/newsfirstlive-kannada/media/media_files/2025/10/29/bumrha_tilak-2025-10-29-13-05-12.jpg)
ಇಂಡೋ-ಆಸಿಸ್​​​ ಫೈನಲ್​ ಟಿ20 ಕದನಕ್ಕೆ ಕೆಲವೇ ಗಂಟೆಗಳು ಬಾಕಿ. ಹ್ಯಾಟ್ರಿಕ್ ಜಯದೊಂದಿಗೆ ಕಾಂಗರೂ ನಾಡಲ್ಲಿ ಕಪ್ ಗೆಲ್ಲಲು ಟೀಮ್​ ಇಂಡಿಯಾ ರೆಡಿಯಾಗಿದೆ. ಸತತ 2 ಪಂದ್ಯ ಸೋತರೂ ಆಸ್ಟ್ರೇಲಿಯಾ ತಂಡ ಗಾಬಾದಲ್ಲಿ ಗೆಲುವು ನಮ್ದೇ ಅಂತಿದೆ. ಅಂತಿಮ ಟಿ20ಗೆ ಟೀಮ್​ ಇಂಡಿಯಾ ಸಿದ್ಧತೆ ಹೇಗಿದೆ?.
ಇಂಡೋ-ಆಸಿಸ್ ಟಿ20 ಸರಣಿಯ​​ ಫೈನಲ್​ ಫೈಟ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಟಿ20 ಱಂಕಿಂಗ್​ನ ನಂಬರ್​ 1 ತಂಡ​ ಇಂಡಿಯಾ, ನಂಬರ್​ 2 ಟೀಮ್​ ಆಸ್ಟ್ರೇಲಿಯಾ ಬ್ರಿಸ್ಬೆನ್​ನ​ ಗಾಬಾ ಸ್ಟೇಡಿಯಂನಲ್ಲಿ ಮುಖಾಮುಖಿಯಾಗ್ತಿವೆ. ಟಿ20 ಸೂಪರ್​ ಸ್ಟಾರ್​ಗಳ ದಂಡನ್ನೇ ಹೊಂದಿರೋ ಉಭಯ ತಂಡಗಳ ಪಾಲಿಗೆ ಇದು ಕೇವಲ ಒಂದು ಸಾಮಾನ್ಯ ಪಂದ್ಯದಲ್ಲ. ಪ್ರತಿಷ್ಟೆಯ ಕದನ.
/filters:format(webp)/newsfirstlive-kannada/media/media_files/2025/09/10/surya_kumar_bumrha-2025-09-10-21-41-36.jpg)
ಭಾರತಕ್ಕೆ ಸರಣಿ ಗೆಲುವಾ.? ಸಮಬಲನಾ.?
ತವರಲ್ಲಿ ಮಾನ ಉಳಿಸಿಕೊಳ್ಳೋ ಯತ್ನದಲ್ಲಿ ಆಸ್ಟ್ರೇಲಿಯಾ ತಂಡವಿದೆ. ಕಾಂಗರೂ ನಾಡಲ್ಲಿ ಸರಣಿ ಗೆದ್ದು ದಾಖಲೆ ಬರೆಯಲು ಸೂರ್ಯನ ಸೈನ್ಯ ತುದಿಗಾಲಲ್ಲಿ ನಿಂತಿದೆ. ಸರಣಿಯ ಮೊದಲ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋದ್ರೆ, 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಿಸಿತ್ತು. 3 ಮತ್ತು 4ನೇ ಪಂದ್ಯ ಗೆದ್ದಿರೋ ಟೀಮ್​ ಇಂಡಿಯಾ ಇದೀಗ ಹ್ಯಾಟ್ರಿಕ್​ ಗೆಲುವಿಗೆ ಹಾತೊರೆಯುತ್ತಿದೆ. ಸರಣಿಯಲ್ಲಿ 2-1 ಅಂತರದ ಮುನ್ನಡೆಯಲ್ಲಿರೋ ಟೀಮ್​ ಇಂಡಿಯಾ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಸ್ಟಾರ್​ಗಳ ಇನ್​​ಕನ್ಸಿಸ್ಟೆನ್ಸಿಯೇ ದೊಡ್ಡ ಸಮಸ್ಯೆ.!
ಕಾಂಗರೂ ನಾಡಲ್ಲಿ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರೋ ಮೆನ್ ಇನ್​ ಬ್ಲ್ಯೂ ಪಡೆದ ಸ್ಟಾರ್​ಗಳೇ ಆಟವೇ ದೊಡ್ಡ ಸಮಸ್ಯೆಯಾಗಿದೆ. ಒಂದು ಪಂದ್ಯದಲ್ಲಿ ಅಬ್ಬರಿಸಿದವರು, ಇನ್ನೊಂದು ಮ್ಯಾಚ್​ನಲ್ಲಿ ಆಡ್ತಿಲ್ಲ. ಗುಡ್​ ಸ್ಟಾರ್ಟ್​ ಪಡೆದವರು ಬಿಗ್​ ಸ್ಕೋರ್​ ಆಗಿ ಕನ್ವರ್ಟ್​ ಮಾಡ್ತಿಲ್ಲ. ಅಭಿಷೇಕ್​ ಶರ್ಮಾ, ಶುಭ್​ಮನ್​ ಗಿಲ್​, ಸೂರ್ಯಕುಮಾರ್​, ಶಿವಂ ದುಬೆ.. ಈ ಟಾಪ್​ ಆರ್ಡರ್​ ಬ್ಯಾಟರ್​ಗಳು ಇನ್​​ಕನ್ಸಿಸ್ಟೆಂಟ್​ ಆಗಿದ್ದಾರೆ. ಗಾಬಾ ಮೈದಾನದಲ್ಲಿ ಇವ್ರು ಕಾಂಟ್ರಿಬ್ಯೂಟ್​ ಮಾಡಿದ್ರೆ, ಟ್ರೋಫಿ ಗೆಲ್ಲೋದು ಕಷ್ಟವೇನಲ್ಲ.
ಜಿತೇಶ್​​ ಶರ್ಮಾ ಔಟ್​.. ಸಂಜು ಸ್ಯಾಮ್ಸನ್ ಇನ್​.?
ಇಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾ ಬದಲಾವಣೆಯಾಗೋ ಸಾಧ್ಯತೆ ಕಡಿಮೆ. ಒಂದು ವೇಳೆ ಬದಲಾವಣೆಯಾದ್ರೆ ವಿಕೆಟ್​ ಕೀಪರ್​ ಜೀತೇಶ್​ ಶರ್ಮಾ ಪ್ಲೇಯಿಂಗ್​ ಇಲೆವೆನ್​ನಿಂದ ಹೊರ ಬೀಳಲಿದ್ದಾರೆ. ಲೋವರ್​ ಆರ್ಡರ್​ ಬ್ಯಾಟಿಂಗ್​ ಸ್ಟ್ರೆಂಥ್​ ಹೆಚ್ಚಿಸಲು ಜಿತೇಶ್​ಗೆ ಕೊಕ್ ನೀಡಿ ಸಂಜು ಸ್ಯಾಮ್ಸನ್​ಗೆ ಮಣೆ ಹಾಕೋ ಸಾಧ್ಯತೆ ಹೆಚ್ಚಿಸಿದೆ.
ಆಲ್​​ರೌಂಡರ್​ಗಳೇ ತಂಡದ ಮ್ಯಾಚ್​ ವಿನ್ನರ್ಸ್.!
ಆಸಿಸ್​​​ ವಿರುದ್ಧದ ಚುಟುಕು ಸರಣಿಯಲ್ಲಿ ಆಲ್​​ರೌಂಡರ್​ಗಳೇ ಟೀಮ್​ ಇಂಡಿಯಾ ಪಾಲಿನ ಮ್ಯಾಚ್​ ವಿನ್ನರ್ಸ್​ಗಳಾಗಿದ್ದಾರೆ. ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​ ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ. ಅಂತಿಮ ಹಂತದಲ್ಲಿ ಸ್ಟೋಟಕ ಬ್ಯಾಟಿಂಗ್​ ನಡೆಸ್ತಿರೋ ಇವ್ರು, ಬೌಲಿಂಗ್​ನಲ್ಲೂ ಸ್ಪಿನ್​ ಮ್ಯಾಜಿಕ್​ ಮಾಡ್ತಿದ್ದಾರೆ. ಇವರಿಬ್ಬರ ಆಟವೇ ಇಂದಿನ ಪಂದ್ಯದಲ್ಲೂ ಮಹತ್ವದ ಪಾತ್ರ ನಿರ್ವಹಿಸಲಿದೆ.
/filters:format(webp)/newsfirstlive-kannada/media/media_files/2025/08/12/bumrha_axar-2025-08-12-08-53-54.jpg)
ಕಾಂಗರೂ ನಾಡಲ್ಲಿ ಬೂಮ್ರಾ ಖದರ್​ ಮಾಯ.!
ಸುಂದರ್​, ಅಕ್ಷರ್​ ಜೊತೆಗೆ ಮಿಸ್ಟ್ರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಕೂಡ ಜಾದೂ ಮಾಡ್ತಿದ್ದಾರೆ. ವೇಗಿ ಆರ್ಷ್​​ದೀಪ್​ ಸಿಂಗ್​ ಕಾಂಗರೂಗಳ ಪಡೆಯಲ್ಲಿ ಭಯ ಹುಟ್ಟಿಸಿದ್ದಾರೆ. ಆದ್ರೆ, ಯಾರ್ಕರ್​​ ಸ್ಪೆಷಲಿಸ್ಟ್​ ಜಸ್​ಪ್ರಿತ್​ ಬೂಮ್ರಾ ಖದರ್​ ಕಳೆದುಕೊಂಡಂತೆ ಕಾಣ್ತಿರೋದು ಎಲ್ಲರಲ್ಲೂ ಸರ್​ಪ್ರೈಸ್​ ಮೂಡಿಸಿದೆ. ಆಡಿದ 4 ಪಂದ್ಯದಿಂದ ಬೂಮ್ರಾ ಕೇವಲ 3 ವಿಕೆಟ್​ ಉರುಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ವಿಕೆಟ್​ ಲೆಸ್​ ಆಗಿ ನಿರ್ಗಮಿಸಿದ್ದಾರೆ. ಇಂದು ಬೂಮ್ರಾ ಲೈನ್​ & ಲೆಂಥ್​​ ಕಂಡುಕೊಳ್ತಾರಾ.? ಅನ್ನೋದು ಕುತೂಹಲ ಮೂಡಿಸಿದೆ.
ಓಪನರ್​ ಟ್ರಾವಿಸ್​ ಹೆಡ್​, ವೇಗಿ ಜೋಷ್​ ಹೇಜಲ್​ವುಡ್​ ನಿರ್ಗಮನದ ಬಳಿಕ ಆಸಿಸ್​ ಪಡೆಯಲ್ಲಿ ಜೋಷ್​ ಕಡಿಮೆಯಾಗಿದೆ. ಹಾಗಂತ ಆಸಿಸ್​ ಪಡೆಯನ್ನ ಕಡೆಗಣಿಸುವಂತಿಲ್ಲ. ಗಬಾದ ಸ್ಪೀಡ್​ ಟ್ರ್ಯಾಕ್​ ಟೀಮ್​ ಇಂಡಿಯಾಗಿಂತ, ಆಸಿಸ್​ಗೆ ಹೆಚ್ಚು ಸಹಕಾರಿಯಾಗಿದೆ. ಇದು ಡು ಆರ್​ ಡೈ ಪಂದ್ಯವಾಗಿರೋದ್ರಿಂದ ಆಸಿಸ್​ ಪಡೆ ಸಿಡಿದೇಳಲು ಸಜ್ಜಾಗಿದ್ದು, ಕಾಂಗರೂಗಳನ್ನ ಕಟ್ಟಿ ಹಾಕಲು ಸ್ಪೆಷಲ್​ ಪ್ಲಾನ್​ನೊಂದಿಗೆ ಸೂರ್ಯನ ಸೈನ್ಯ ಕಣಕ್ಕಿಳಿಯಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us