/newsfirstlive-kannada/media/media_files/2025/12/20/gambhir-ajit-2025-12-20-09-07-33.jpg)
/newsfirstlive-kannada/media/media_files/2025/11/30/ruturaj-nitish-tilak-2025-11-30-12-34-18.jpg)
ಶಾಕ್ ಕೊಟ್ಟ ಅಗರ್ಕರ್
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೊನೆಗೂ ಟೀಮ್ ಇಂಡಿಯಾ ಪ್ರಕಟವಾಗಿದೆ. ಕಿವೀಸ್ ಕಿವಿ ಹಿಂಡಲು 15 ಆಟಗಾರರ ಬಲಿಷ್ಠ ತಂಡವನ್ನೇ ಸೆಲೆಕ್ಷನ್ ಕಮಿಟಿ ಪ್ರಕಟಿಸಿದೆ. ಬಹುತೇಕ ಕಳೆದ ಸೌತ್ ಆಫ್ರಿಕಾ ಸರಣಿಯಲ್ಲಿ ಆಡಿದ ತಂಡವನ್ನೇ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಸ್ಥಾನ ಸಿಗುತ್ತೆ ಅನ್ನೋ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಆಟಗಾರರಿಗೆ ಅಜಿತ್ ಅಗರ್ಕರ್ ಅಂಡ್ ಟೀಮ್ ಶಾಕ್ ನೀಡಿದೆ.
/newsfirstlive-kannada/media/post_attachments/wp-content/uploads/2023/11/ruturaj-gaikwad.jpg)
ಋತುರಾಜ್ಗೆ ಗೇಟ್ಪಾಸ್..!
ಕಳೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದ ಋತುರಾಜ್ ಗಾಯಕ್ವಾಡ್ ಸೆಂಚುರಿ ಸಿಡಿಸಿ ಮಿಂಚಿದ್ರು. ಮೊದಲ ಏಕದಿನದಲ್ಲಿ ವೈಫಲ್ಯ ಅನುಭವಿಸಿದ್ದ ಗಾಯಕ್ವಾಡ್, ರಾಯ್ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ 105 ರನ್ ಚಚ್ಚಿದ್ರು. ಸದ್ಯ ನಡೀತಾ ಇರೋ ವಿಜಯ್ ಹಜಾರೆ ಟೂರ್ನಿಯ ಕಳೆದ 2 ಪಂದ್ಯಗಳಲ್ಲಿ ಶತಕ, ಹಾಫ್ ಸೆಂಚುರಿ ಚಚ್ಚಿರೋ ಋತುರಾಜ್, ನನ್ನ ಸ್ಥಾನ ಸೇಫ್ ಅನ್ನೋ ಭರವಸೆ ಹೊಂದಿದ್ರು. ಭರವಸೆ ಹುಸಿಯಾಗಿದೆ. ಕಳೆದ ಸರಣಿಯ ಶತಕ ವೀರನನ್ನ ಡ್ರಾಪ್ ಮಾಡಲಾಗಿದೆ.
/newsfirstlive-kannada/media/media_files/2025/12/25/ishan-kishan-2-2025-12-25-15-30-02.jpg)
ಕಿಶನ್ ಕಮ್ಬ್ಯಾಕ್ ಕನಸು ಭಗ್ನ
ಸೈಯದ್ ಮುಷ್ತಾಕ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್, ವಿಜಯ್ ಹಜಾರೆ ಟೂರ್ನಿಯಲ್ಲೂ ಅದೇ ಫಾರ್ಮ್ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಟಿ20 ವಿಶ್ವಕಪ್ ತಂಡಕ್ಕೆ ಸರ್ಪ್ರೈಸ್ ಎಂಟ್ರಿ ಕೊಟ್ಟಂತೆ ಏಕದಿನ ತಂಡಕ್ಕೂ ಕಮ್ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ರು. ಏಕದಿನ ಸರಣಿಯಿಂದ ರಿಷಭ್ ಪಂತ್ನ ಡ್ರಾಪ್ ಮಾಡಿ, ಕಿಶನ್ಗೆ ಸ್ಥಾನ ನೀಡೋ ಬಗ್ಗೆ ಸೆಲೆಕ್ಷನ್ ಕಮಿಟಿಯಲ್ಲೂ ಚರ್ಚೆ ನಡೆದಿತ್ತು. ಅಂತಿಮವಾಗಿ ಪಂತ್ಗೆ ಮತ್ತೊಂದು ಚಾನ್ಸ್ ಸಿಕ್ಕಿದೆ. ಇಶಾನ್ ಕಿಶನ್ ಕಮ್ಬ್ಯಾಕ್ ಕನಸು ಭಗ್ನವಾಗಿದೆ.
/newsfirstlive-kannada/media/media_files/2026/01/03/devdutt-padikkal-2026-01-03-17-44-02.jpg)
ಪಡಿಕ್ಕಲ್ಗೆ ನಿರಾಸೆ..!
ಕರ್ನಾಟಕದ ಎಡಗೈ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ವಿಜಯ ಹಜಾರೆ ಟೂರ್ನಿಯಲ್ಲಿ ಸೆಂಚುರಿ ಮೇಲೆ ಸೆಂಚುರಿ ಸಿಡಿಸಿ ರನ್ ಹೊಳೆ ಹರಿಸಿದ್ದಾರೆ. ಆಡಿದ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಒನ್ ಡೇ ಟೀಮ್ಗೆ ಎಂಟ್ರಿ ಕೊಡೋ ತವಕದಲ್ಲಿದ್ರು. ಪಡಿಕ್ಕಲ್ ಸೆಲೆಕ್ಟ್ ಆಗ್ತಾರೆ ಅಂತಾ ಕ್ರಿಕೆಟ್ ಲೋಕ ಕೂಡ ಪ್ರಿಡಿಕ್ಟ್ ಮಾಡಿತ್ತು. ಆದ್ರೆ, ಅಂತಿಮವಾಗಿ ಪಡಿಕ್ಕಲ್ಗೆ ನಿರಾಸೆಯಾಗಿದೆ.
/newsfirstlive-kannada/media/media_files/2025/10/17/shami_ind-2025-10-17-18-00-51.jpg)
ಶಮಿ ಖೇಲ್ ಖತಂ..?
ಸುದೀರ್ಘ ಅಂತರದ ಬಳಿಕ ಏಕದಿನ ತಂಡಕ್ಕೆ ಕಮ್ಬ್ಯಾಕ್ ಕನವರಿಕೆಯಲ್ಲಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿಗೂ ನಿರಾಸೆಯಾಗಿದೆ. ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅಲಭ್ಯತೆಯಲ್ಲಿ ಚಾನ್ಸ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಶಮಿಯನ್ನ ಡ್ರಾಪ್ ಮಾಡಲಾಗಿದೆ. ದೇಶಿ ಕ್ರಿಕೆಟ್ನಲ್ಲಿ ಶಮಿ ಪರ್ಫಾಮ್ ಮಾಡ್ತಾ ಇದ್ರೂ ಸೆಲೆಕ್ಟರ್ಸ್ ಕಡೆಗಣಿಸಿದ್ದಾರೆ. ಇದ್ರೊಂದಿಗೆ ಶಮಿಯನ್ನ ಬಿಟ್ಟು ಟೀಮ್ ಇಂಡಿಯಾ ಮುಂದೆ ಸಾಗ್ತಿದೆ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/Axar_Patel-3.jpg)
ಅಕ್ಷರ್ ಪಟೇಲ್ ಕತೆ ಏನು..?
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಏಕದಿನ ತಂಡದ ಭಾಗವಾಗಿದ್ದ ಅಕ್ಷರ್ ಪಟೇಲ್ನ ಸೌತ್ ಆಫ್ರಿಕಾ ಸರಣಿಯಿಂದ ಡ್ರಾಪ್ ಮಾಡಲಾಗಿತ್ತು. ಇದೀಗ ನ್ಯೂಜಿಲೆಂಡ್ ಸರಣಿಯ ತಂಡದಿಂದಲೂ ಅಕ್ಷರ್ ಪಟೇಲ್ ಹೊರಬಿದ್ದಿದ್ದಾರೆ. ಅಕ್ಷರ್ ಬದಲಾಗಿ ಸೆಲೆಕ್ಷನ್ ಕಮಿಟಿ ಜಡೇಜಾನ ಬ್ಯಾಕ್ ಮಾಡಿದೆ. ಇದು ಅಕ್ಷರ್ ಪಟೇಲ್ 2027ರ ಏಕದಿನ ವಿಶ್ವಕಪ್ ಪ್ಲಾನ್ನಲ್ಲಿ ಇದ್ದಾರಾ.? ಇಲ್ವಾ.? ಅನ್ನೋ ಗೊಂದಲವನ್ನ ಮೂಡಿಸಿದೆ.
/newsfirstlive-kannada/media/media_files/2025/09/02/bcci-1-2025-09-02-22-44-54.jpg)
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿ ತಂಡದಲ್ಲಿ ಸ್ಥಾನದ ನಿರೀಕ್ಷೆಯಿಟ್ಟಿದ್ದ ಆಟಗಾರರಿಗೆ ಈ ಬಾರಿಯೂ ನಿರಾಸೆಯಾಗಿದೆ. ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ನಡೆಯನ್ನ ನೋಡಿದ್ರೆ, ಕಿವೀಸ್ ವಿರುದ್ಧದ ತಂಡವೇ ವಿಶ್ವಕಪ್ ಟೂರ್ನಿಗೆ ಫೈನಲ್ ಎನಿಸಿದೆ. ಯಾರಾದ್ರೂ ಇಂಜುರಿಗೆ ತುತ್ತಾದ್ರೆ ಅಥವಾ ಫಾರ್ಮ್ ಕಳೆದುಕೊಂಡರೇ ಮಾತ್ರ ಬೇರೆಯವರಿಗೆ ಅವಕಾಶ ಸಿಗಲಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us