/newsfirstlive-kannada/media/media_files/2025/10/24/smriti_mandhana_pratika_rawal-2025-10-24-08-13-39.jpg)
ನ್ಯೂಜಿಲೆಂಡ್​ ಮಹಿಳಾ ತಂಡದ ವಿರುದ್ಧ ನಡೆದ ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ವುಮೆನ್ಸ್​ ಭರ್ಜರಿಯಾಗಿ ಜಯ ಸಾಧಿಸಿ ಸೆಮಿಫನಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಓಪನರ್ಸ್​ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್​ ಸಿಡಿಲಬ್ಬರದ ಸೆಂಚುರಿಯಿಂದ ಭಾರತ ಗೆಲುವು ಪಡೆಯಿತು ಎನ್ನಬಹುದು.
/filters:format(webp)/newsfirstlive-kannada/media/post_attachments/wp-content/uploads/2025/05/Smriti_Mandhana.jpg)
ನವಿ ಮುಂಬೈ ಮೈದಾನದಲ್ಲಿ ನಡೆದ ವಿಶ್ವಕಪ್​ನ 24ನೇ ಪಂದ್ಯ ನ್ಯೂಜಿಲೆಂಡ್ ಹಾಗೂ ಭಾರತ ಎರಡೂ ತಂಡಕ್ಕೂ ಅತ್ಯಂತ ಮುಖ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಪಡೆಯುತ್ತೋ ಅದು ಸೆಮಿಸ್​ಗೆ ಎಂಟ್ರಿ ಕೊಡುವುದು ಖಚಿತವಾಗಿತ್ತು. ಆದರೆ ಇಂತಹ ಮಹಾನ್ ಅವಕಾಶವನ್ನು ಟೀಮ್ ಇಂಡಿಯಾ ಆಟಗಾರ್ತಿಯರು ಸಾಧಿಸಿ ತೋರಿಸಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ ಬೃಹತ್​ ಸ್ಕೋರ್​ ಬಾರಿಸಿ ಭಾರತ ಜಯಭೇರಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್​ ನಾಯಕಿ ಸೋಫಿಯಾ ಡಿವೈನ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಓಪನರ್​ ಆಗಿ ಕ್ರೀಸ್​ಗೆ ಆಗಮಿಸಿದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್ 212 ರನ್​ಗಳ ಅದ್ಭುತವಾದ ಜೊತೆಯಾಟ ಆಡಿದರು. ಆರಂಭದಿಂದಲೂ ತಾಳ್ಮೆ ಬ್ಯಾಟಿಂಗ್ ಪ್ರದರ್ಶನ ಮಾಡಿದ ಓಪನರ್ಸ್​ ಸೆಂಚುರಿ ಬಾರಿಸಿದರು.
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಕೇವಲ 95 ಎಸೆತಗಳಲ್ಲಿ 10 ಅಮೋಘವಾದ ಬೌಂಡ್ರಿ, 4 ಆಕಾಶದೆತ್ತರದ ಸಿಕ್ಸರ್​ಗಳಿಂದ ಸೆಂಚುರಿ ಬಾರಿಸಿದರು. 109 ರನ್​ ಗಳಿಸಿ ಆಡುವಾಗ ಕ್ಯಾಚ್ ಔಟ್ ಆದರು. ಸ್ಮೃತಿ ಬೆನ್ನಲ್ಲೇ ಓಪನರ್​ ಪ್ರತಿಕಾ ರಾವಲ್ ಸೆಂಚುರಿ ಬಾರಿಸಿದರು. ಪಂದ್ಯದಲ್ಲಿ ಒಟ್ಟು 134 ಬಾಲ್ ಆಡಿದ ರಾವಲ್​, 13 ಬೌಂಡರಿ, 2 ಸಿಕ್ಸರ್​ನಿಂದ 122 ರನ್​ ಗಳಿಸಿದರು.
ಜೆಮಿಮಾ ರೋಡ್ರಿಗಸ್ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿ 55 ಎಸೆತಗಳಲ್ಲಿ 11 ಬೌಂಡರಿಗಳಿಂದ 76 ರನ್​ ಚಚ್ಚಿದರು. ಈ ಪಂದ್ಯದಲ್ಲೂ ಕ್ಯಾಪ್ಟನ್​ ಹರ್ಮನ್​​ಪ್ರೀತ್ ಕೌರ್ ವಿಫಲ ಬ್ಯಾಟಿಂಗ್ ಮಾಡಿದರು. ಇದರಿಂದ ಟೀಮ್ ಇಂಡಿಯಾ​ 49 ಓವರ್​ಗಳಲ್ಲಿ 3 ವಿಕೆಟ್​ಗೆ 341 ರನ್​ಗಳ ಟಾರ್ಗೆಟ್ ನೀಡಿತ್ತು.
/filters:format(webp)/newsfirstlive-kannada/media/media_files/2025/10/24/indw-2025-10-24-08-13-55.jpg)
ಈ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ಮಹಿಳೆಯರು ಆರಂಭದಲ್ಲೇ ದೊಡ್ಡ ಆಘಾತ ಅನುಭವಿಸಿದರು. 1 ರನ್​ಗೆ ಒಂದು ವಿಕೆಟ್​ ಪತನವಾಯಿತು. ಇದಾದ ಮೇಲೆ 60 ರನ್ ಆಗುವಷ್ಟರಲ್ಲಿ 3 ವಿಕೆಟ್​ ಉರುಳಿದವು. ಬಳಿಕ ಮಳೆ ಬಂದಿದ್ದರಿಂದ ಡಿಎಲ್​ಎಸ್​ ಮೆಥಡ್ ಪ್ರಕಾರ ಓವರ್​ ಕಡಿಮೆ ಮಾಡಿ ರನ್​ಗಳನ್ನು ಮಾಡಲಾಗಿತ್ತು. ಆದರೆ ಡಿಎಲ್​ಎಸ್​ ಮೆಥಡ್ ಪ್ರಕಾರ ನಿಗದಿತ ಓವರ್​ನಲ್ಲಿ ರನ್​ ಬಾರಿಸಲಾಗಿದೇ ಕಿವೀಸ್​ ಯುವತಿಯರು ಸೋಲೋಪ್ಪಿಕೊಂಡರು. 44 ಓವರ್​ಗೆ 8 ವಿಕೆಟ್​ ಕಳೆದುಕೊಂಡು 271 ರನ್​ ಮಾತ್ರ ಗಳಿಸಿದರು. ಇದರಿಂದ ಟೀಮ್ ಇಂಡಿಯಾ 53 ರನ್​ಗಳಿಂದ ವಿಜಯ ಸಾಧಿಸಿ ಸೆಮಿಫೈನಲ್​ಗೆ ಬಿಗ್ ಎಂಟ್ರಿಕೊಟ್ಟಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us