Advertisment

ವೆಸ್ಟ್ ಇಂಡೀಸ್ ನೀಡಿದ 196 ರನ್ ಗಳನ್ನು ಟೀಮ್ ಇಂಡಿಯಾ ಚೇಸಿಂಗ್ ಹೇಗಿತ್ತು? ಸಂಜು ಸ್ಯಾಮ್ಸನ್ ಏಕಾಂಗಿ ಆಟಕ್ಕೆ ಒಲಿದ ಗೆಲುವು

ನಿನ್ನೆ ರಾತ್ರಿ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಇಂಡಿಯಾ- ವೆಸ್ಚ್ ಇಂಡೀಸ್ ಪಂದ್ಯ ಸಂಜು ಸ್ಯಾಮ್ಸನ್ ಮಯವಾಗಿತ್ತು. ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ಟೀಮ್ ಇಂಡಿಯಾವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು. ಪಾರ್ಟನರ್ ಶಿಪ್ ಬಿಲ್ಡ್ ಮಾಡಿದ್ದರು. ಇಂಡಿಯಾದ ರನ್ ಚೇಸಿಂಗ್ ಹೇಗಿತ್ತು? ಇಲ್ಲಿದೆ ಡೀಟೈಲ್ಸ್ ಓದಿ.

author-image
Chandramohan
Sanju samson batting

ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟದಿಂದ ಟೀಮ್ ಇಂಡಿಯಾ ಗೆಲುವು

Advertisment
  • ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟದಿಂದ ಟೀಮ್ ಇಂಡಿಯಾ ಗೆಲುವು
  • ಸಂಜು ಸ್ಯಾಮ್ಸನ್‌ಗೆ ತಿಲಕ್ ವರ್ಮಾ, ಸೂರ್ಯ ಸಾಥ್‌

ಫೀಲ್ಡಿಂಗ್​ನಲ್ಲಿ ಯಡವಟ್ಟು ಮಾಡಿಕೊಂಡ ಟೀಮ್​ ಇಂಡಿಯಾ ಬ್ಯಾಟಿಂಗ್​ನಲ್ಲಿ ಬೊಂಬಾಟ್​ ಪರ್ಫಾಮೆನ್ಸ್​ ನೀಡ್ತು. ಸಂಜು ಸ್ಯಾಮ್ಸನ್​ ಸ್ಪೋಟಕ ಆಟಕ್ಕೆ ವಿಂಡೀಸ್ ಉಡೀಸ್​ ಆಯ್ತು. ಕೆರಬಿಯನ್ನರ ಚಳಿ ಬಿಡಿಸಿದ ಮೆನ್​ ಇನ್​ ಬ್ಲ್ಯೂ ಪಡೆ ಸೆಮಿಫೈನಲ್​ಗೆ ಸೂಪರ್​ ಎಂಟ್ರಿ ನೀಡ್ತು. ಹೇಗಿತ್ತು ಇಂಡಿಯಾ ಚೇಸಿಂಗ್​.? 
196 ರನ್​ಗಳ ಬಿಗ್​ ಟಾರ್ಗೆಟ್​​ ಚೇಸಿಂಗ್​ಗಿಳಿದ ಟೀಮ್​ ಇಂಡಿಯಾಗೆ ಸಂಜು ಸ್ಯಾಮ್ಸನ್​ ಸ್ಪೋಟಕ ಆರಂಭ ಒದಗಿಸಿದ್ರು. ಆದ್ರೆ, ಮತ್ತೊಬ್ಬ ಓಪನರ್​ ಅಭಿಷೇಕ್ ಶರ್ಮಾ ಕೈ ಕೊಟ್ರು. ಕೇವಲ 10 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು. 
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಇಶಾನ್ ಕಿಶನ್​ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 2 ಬೌಂಡರಿ ಬಾರಿಸಿದ ಕಿಶನ್​ ಕೂಡ ಜಸ್ಟ್​ 10 ರನ್​ಗೆ ಸುಸ್ತಾದ್ರು. 
ಆರಂಭದಿಂದಲೇ ಅಬ್ಬರದ ಆಟವಾಡಿದ ಸಂಜು ಸ್ಯಾಮ್ಸನ್ ಈಡನ್​ ಗಾರ್ಡನ್ಸ್​ನಲ್ಲಿ ಲೀಲಾಜಾಲವಾಗಿ ರನ್​ಗಳಿಸಿದ್ರು. ವಿಂಡೀಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಸಂಜು ಸ್ಯಾಮ್ಸನ್​ ಜಸ್ಟ್​ 26 ಎಸೆತಕ್ಕೆ ಹಾಫ್​​ ಸೆಂಚುರಿ ಸಿಡಿಸಿದ್ರು. 
3ನೇ ವಿಕೆಟ್​​ಗೆ ಜೊತೆಯಾದ ಸಂಜು ಸ್ಯಾಮ್ಸನ್​-ಸೂರ್ಯಕುಮಾರ್​ ಯಾದವ್ ಅದ್ಭುತ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ರು. 35 ಎಸೆತಗಳಲ್ಲಿ 58 ರನ್​ಗಳ ಕಾಣಿಕೆ ನೀಡಿದ್ರು. 
ಗುಡ್​ ಸ್ಟಾರ್ಟ್​ ಪಡೆದುಕೊಂಡ ಸೂರ್ಯಕುಮಾರ್​ ಯಾದವ್​, ಬಿಗ್​ ಸ್ಕೋರ್​ ಆಗಿ ಕನ್ವರ್ಟ್​ ಮಾಡುವಲ್ಲಿ ಫೇಲ್ ಆದ್ರು. 1 ಸಿಕ್ಸ್​, 1 ಬೌಂಡರಿ ಸಿಡಿಸಿದ ಸೂರ್ಯಕುಮಾರ್​ 18 ರನ್​ಗಳಿಸಿ ನಿರ್ಗಮಿಸಿದ್ರು. 
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ತಿಲಕ್​ ವರ್ಮಾ ವಿಂಡೀಸ್​​ ಬೌಲರ್​​ಗಳನ್ನ ಕಾಡಿದ್ರು. ಸಂಜು ಸ್ಯಾಮ್ಸನ್​ ಜೊತೆಗೆ ಬಿರುಸಿನ ಬ್ಯಾಟಿಂಗ್​​ ನಡೆಸಿದ್ರು. 4 ಬೌಂಡರಿ, 1 ಸಿಕ್ಸರ್​ ಚಚ್ಚಿದ ತಿಲಕ್ ವರ್ಮಾ 27 ರನ್​ ಚಚ್ಚಿದ್ರು.  
ತಿಲಕ್​ ವರ್ಮಾ ಔಟಾದ ಬಳಿಕವೂ ಸಂಜು ಸ್ಯಾಮ್ಸನ್​​ ಅಬ್ಬರ ಮುಂದುವರೆಯಿತು. ವಿಂಡೀಸ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ ಸಂಜು, ಈಡನ್​ ಗಾರ್ಡನ್ಸ್​ ಮೈದಾನದ ಉದ್ದಗಲಕ್ಕೂ ಚೆಂಡಿನ ದರ್ಶನ ಮಾಡಿಸಿದ್ರು.  
ಸಂಜು ಸ್ಯಾಮ್ಸನ್​ಗೆ ಸಾಥ್​ ನೀಡಿದ ಹಾರ್ದಿಕ್ ಪಾಂಡ್ಯ 17 ರನ್​ಗಳಿಸಿ ಔಟಾದ್ರು. ಅಂತಿಮ ಘಟ್ಟದಲ್ಲಿ ಬ್ಯಾಟಿಂಗ್​ಗೆ ಬಂದ ಶಿವಂ ದುಬೆ ಬ್ಯಾಕ್​ ಟು ಬ್ಯಾಕ್ ಬೌಂಡರಿ ಸಿಡಿಸಿ ಅಬ್ಬರಿಸಿದ್ರು. ಕೊನೆಯ ಓವರ್‌ನ  ಮೊದಲ ಎಸೆತವನ್ನ ಸಿಕ್ಸರ್​​ ಸಿಡಿಸಿದ ಸಂಜು ಸ್ಯಾಮ್ಸನ್​, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 
19.2 ಓವರ್​​ಗಳಲ್ಲಿ ಟೀಮ್​ ಇಂಡಿಯಾ ಗೆಲುವಿನ ದಡ ಸೇರಿತು. 97 ರನ್​ಗಳಿಸಿ ಸಂಜು ಸ್ಯಾಮ್ಸನ್​ ಅಜೇಯರಾಗುಳಿದ್ರು. 5 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಮೆನ್​ ಇನ್​​ ಬ್ಲ್ಯೂ ಪಡೆ ಸೂಪರ್​​ ಎಂಟ್ರಿ ಕೊಟ್ಟಿತು. 

Advertisment

Sanju samson batting (1)




ವಸಂತ್​ ಮಳವತ್ತಿ. ಸ್ಪೋರ್ಟ್ಸ್​​ ಬ್ಯೂರೋ. ನ್ಯೂಸ್​ ಫಸ್ಟ್​ 
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

sanju samson batting Hero india won against west indies in t20 world cup match
Advertisment
Advertisment
Advertisment