ಭಾರತ- ನ್ಯೂಜಿಲೆಂಡ್ 2ನೇ ODI ಶುರು : ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌

ಗುಜರಾತ್‌ನ ರಾಜ್ ಕೋಟ್ ನಲ್ಲಿ ಭಾರತ- ನ್ಯೂಜಿಲೆಂಡ್ ನಡುವೆ ಎರಡನೇ ಒನ್ ಡೇ ಮ್ಯಾಚ್ ಆರಂಭವಾಗಿದೆ. ಇಂದು ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ವಾಷಿಂಗಟನ್ ಸುಂದರ್ ಬದಲು ನಿತೀಶ್ ರೆಡ್ಡಿ ಕಣಕ್ಕಿಳಿಯಲಿದ್ದಾರೆ.

author-image
Chandramohan
Gill (3)
Advertisment

ಭಾರತ- ನ್ಯೂಜಿಲೆಂಡ್ ನಡುವೆ ಇಂದು ಎರಡನೇ ಒನ್ ಡೇ ಮ್ಯಾಚ್ ಶುರುವಾಗಿದೆ. ಗುಜರಾತ್‌ನ ರಾಜ್ ಕೋಟ್ ನಲ್ಲಿ ನಡೆಯುತ್ತಿರುವ 2ನೇ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. 
2ನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ, ಮೊದಲಿಗೆ ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದೆ. ಇನ್ನೂ ಟೀಮ್ ಇಂಡಿಯಾದಲ್ಲಿ ಪ್ಲೇಯಿಂಗ್ 11 ರಲ್ಲಿ ಆಟಗಾರರ ಬದಲಾವಣೆ ಮಾಡಲಾಗಿದೆ. ಕಳೆದ ಪಂದ್ಯದಲ್ಲಿ ಪಕ್ಕೆ ನೋವಿನ ಗಾಯದ  ಕಾರಣದಿಂದ ನೋವು ಅನುಭವಿಸುತ್ತಿರುವ ವಾಷಿಂಗಟನ್ ಸುಂದರ್ ಬದಲಿಗೆ ನೀತೀಶ್ ರೆಡ್ಡಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. 
ಈ ಮೊದಲು ನೆಟ್ ಅಭ್ಯಾಸದ ವೇಳೆ ರಿಷಭ್ ಪಂತ್ ಗಾಯಗೊಂಡಿದ್ದರು. ಬಳಿಕ ವಾಷಿಂಗಟನ್ ಸುಂದರ್ ಗಾಯಗೊಂಡಿದ್ದಾರೆ. 
ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಗಮನ ನೆಟ್ಟಿದೆ.  ವಿರಾಟ್ ಕೋಹ್ಲಿ ಕಳೆದ ಪಂದ್ಯದಲ್ಲಿ 93 ರನ್ ಬಾರಿಸಿ, ಶತಕದಿಂದ ವಂಚಿತರಾದರು. ಶುಭಮನ್ ಗಿಲ್ ಕೂಡ ಅರ್ಧಶತಕ ಬಾರಿಸಿ ಔಟ್ ಆಗಿದ್ದರು. ಭಾರತದ ಬ್ಯಾಟಿಂಗ್ ಲೈನ್ ಅಪ್ ಚೆನ್ನಾಗಿದೆ.  ಹೀಗಾಗಿ ಮೊದಲಿಗೆ ಬ್ಯಾಟ್ ಮಾಡುತ್ತಾ 300 ಕ್ಕೂ ಹೆಚ್ಚು ರನ್ ಗಳ ಗಳಿಸುವ ಅವಶ್ಯಕತೆ ಇದೆ. ನ್ಯೂಜಿಲೆಂಡ್‌ಗೆ ದೊಡ್ಡ ಟಾರ್ಗೆಟ್ ನೀಡಿದರೇ ಮಾತ್ರವೇ ಪಂದ್ಯ ಗೆಲ್ಲಲು ಸಾಧ್ಯ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Indian cricket team news India vs NewZealand
Advertisment