Advertisment

IND vs PAK ಮ್ಯಾಚ್​ಗಾಗಿ ಹೈಡ್ರಾಮಾ! ICC ಮುಂದೆ 5 ಬೇಡಿಕೆ ಇಟ್ಟ ಪಾಕ್.. 3 ರಿಜೆಕ್ಟ್, ಜಯ್ ಶಾ ಖಡಕ್ ಉತ್ತರ ಏನು..?

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೇಲಿನ ಪಂದ್ಯವನ್ನು ಬಹಿಷ್ಕರಿಸೋದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನ ಈಗ ತೆಪ್ಪಗಾಗಿದೆ. ಇನ್ನು ಭಾರತದ ವಿರುದ್ಧ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸುವ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದೆ ದೊಡ್ಡ ಪಟ್ಟಿಯನ್ನೇ ಇಟ್ಟಿತ್ತು ಎಂಬ ವಿಚಾರ ಬಹಿರಂಗವಾಗಿದೆ.

author-image
Ganesh Kerekuli
jay shah
Advertisment

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೇಲಿನ ಪಂದ್ಯವನ್ನು ಬಹಿಷ್ಕರಿಸೋದಾಗಿ ಬೆದರಿಕೆ ಹಾಕಿದ್ದ ಪಾಕಿಸ್ತಾನ ಈಗ ತೆಪ್ಪಗಾಗಿದೆ. ಇನ್ನು ಭಾರತದ ವಿರುದ್ಧ ಕಣಕ್ಕಿಳಿಯಲು ಒಪ್ಪಿಗೆ ಸೂಚಿಸುವ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂದೆ ದೊಡ್ಡ ಪಟ್ಟಿಯನ್ನೇ ಇಟ್ಟಿತ್ತು ಎಂಬ ವಿಚಾರ ಬಹಿರಂಗವಾಗಿದೆ. 

Advertisment

ಸುಮಾರು 4,000 ಕೋಟಿ ರೂಪಾಯಿ ಮೌಲ್ಯದ ಈ ಹೈ-ವೋಲ್ಟೇಜ್ ಪಂದ್ಯ ನಡೆಯಲೇಬೇಕೆಂಬ ಒತ್ತಡದ ನಡುವೆ, ಪಿಸಿಬಿ, ಬಿಸಿಬಿ (ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಮತ್ತು ಐಸಿಸಿ ನಡುವೆ ಮಹತ್ವದ ಸಭೆ ನಡೆದಿದೆ. ಜಯ್ ಶಾ ನೇತೃತ್ವದ ಐಸಿಸಿ ಮುಂದೆ ಪಾಕಿಸ್ತಾನ ಮಂಡಳಿ 5 ಪ್ರಮುಖ ಬೇಡಿಕೆಗಳನ್ನು ಇಟ್ಟಿತ್ತು. ಅದರಲ್ಲಿ ಬಹುತೇಕ ಬೇಡಿಕೆಗಳನ್ನು ಐಸಿಸಿ ತಿರಸ್ಕರಿಸಿದೆ.

ಇದನ್ನೂ ಓದಿ:ನಟೌಂಕಿ ನಾಟಕ ಕೈಬಿಟ್ಟು ತೆಪ್ಪಗಾದ ಪಾಕ್ ಸರ್ಕಾರ - ಭಾರತದ ಮೇಲೆ ಮ್ಯಾಚ್ ಆಡಲು ಒಪ್ಪಿಗೆ..! Highlights

ಪಿಸಿಬಿ ಬೇಡಿಕೆ 01: ಬಾಂಗ್ಲಾದೇಶಕ್ಕೆ ದಂಡ ಹಾಕಬಾರದು

ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿದ್ದರೂ ಬಾಂಗ್ಲಾದೇಶಕ್ಕೆ ಐಸಿಸಿ ಆದಾಯದ ಪಾಲು ನೀಡಬೇಕು ಮತ್ತು ಯಾವುದೇ ಆರ್ಥಿಕ ದಂಡ ವಿಧಿಸಬಾರದು ಎಂದು ಪಿಸಿಬಿ ಪಟ್ಟು ಹಿಡಿದಿತ್ತು.

Advertisment

ಐಸಿಸಿ ಉತ್ತರ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ದಂಡ ವಿಧಿಸದಿರುವುದು ಈಗಾಗಲೇ ನಾವು ತೆಗೆದುಕೊಂಡಿರುವ ನಿರ್ಧಾರವಾಗಿದೆ ಎಂದು ಸ್ಪಷ್ಟಪಡಿಸಿದೆ.

ಪಿಸಿಬಿ ಬೇಡಿಕೆ 02: ಬಾಂಗ್ಲಾದೇಶಕ್ಕೆ ಬದಲಿ ಟೂರ್ನಿ ಬೇಕು

ವಿಶ್ವಕಪ್ ಕಳೆದುಕೊಂಡ ಬಾಂಗ್ಲಾದೇಶಕ್ಕೆ ಮುಂದಿನ ಆವೃತ್ತಿಯಲ್ಲಿ ಹೆಚ್ಚುವರಿ ಐಸಿಸಿ ಟೂರ್ನಿಯನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಪಾಕಿಸ್ತಾನ ಕೇಳಿದೆ.
ಐಸಿಸಿ ಉತ್ತರ: ಮುಂದಿನ ಆವೃತ್ತಿಯಲ್ಲಿ ಅಂಡರ್-19 (U-19) ವಿಶ್ವಕಪ್ ಆಯೋಜನೆಗೆ ಅವಕಾಶ ನೀಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಐಸಿಸಿ ತಿಳಿಸಿದೆ.

ಪಿಸಿಬಿ ಬೇಡಿಕೆ 03: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ

ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಐಸಿಸಿ ಮಧ್ಯಸ್ಥಿಕೆ ವಹಿಸಬೇಕೆಂದು ಪಿಸಿಬಿ ಒತ್ತಾಯಿಸಿದೆ.
ಐಸಿಸಿ ಉತ್ತರ: ಈ ಬೇಡಿಕೆಯನ್ನು ಐಸಿಸಿ ಸಾರಾಸಗಟಾಗಿ ತಿರಸ್ಕರಿಸಿದೆ. ದ್ವಿಪಕ್ಷೀಯ ಸರಣಿಗಳು ಐಸಿಸಿ ವ್ಯಾಪ್ತಿಗೆ ಬರುವುದಿಲ್ಲ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಡಿಯಲ್ಲೂ ಇದಕ್ಕೆ ಬಲವಂತ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

Advertisment

ಪಿಸಿಬಿ ಬೇಡಿಕೆ 04: ಭಾರತ-ಪಾಕ್-ಬಾಂಗ್ಲಾ ತ್ರಿಕೋನ ಸರಣಿ

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ ತ್ರಿಕೋನ ಸರಣಿಯನ್ನು ಆಯೋಜಿಸಬೇಕೆಂಬ ಪ್ರಸ್ತಾಪವನ್ನು ಪಿಸಿಬಿ ಇಟ್ಟಿತ್ತು.
ಐಸಿಸಿ ಉತ್ತರ: ಇದು ಕೂಡ ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಮೂಲಕ ಐಸಿಸಿ ಈ ಪ್ರಸ್ತಾಪವನ್ನೂ ತಿರಸ್ಕರಿಸಿದೆ.

ಪಿಸಿಬಿ ಬೇಡಿಕೆ 05: ಭಾರತ ತಂಡ ಬಾಂಗ್ಲಾ ಪ್ರವಾಸ ಕೈಗೊಳ್ಳಬೇಕು.

2026ರಲ್ಲಿ ಭಾರತ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವಂತೆ ಐಸಿಸಿ ನೋಡಿಕೊಳ್ಳಬೇಕು ಎಂದು ಪಿಸಿಬಿ ಕೇಳಿಕೊಂಡಿತ್ತು.

ಐಸಿಸಿ ಉತ್ತರ: ಪ್ರವಾಸಗಳು ಎರಡು ದೇಶಗಳ ಮಂಡಳಿಗಳಿಗೆ ಬಿಟ್ಟ ವಿಚಾರವಾಗಿದ್ದು, ಇದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಐಸಿಸಿ ಖಡಕ್ ಆಗಿ ಹೇಳಿದೆ.

Advertisment

ಇದನ್ನೂ ಓದಿ: ಶಕ್ತಿಸೌಧ ವಿಧಾನಸೌಧದಲ್ಲಿ ಕಳ್ಳತನ.. ಸಚಿವರ ಕಚೇರಿಯಲ್ಲಿ ಲಕ್ಷಾಂತರ ನಗದು, ಚಿನ್ನಾಭರಣ ಕಳ್ಳತನ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

T20 world cup Ind vs Pak india vs pakistan
Advertisment
Advertisment
Advertisment