ಅಭ್ಯಾಸ ಪಂದ್ಯದಲ್ಲಿ ಪಾಸ್​.. ವಿಶ್ವಕಪ್​​ಗಾಗಿ ನಡೆದ ಪ್ರಯೋಗಗಳು ಏನೇನು..?

T20 ವಿಶ್ವಕಪ್​ಗೂ ಮುನ್ನ ನಡೆದ ರಿಹರ್ಸಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಸ್ ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಡಿದ್ದ ಎಕ್ಸ್​​ಪೀರಿಮೆಂಟ್ ಸಕ್ಸಸ್ ಆಗಿದೆ. ಅಭ್ಯಾಸ ಪಂದ್ಯದಲ್ಲಿ ನಡೆದ ಪ್ರಯೋಗಗಳೇನು?

author-image
Ganesh Kerekuli
team india (12)
Advertisment

ನವೀ ಮುಂಬೈನಲ್ಲಿ ನಡೆದ ಅಭ್ಯಾಸ ಪಂದ್ಯ ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಟೀಮ್ ಇಂಡಿಯಾಕ್ಕೆ ಸಾಕಷ್ಟು ಪಾಸಿಟಿವ್​​​ ಅಂಶಗಳು ಸಿಕ್ಕಿವೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ, ಟೀಮ್ ಕಾಂಬಿನೇಷನ್, ಸ್ಟ್ರಾಟಜಿ ಎಲ್ಲವನ್ನೂ ಎಕ್ಸ್​ಪೀರಿಮೆಂಟ್ ಮಾಡಿದ್ದ ಟೀಮ್ ಮ್ಯಾನೇಜ್ಮೆಂಟ್​​ಗೆ, ವಿಶ್ವಕಪ್​ಗೂ ಮುನ್ನ ಕ್ಲಾರಿಟಿ ಸಿಕ್ಕಿದೆ. ಆ ಮೂಲಕ ಮೆಗಾ ಟೂರ್ನಿಗೂ ಮುನ್ನ ಎಲ್ಲಾ ಗೊಂದಲಗಳು ಮಾಯವಾಗಿವೆ.  

ಇಶಾನ್ ಕಿಶನ್-ಅಭಿಷೇಕ್ ಓಪನರ್ಸ್

ಔಟ್ ಆಫ್ ಫಾರ್ಮ್ ಸಂಜು ಸ್ಯಾಮ್ಸನ್​​​​​​, T20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯೋದು ಅನುಮಾನ. ಅಭ್ಯಾಸ ಪಂದ್ಯದಲ್ಲಿ ಅಭಿಷೇಕ್ ಶರ್ಮಾಗೆ ಇಶಾನ್ ಸಾಥ್ ನೀಡಿ, ಸಕ್ಸಸ್​​ ಕೂಡ ಆದ್ರು. ಇದೇ ಡೆಡ್ಲಿ ಜೋಡಿಯನ್ನ ವಿಶ್ವಕಪ್​ನಲ್ಲೂ ಕಣಕ್ಕಿಳಿಸೋ ಚಿಂತನೆಯನ್ನ, ಸದ್ಯ ಟೀಮ್ ಮ್ಯಾನೇಜ್ಮೆಂಟ್​ ಮಾಡುತ್ತಿದೆ. ​​​   

ಶಸ್ತ್ರಚಿಕಿತ್ಸೆಯ ಬಳಿಕ ಸಂಪೂರ್ಣ ಚೇತರಿಸಿಕೊಂಡಿರುವ ತಿಲಕ್ ವರ್ಮಾ ಫಿಟ್ನೆಸ್ ಮೇಲೆ ಡೌಟ್ ಇತ್ತು. ಆದ್ರೆ ತಿಲಕ್, ತಾನು ಫುಲ್ ಫಿಟ್ ಅಂತ ಪ್ರೂವ್ ಮಾಡಿದ್ದಾನೆ. ಅಭ್ಯಾಸ ಪಂದ್ಯದಲ್ಲೂ ತನ್ನ ಬ್ಯಾಟಿಂಗ್ ಜಲಕ್ ತೋರಿಸಿರುವ ಹೈದ್ರಾಬಾದ್ ಬ್ಯಾಟರ್, ಟಾಪ್ ಆರ್ಡರ್​​ನಲ್ಲಿ ಸ್ಥಾನ ಫಿಕ್ಸ್ ಮಾಡಿಕೊಂಡಿದ್ದಾನೆ. 

ಇದನ್ನೂ ಓದಿ: ಬೆಂಗಳೂರಲ್ಲಿ ಗರ್ಭಿಣಿ ಬೆಕ್ಕಿನ ವಿಚಾರಕ್ಕೆ ಎಫ್​ಐಆರ್ ದಾಖಲು..!

ಟೀಮ್ ಇಂಡಿಯಾಕ್ಕೆ ಸ್ವಲ್ಪ ಗೊಂದಲ ಇದ್ದಿದ್ದೇ, ಕೆಳಕ್ರಮಾಂಕದಲ್ಲಿ. ಬ್ಯಾಟಿಂಗ್ ಡೆಪ್ತ್ ಸ್ಟ್ರೆಂಥ್ ಮಾಡಲು ಮುಂದಾಗಿದ್ದ ಮ್ಯಾನೇಜ್ಮೆಂಟ್​​ಗೆ, ಇದೀಗ ಕ್ಲ್ಯಾರಿಟಿ ಸಿಕ್ಕಿದೆ. ರಿಂಕು ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯರನ್ನ, ಫಿನಿಷರ್ ರೋಲ್​ನಲ್ಲಿ ನೋಡಲಾಗ್ತಿದೆ. ಹಾಗಾಗಿ ಟಾಪ್ 6 ಮತ್ತು ಟಾಪ್ 7ನಲ್ಲಿ ಇಬ್ಬರಲ್ಲಿ ಒಬ್ಬರು ಬ್ಯಾಟ್ ಬೀಸಲಿದ್ದಾರೆ. 

ನವೀ ಮುಂಬೈನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಆರ್ಭಟ ನೋಡಿ, ಒಂದಂತೂ ನಿಜ ಅನಿಸಿದೆ. ವಿಶ್ವಕಪ್​ನಲ್ಲೂ ಟೀಮ್ ಇಂಡಿಯಾ ಬ್ಯಾಟರ್ಸ್​ ಅಗ್ರೆಸಿವ್ ಬ್ಯಾಟಿಂಗ್ ಅಪ್ರೋಚ್ ಮೊರೆ ಹೋಗಲಿದ್ದಾರೆ. ದಂಡಂ ದಶಗುಣಂ ಮಂತ್ರ ಅನುಸರಿಸಲಿದ್ದಾರೆ. ಆ ಮೂಲಕ ಎದುರಾಳಿಗಳ ಮೇಲೆ ಒತ್ತಡ ಏರೋಕೆ ಮುಂದಾಗಲಿದ್ದಾರೆ. ಇದು ಅತ್ಯುತ್ತಮ ಮೈಂಡ್ ಗೇಮ್ ಕೂಡ ಹೌದು.​​​

ಟೀಮ್ ಇಂಡಿಯಾ ಬೌಲಿಂಗ್ ಕಾಂಬಿನೇಷನ್​​​​ನಲ್ಲಿ ಎಂದಿನಂತೆ ಗೊಂದಲ ಇದೆ. ಪೇಸರ್ಸ್ ಯಾರು, ಸ್ಪಿನ್ನರ್ಸ್ ಯಾಱರು ಅನ್ನೋದು ಸ್ಪಷ್ಟತೆ ಇಲ್ಲ. ಟೀಮ್ ಇಂಡಿಯಾ ವಿಶ್ವಕಪ್​ನಲ್ಲಿ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಹೋರಾಟ ನಡೆಸಲಿದೆ. ಸೂರ್ಯಕುಮಾರ್ ಯಾದವ್ ಪಡೆಗೆ ಸಕ್ಸಸ್​ ಸಿಗಲೆಂದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.    

ಇದನ್ನೂ ಓದಿ: ಪಿಓಕೆ, ಆಕ್ಸಾಯ್ ಚೀನಾ ಭಾರತದ ಭಾಗವಾಗಿ ತೋರಿಸುವ ನಕಾಶೆ ಬಿಡುಗಡೆ ಮಾಡಿದ ಅಮೆರಿಕಾ: ಉರಿದುಕೊಂಡ ಪಾಕಿಸ್ತಾನ, ಚೀನಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup Team India
Advertisment