಗೂ ಯಾರೇ ಏನೇ ಕೂಗಾಡಿದ್ರೂ ರೋಹಿತ್ ಉತ್ತರ ಮೌನವಷ್ಟೇ.

ಗಂಭೀರ್ ವಿರುದ್ಧ ತೊಡೆತಟ್ಟಿದ್ರಾ..?

ನಿಜ ಹೇಳಬೇಕು ಅಂದ್ರೆ ರೋಹಿತ್ ಶರ್ಮಾರ ಮೊದಲ ವಿಲನ್ನೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಕೋಚ್ ಗಂಭೀರ್​ಗೆ ತಂಡದಲ್ಲಿ ರೋಹಿತ್, ವಿರಾಟ್ ಕೊಹ್ಲಿ ಮತ್ತಿತರೆ ಹಿರಿಯ ಆಟಗಾರರು ಇರೋದು ಇಷ್ಟವಿಲ್ಲ. ತನ್ನ ತಾಳಕ್ಕೆ ಕುಣಿಯೋ ಯುವ ಕ್ರಿಕೆಟಿಗರು ಬೇಕು. ಹಾಗಾಗಿ ಗಂಭೀರ್, ರೋಹಿತ್ ವಿರುದ್ಧ ಮೊದಲ ದಿನದಿಂದಲೇ, ಸೈಲೆಂಟ್​ ಆಗೇ ಸ್ಕೆಚ್ ಹಾಕ್ತಿದ್ದಾರೆ. ರೋಹಿತ್​ಗೆ ಇದೆಲ್ಲಾ ಗೊತ್ತಿಲ್ಲ ಅಂತಲ್ಲ. ಆದ್ರೆ ರೋಹಿತ್ ತಮ್ಮ ಪರ್ಫಾಮೆನ್ಸ್ ಮೂಲಕವೇ ಎಲ್ಲರಿಗೂ ಉತ್ತರಿಸಬೇಕು ಅಂತ ತೊಡೆತಟ್ಟಿದ್ದಾರೆ. 

Advertisment

39 ವರ್ಷದಲ್ಲೂ ರೋಹಿತ್​​​​​​​​​​​​​​​​ ಒಳಗೆ ಬೆಂಕಿ ಕುದಿಯುತ್ತಿದೆ. ಮೈದಾನದಲ್ಲಿ ತನ್ನ ಸಾಮರ್ಥ್ಯ ತೋರಿಸಬೇಕು ಅನ್ನೋ ಹಠ, ಛಲ, ದಿನೇ ದಿನೇ ಹೆಚ್ಚಾಗ್ತಿದೆ. ಹಿಟ್​ಮ್ಯಾನ್ ಸೌತ್ ಆಫ್ರಿಕಾ ವಿರುದ್ಧವೂ ಸೂಪರ್​ಹಿಟ್ ಆಗಲಿ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rohith Sharma
Advertisment
Advertisment
Advertisment