/newsfirstlive-kannada/media/media_files/2025/09/07/hockey_2-2025-09-07-22-20-29.jpg)
ಹಾಕಿ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ತಂಡದ ವಿರುದ್ಧ 4-1ರಿಂದ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಮೂಲಕ 4ನೇ ಬಾರಿಗೆ ಪ್ರಶಸ್ತಿಯನ್ನು ಭಾರತದ ಹಾಕಿ ತಂಡ ಮುಡಿಗೇರಿಸಿಕೊಂಡಿದೆ. ಜೊತೆಗೆ ಮುಂದಿನ ವರ್ಷ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟಿದೆ.
ಬಿಹಾರದ ರಾಜ್ಗೀರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಭಾರತದ ಹಾಕಿ ತಂಡ ಮಣಿಸಿದೆ. ದಿಲ್‌ಪ್ರೀತ್ ಸಿಂಗ್ ಎರಡು ಪ್ರಮುಖ ಗೋಲು ಗಳಿಸಿದರು. 28ನೇ ನಿಮಿಷದಲ್ಲಿ ಮೊದಲ ಗೋಲು ಹಾಗೂ 45ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿದರು. ಸುಖ್‌ಜೀತ್ ಸಿಂಗ್ ಹಾಗೂ ಅಮಿತ್ ರೋಹಿದಾಸ್ ತಲಾ ಒಂದೊಂದು ಗೋಲು ಬಾರಿಸಿ ಜಯ ತಂದುಕೊಟ್ಟರು. ಅತ್ತ ಎದುರಾಳಿ ಗೋಲು ಗಳಿಸಲು ಹರಸಾಹಸವನ್ನೇ ಪಟ್ಟಿತು ಎನ್ನಬಹುದು.
ಏಕೆಂದರೆ ಸೌತ್ ಕೊರಿಯಾ ಕೊನೆವರೆಗೂ ಕೇವಲ ಒಂದೇ ಗೋಲಿನಲ್ಲಿ ಉಳಿದುಕೊಂಡಿತು. ಇದರಿಂದ ಭಾರತ ತಂಡ 4-1 ರಿಂದ ಅಮೋಘವಾದ ಗೆಲುವು ಪಡೆದು ಟ್ರೋಫಿಗೆ ಮುತ್ತಿಟ್ಟಿತು. ಭಾರತದ ಪರ ಅದ್ಭುತವಾದ ಪ್ರದರ್ಶನ ತೋರಿದ ದಿಲ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸಿದ್ದರಿಂದ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.
ಇದನ್ನೂ ಓದಿ:CM ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ಗೆ ಚಾಲೆಂಜ್ ಹಾಕಿದ ನಿಖಿಲ್ ಕುಮಾರಸ್ವಾಮಿ
ಹರ್ಮನ್್ಪ್ರೀತ್ ಸಿಂಗ್ ನೇತೃತ್ವದ ಟೀಮ್ ಇಂಡಿಯಾ ಹಾಕಿ 4ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿ, ವರ್ಲ್ಡ್ಕಪ್ಗೆ ನೇರ ಪ್ರವೇಶ ಪಡೆದಿದೆ. ಅದರಂತೆ ದಕ್ಷಿಣ ಕೊರಿಯಾ ವಿಶ್ವಕಪ್ಗೆ ಬರಬೇಕು ಎಂದರೆ ಮೆಗಾ ಈವೆಂಟ್‌ನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಿದೆ. ಏಷ್ಯಾ ಕಪ್ನಲ್ಲಿ ಭಾರತದ ಹಾಕಿ ತಂಡ ಗೆಲುವು ಪಡೆಯುತ್ತಿದ್ದಂತೆ ಸ್ಟೇಡಿಯಂನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ