Advertisment

ಗೆದ್ದರೆ ಸೆಮಿಫೈನಲ್​​ಗೆ, ಸೋತರೆ ಮನೆಗೆ.. ನಾಳೆ ಮಳೆ ಬಂದ್ರೆ ಟೀಂ ಇಂಡಿಯಾ ಕತೆ ಏನು..?

ಟಿ20 ವಿಶ್ವಕಪ್ 2026ರ ಟೂರ್ನಿ ರೋಚಕ ಘಟ್ಟ ತಲುಪಿದೆ. ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತು, ಜಿಂಬಾಬ್ವೆ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ, ಇದೀಗ ಸೆಮಿಫೈನಲ್ ಪ್ರವೇಶಿಸಲು ಅಂತಿಮ ಅಗ್ನಿಪರೀಕ್ಷೆಗೆ ಸಜ್ಜಾಗಿದೆ.

author-image
Ganesh Kerekuli
team india (23)
Advertisment

ಟಿ20 ವಿಶ್ವಕಪ್ 2026ರ ಟೂರ್ನಿ ರೋಚಕ ಘಟ್ಟ ತಲುಪಿದೆ. ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತು, ಜಿಂಬಾಬ್ವೆ ವಿರುದ್ಧ ಗೆದ್ದಿರುವ ಟೀಮ್ ಇಂಡಿಯಾ, ಇದೀಗ ಸೆಮಿಫೈನಲ್ ಪ್ರವೇಶಿಸಲು ಅಂತಿಮ ಅಗ್ನಿಪರೀಕ್ಷೆಗೆ ಸಜ್ಜಾಗಿದೆ.

Advertisment

ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. ಇದನ್ನು 'ವರ್ಚುವಲ್ ಕ್ವಾರ್ಟರ್ ಫೈನಲ್' (Virtual Quarterfinal) ಎಂದೇ ಕರೆಯಲಾಗುತ್ತಿದ್ದು, ಗೆದ್ದ ತಂಡ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

ಸಮೀಕರಣ ಏನು?

ಸದ್ಯದ ಪಾಯಿಂಟ್ಸ್ ಟೇಬಲ್ ಪ್ರಕಾರ ಭಾರತ ಮತ್ತು ವೆಸ್ಟ್ ಇಂಡೀಸ್ ಎರಡೂ ತಂಡಗಳು ತಲಾ 2 ಪಂದ್ಯ ಆಡಿದ್ದು, ತಲಾ 2 ಅಂಕಗಳನ್ನು ಹೊಂದಿವೆ.

  • ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದ ಭಾರತ, ಜಿಂಬಾಬ್ವೆ ವಿರುದ್ಧ ಬೃಹತ್ ಗೆಲುವು ಸಾಧಿಸಿತ್ತು.
  • ಇತ್ತ ವಿಂಡೀಸ್ ಕೂಡ ಜಿಂಬಾಬ್ವೆಯನ್ನು ಮಣಿಸಿ, ಆಫ್ರಿಕಾ ವಿರುದ್ಧ ಸೋತಿದೆ.
  • ಹೀಗಾಗಿ ಭಾನುವಾರ ನಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ದಕ್ಷಿಣ ಆಫ್ರಿಕಾದೊಂದಿಗೆ ಸೆಮಿಫೈನಲ್ ಪ್ರವೇಶಿಸುತ್ತಾರೆ.
Advertisment

ಮಳೆ ಬಂದರೆ ಭಾರತ ಮನೆಗೆ!

ಒಂದು ವೇಳೆ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಅಥವಾ ಪಂದ್ಯ ರದ್ದಾದರೆ (Abandoned), ಭಾರತಕ್ಕೆ ಭಾರೀ ಆಘಾತ ಕಾದಿದೆ. ಪಂದ್ಯ ರದ್ದಾದರೆ ಇತ್ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಆಗ ನೆಟ್ ರನ್ ರೇಟ್ (NRR) ಪ್ರಮುಖವಾಗುತ್ತದೆ. ವೆಸ್ಟ್ ಇಂಡೀಸ್ +1.791 ರನ್ ರೇಟ್ ಹೊಂದಿದ್ದರೆ, ಭಾರತ -0.100 ರನ್ ರೇಟ್ ಹೊಂದಿದೆ. ಹೀಗಾಗಿ ಪಂದ್ಯ ರದ್ದಾದರೆ ಉತ್ತಮ ರನ್ ರೇಟ್ ಹೊಂದಿರುವ ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪಲಿದ್ದು ಭಾರತ ಟೂರ್ನಿಯಿಂದ ಹೊರಬೀಳಲಿದೆ.

ಇದನ್ನೂ ಓದಿ: ರಣಜಿ ಟ್ರೋಫಿ ಚಾಂಪಿಯನ್ ಆದ ಜಮ್ಮು ಕಾಶ್ಮೀರ ತಂಡ: 67 ವರ್ಷಗಳಲ್ಲಿ ಮೊದಲ ಭಾರಿಗೆ ಚಾಂಪಿಯನ್ ಆದ ಜಮ್ಮು ಕಾಶ್ಮೀರ ತಂಡ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 WORLD CUP 2026 T20 world cup T20I
Advertisment
Advertisment
Advertisment