Horoscope: ನಂಬಿ ಮೋಸ ಹೋಗಬೇಡಿ -ಯಾವ ರಾಶಿಗೆ ಇವತ್ತು ಸಂಕಷ್ಟ..?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಹಿಮವಂತ ಋತು. ಪುಷ್ಯಾ ಮಾಸ, ಶುಕ್ಲ ಪಕ್ಷ, ಪಾಡ್ಯ ತಿಥಿ, ಪೂರ್ವಾಷಾಡ ನಕ್ಷತ್ರ. ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಗಂಡನಿಂದ ಪತ್ನಿಯ ಹ*ತ್ಯೆ : ವರದಕ್ಷಿಣೆಗಾಗಿ ಪತ್ನಿ ಹ*ತ್ಯೆಗೈದ ಪತಿ ಪರಮೇಶ್ವರ್‌

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಣ ಗಳಿಸುವ ಹೊಸ ಮೂಲಕ್ಕಾಗಿ ಶೋಧನೆ ನಡೆಸುತ್ತೀರಿ
  • ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಅವಕಾಶವಿರುತ್ತದೆ
  • ವಿವಾಹಿತರಿಗೆ ಉತ್ತಮವಾದ ಫಲವನ್ನು ಕೊಡುವ ದಿನ
  • ಹಣದ ಅವಶ್ಯಕತೆ ಇದೆ ಅಂತ ದಾರಿ ತಪ್ಪಿ ನಡೆಯುವ ವಾತಾವರಣ ಸೃಷ್ಟಿಯಾಗಬಹುದು ಎಚ್ಚರಿಕೆ
  • ಯಾರನ್ನು ನಂಬಿ ಮೋಸ ಹೋಗಬಾರದು
  • ಅವಿವಾಹಿತರಿಗೆ ಒಳ್ಳೆಯ ದಿನವಲ್ಲ ತುಂಬಾ ಬೇಸರ ಆಗುವ ದಿನ
  • ತಂದೆಯವರ ಸೇವೆ ಮಾಡಿ

ವೃಷಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಪ್ರಯಾಣದ ಸಮಯದಲ್ಲಿ ಸಮಸ್ಯೆ ಉಂಟಾಗಲಿದೆ ಎಚ್ಚರವಹಿಸಿ
  • ದೈಹಿಕವಾಗಿ ತುಂಬಾ ಪ್ರಯಾಸವಾಗಲಿದೆ ವಿಶ್ರಾಂತಿ ಪಡೆಯಿರಿ
  • ವ್ಯಾವಹಾರಿಕ ದೋಷದಿಂದ ಆರ್ಥಿಕ ನಷ್ಟ ಅನುಭವಿಸುತ್ತೀರಿ
  • ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಬೀರಬಹುದು
  • ತಾಳ್ಮೆ ಮುಖ್ಯ, ತಾಳ್ಮೆಯನ್ನು ಕಳೆದುಕೊಂಡಾಗ  ಕೆಲಸಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ
  • ವಿನಾಕಾರಣ ಬೇರೆಯವರೊಂದಿಗೆ ವಾಗ್ವಾದ ಮಾಡಬೇಡಿ
  • ಶ್ರೀಕೃಷ್ಣನನ್ನು ಅರ್ಚನೆ ಮಾಡಿ

ಮಿಥುನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ದೊರೆಯಲಿದೆ
  • ಆಸಕ್ತಿ, ಉತ್ಸಾಹಗಳು ಹೆಚ್ಚಾಗಿ ದಾಂಪತ್ಯದಲ್ಲಿ ಬೇಸರವಾಗಲಿದೆ
  • ಕುಟುಂಬ ಸದಸ್ಯರು ಮತ್ತು ಬಂಧುಗಳ ಜೊತೆ ಹಲವು ವಿಷಯಗಳನ್ನು ಚರ್ಚೆ ಮಾಡುತ್ತೀರಿ
  • ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರುತ್ತದೆ
  • ಆಧ್ಯಾತ್ಮಿಕ ವಿಚಾರದಲ್ಲಿ ಹೆಚ್ಚಿನ ಮನಸ್ಸನ್ನು ಕೊಡುತ್ತೀರಿ
  • ಮಾತು ಮಾಧುರ್ಯವಾಗಿರುತ್ತೆ ಬೇರೆ ಎಲ್ಲರನ್ನೂ ನಿಮ್ಮ ಕಡೆ ಆಕರ್ಷಣೆ ಮಾಡುವ ಶಕ್ತಿ ನಿಮಗಿದೆ
  • ಧ್ಯಾನಕ್ಕೆ ಶರಣು ಹೋಗಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸಣ್ಣ-ಪುಟ್ಟ ಸಮಸ್ಯೆಗಳು ದೂರವಾಗುವ ದಿನ
  • ನಿಮ್ಮ ಆರ್ಥಿಕ ಸ್ಥಿತಿ ಅನುಕೂಲವಾಗುತ್ತದೆ
  • ಮನೆಯಲ್ಲಿ ಚಿಕ್ಕಮಕ್ಕಳಿಗೆ ತೊಂದರೆಯಾಗಲಿದೆ ಜಾಗ್ರತೆವಹಿಸಿ
  • ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
  • ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
  • ಗಣಪತಿಯ ಅನುಗ್ರಹ ಪಡೆದುಕೊಳ್ಳಿ

ಸಿಂಹ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
  • ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ 
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರವಾಗಲಿದೆ
  • ಇಂದು ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
  • ಕಲೆಗಳನ್ನು ನೋಡಿ ಆನಂದಿಸುತ್ತೀರಿ
  • ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುವವರಿಗೆ ಈ ದಿನ ಜನಪ್ರಿಯತೆ ಸಿಗುವಂತ ದಿವಸ 
  • ನವಗ್ರಹರನ್ನು ಪ್ರಾರ್ಥಿಸಿ

ಕನ್ಯಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ನೇಹಿತರ ಬೆಂಬಲವಿದೆ ಆದರೆ ನಿಮ್ಮ ತೀರ್ಮಾನ ಸರಿ ಇರಬೇಕು
  • ಉದ್ಯಮಿಗಳು ಮಾತ್ರ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಬಾರದು
  • ಶಿಸ್ತು ಬದ್ಧವಾದ ನಡವಳಿಕೆಯಿಂದ ಜಯವಾಗಲಿದೆ
  • ವೆಚ್ಚಗಳನ್ನು ನಿಯಂತ್ರಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ 
  • ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ, ಸಭೆ ನಡೆಯಬಹುದು
  • ಮನೆಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ
  • ಮಹಾವಿಷ್ಣುವನ್ನು ಪ್ರಾರ್ಥಿಸಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
  • ಉದ್ಯೋಗದಲ್ಲಿ ಪ್ರಗತಿ ಏನೋ ಸಾಧಿಸಿದ ಆತ್ಮತೃಪ್ತಿ ಸಿಗಲಿದೆ
  • ವಿದ್ಯಾರ್ಥಿಗಳಿಗೆ ಈ ದಿನ  ಫಲಪ್ರದಾಯಕವಾಗಿರುತ್ತದೆ
  • ಸಣ್ಣ-ಪುಟ್ಟ ಕನಸುಗಳು ನನಸಾಗುವ ಸಮಯ
  • ಹೆಂಡತಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರವಹಿಸಿ
  • ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
  • ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿ

ವೃಶ್ಚಿಕ 

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
  • ಗುಪ್ತಶತ್ರುಗಳು ನಿಮಗೆ ತೊಂದರೆ ಮಾಡಲು ಕಾಯುತ್ತಿರುತ್ತಾರೆ ಜಾಗ್ರತೆ
  • ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ 
  • ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥಮಾಡಿಕೊಳ್ಳಬೇಕು
  • ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ ಬರಬಹುದು
  • ಸಾಲ ಮಾಡುವ ಪರಿಸ್ಥಿತಿ ಅಥವಾ ಹಣದ ನಷ್ಟವಾಗಬಹುದು ಎಚ್ಚರ‘
  • ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ

ಧನಸ್ಸು

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಉದ್ದೇಶ ಒಳಿತಾಗಿಟ್ಟುಕೊಂಡು ಪ್ರಯತ್ನ ಪಟ್ಟರೆ ಖಂಡಿತ ಶುಭವಾಗುವ ದಿನ
  • ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಸುಸಮಯ 
  • ಇಂದು ಆರೋಗ್ಯ ಸುಧಾರಣೆಯಾಗಲಿದೆ
  • ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನ
  • ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕಾಗುತ್ತದೆ 
  • ಸ್ವಲ್ಪ ದೂರ ಪ್ರಯಾಣದ ಯೋಗವಿದೆ
  • ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕಾನೂನಿನ ವಿಷಯಗಳಲ್ಲಿ ಬಹಳ ಗೊಂದಲವಿರುತ್ತದೆ
  • ಸರಿಯಾದ ವ್ಯವಸ್ಥೆ ಮಾಡಿಕೊಂಡು ಕಾರ್ಯ ಪ್ರವುತ್ತರಾದರೆ ಕೆಲಸದಲ್ಲಿ ಜಯಶೀಲರಾಗುತ್ತೀರಿ
  • ಹಣದ ಕೊರತೆಯಿಂದ ನೀವು ಮಾಡಬೇಕಾದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ
  • ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ 
  • ಅನುಭವಿಗಳ ಭೇಟಿ ಮತ್ತು ಸಲಹೆ ಸಿಕ್ಕಿದರೂ ಕೂಡ ಪ್ರಯೋಜನವಿಲ್ಲ
  • ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು ಎಚ್ಚರ ಇರಲಿ
  • ದುರ್ಗಾರಾಧನೆ ಮಾಡಿ

ಕುಂಭ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವ್ಯಾಪಾರ, ವ್ಯವಹಾರ, ಅಧ್ಯಯನ ಸಂಬಂಧಿಸಿದ ವಿಚಾರಗಳಿಗೆ ಶುಭದಿನ
  • ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆದರೆ ಆಲಸ್ಯ ಬೇಡ
  • ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
  • ಸಾಹಿತ್ಯ - ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
  • ಇಂದು ಬಹಳ ಉತ್ತಮವಾದ ದಿನ
  • ಹಿಂದೆ ಮಾಡಿದ ವ್ಯಾಪಾರ, ವ್ಯವಹಾರದ ನಷ್ಟಗಳಿದ್ದರೆ ಈ ದಿನ ಸರಿದೂಗಿಸಬಹುದು
  • ರೋಗಿಗಳಿಗೆ ಹಣ್ಣನ್ನು ನೀಡಿ

ಮೀನ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಕುಟುಂಬದ ಕೆಲಸಗಳಿಗೆ ಹೆಚ್ಚು ಒತ್ತಡಗಳು ಬರುವ ಸಾಧ್ಯತೆಯಿದೆ
  • ಆತ್ಮವಿಶ್ವಾಸ ಹೆಚ್ಚುತ್ತದೆ ಆದರೆ ತುಂಬಾ ತಾಳ್ಮೆ ಇರಲಿ
  • ದಿನಪೂರ್ತಿ ಕಷ್ಟಪಟ್ಟು ಕೆಲಸ ಮಾಡಿ, ಸಂಜೆ ವೇಳೆಗೆ ವಿಶ್ರಾಂತಿ ಸಿಗಬಹುದು
  • ಈ ದಿನ ಕೆಲಸದ ಒತ್ತಡದಿಂದ ಪ್ರಾರಂಭವಾಗುವ ಸಾಧ್ಯತೆ
  • ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಬಹುದು
  • ಅನಾರೊಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುವ ಸಾಧ್ಯತೆ
  • ಇಂದು ಮಾನಸಿಕವಾಗಿ ತುಂಬಾ ತೊಳಲಾಟ, ನೋವು ಅನುಭವಿಸುವ ಸಾಧ್ಯತೆ 
  • ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya Horoscope
Advertisment