/newsfirstlive-kannada/media/media_files/2025/10/02/ind-vs-wi-2025-10-02-09-52-57.jpg)
ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಭಾರತ!
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ ನಲ್ಲಿ 66 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ದಿನದ ಆಟ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ತಂಡವು 162 ರನ್ ಮಾತ್ರ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡವು 5 ವಿಕೆಟ್ ಕಳೆದುಕೊಂಡು 448 ರನ್ ಗಳಿಸಿದೆ. ಬಳಿಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಗೆ ಆಹ್ವಾನಿಸಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ವೆಸ್ಟ್ ಇಂಡೀಸ್ ತಂಡವು 66 ರನ್ ಗಳಿಸುವುದರೊಳಗೆ 5 ವಿಕೆಟ್ ಕಳೆದುಕೊಂಡಿದೆ. ಭಾರತದ ಗೆಲುವಿಗೆ ಇನ್ನೂ 5 ವಿಕೆಟ್ ಪಡೆಯೋದು ಮಾತ್ರ ಬಾಕಿ ಇದೆ. ಭಾರತವು ಗೆಲುವಿನತ್ತ ಹೆಜ್ಜೆ ಹಾಕಿದೆ. ಈ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವು ಬಹುತೇಕ ನಿಶ್ಚಿತವಾಗಿದೆ.
ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಕೆ.ಎಲ್.ರಾಹುಲ್, ಜುರೇಲ್, ಜಡೇಜಾ ಸೇರಿದಂತೆ ಮೂವರು ಸೆಂಚುರಿ ಸಿಡಿಸಿದ್ದಾರೆ. ಈ ಮೂರು ಸೆಂಚುರಿ ಮತ್ತು ಶುಭಮನ್ ಗಿಲ್ ಹಾಫ್ ಸೆಂಚುರಿ ನೆರವಿನಿಂದ ಭಾರತವು 448 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಈಗ ಭಾರತದ ಬೌಲರ್ ಗಳು ದಿನದ ಆರಂಭದಲ್ಲಿ ವೆಸ್ಟ್ ಇಂಡೀಸ್ ತಂಡದ ಟಾಪ್ ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಕಳಿಸಿದ್ದಾರೆ. ಈಗ ಒಂದಿಬ್ಬರು ಬ್ಯಾಟರ್ ಗಳನ್ನು ಹೊರತುಪಡಿಸಿದರೇ, ಬಾಲಂಗೋಚಿಗಳನ್ನು ಪೆವಿಲಿಯನ್ ಗೆ ಕಳಿಸುವುದು ಮಾತ್ರ ಬಾಕಿ ಇದೆ. ಈಗ ವೆಸ್ಟ್ ಇಂಡೀಸ್ ತಂಡವು 220 ರನ್ ಹಿನ್ನಡೆ ಅನುಭವಿಸುತ್ತಿದೆ. ಭಾರತಕ್ಕೆ ಇನ್ನೂ ಒಂದು ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವುದು ಕೂಡ ಬಾಕಿ ಇದೆ.
ಒಂದು ವೇಳೆ ವೆಸ್ಟ್ ಇಂಡೀಸ್ ತಂಡದ ಬಾಲಂಗೋಟಿ ಬ್ಯಾಟರ್ ಗಳು 220 ರನ್ ಹೊಡೆದು ಬಳಿಕ ಇನ್ನೂ ಹೆಚ್ಚಿನ ರನ್ ಹೊಡೆದರೇ, ಭಾರತವು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಲು ಅವಕಾಶ ಇದೆ. ಇವತ್ತು ಮೂರನೇ ದಿನದ ಆಟ ನಡೆಯುತ್ತಿದೆ. ಇನ್ನೂ ಎರಡು ದಿನ ಆಟವಾಡಲು ಅವಕಾಶ ಕೂಡ ಇದೆ.
ಹೀಗಾಗಿ ಈ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ ಹೆಚ್ಚಿನ ಅವಕಾಶಗಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.