Advertisment

ಮೊದಲ ಬಾರಿ ವಿಶ್ವಕಪ್​ಗೆ ಮುತ್ತಿಟ್ಟ ಭಾರತೀಯ ನಾರಿಯರು.. ಫೈನಲ್​ನಲ್ಲಿ ಹೇಗಿತ್ತು ಪರ್ಫಾಮೆನ್ಸ್​?

ಮಳೆಯಿಂದ ತಡವಾಗಿ ಶುರುವಾದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಟಾಸ್ ಸೋತ ಭಾರತದ ವನಿತೆಯರು, ಮೊದಲು ಬ್ಯಾಟಿಂಗ್ ನಡೆಸಿದರು. ಓಪನರ್ ಶಫಾಲಿ ವರ್ಮಾ, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿದರು.

author-image
Bhimappa
WORLD_CUP_IND
Advertisment

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು, ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಶಫಾಲಿ ವರ್ಮಾರ ಬಿರುಸಿನ ಬ್ಯಾಟಿಂಗ್ ಮತ್ತು ದೀಪ್ತಿ ಶರ್ಮಾರ ಜವಾಬ್ದಾರಿಯುತ ಆಟದಿಂದ, ಟೀಮ್ ಇಂಡಿಯಾ ಬಿಗ್ ಸ್ಕೋರ್ ಕಲೆಹಾಕಿತು. ಡಿ.ವೈ ಪಾಟೀಲ್ ಸ್ಟೇಡಿಯಮ್​ನಲ್ಲಿ ಹರ್ಮನ್​ಪ್ರೀತ್ ಕೌರ್ ಪಡೆ ಬ್ಯಾಟಿಂಗ್ ಭರ್ಜರಿಯಾಗಿತ್ತು.

Advertisment

ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಕನಸು ನನಸಾಗಿದೆ. ಚೊಚ್ಚಲ ಏಕದಿನ ವಿಶ್ವಕಪ್​ಗೆ ಟ್ರೋಫಿಗೆ ಟೀಮ್​ ಇಂಡಿಯಾ ಮುತ್ತಿಕ್ಕಿದೆ. ಡ್ರೀಮ್​ ಸಿಟಿ ಮುಂಬೈನ ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಿನ್ನೆ ವಂದೇ ಮಾತರಂ ಜಯಘೋಷ ಮುಗಿಲೆತ್ತರಕ್ಕೆ ಮೊಳಗಿತು. ಫೈನಲ್​ ಫೈಟ್​ನಲ್ಲಿ ಸೌತ್​​​ ಆಫ್ರಿಕಾವನ್ನ 52 ರನ್​ಗಳ ಅಂತರದಲ್ಲಿ ಸೋಲಿಸಿ ಭಾರತದ ವೀರ ವನಿತೆಯರು ಮೊಟ್ಟ ಮೊದಲಬಾರಿಗೆ ಏಕದಿನ ಚಾಂಪಿಯನ್​ ಪಟ್ಟವೇರಿದೆ. 2005, 2017.. 2 ಬಾರಿ ವಿಶ್ವಕಪ್​ ಫೈನಲ್ಸ್​ನಲ್ಲಿ ಮುಖಭಂಗ ಅನುಭವಿಸಿದ್ದ ಟೀಮ್​ ಇಂಡಿಯಾ ಈಗ ಏಕದಿನ ವಿಶ್ವಕಪ್​ನ ನೂತನ ಅಧಿಪತಿಯಾಗಿದೆ.

IND_WORLD_CUP

ಶಫಾಲಿ, ಸ್ಮೃತಿ ಬೊಂಬಾಟ್ ಶತಕದ ಜೊತೆಯಾಟ..!

ಮಳೆಯಿಂದ ತಡವಾಗಿ ಶುರುವಾದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ, ಟಾಸ್ ಸೋತ ಭಾರತದ ವನಿತೆಯರು, ಮೊದಲು ಬ್ಯಾಟಿಂಗ್ ನಡೆಸಿದರು. ಓಪನರ್ ಶಫಾಲಿ ವರ್ಮಾ, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿ ಪವರ್​ ಪ್ಲೇನಲ್ಲಿ ತಂಡಕ್ಕೆ ಪವರ್​​ಫುಲ್ ಸ್ಟಾರ್ಟ್​​ ನೀಡಿದರು. ಒಂದೆಡೆ ಶಫಾಲಿ ಬಿರುಸಿನ ಬ್ಯಾಟಿಂಗ್ ನಡೆಸ್ತಿದ್ರೆ, ಮತ್ತೊಂದೆಡೆ ಅನುಭವಿ ಸ್ಮೃತಿ ಮಂದಾನ, ಎಚ್ಚರಿಕೆಯ ಆಟವಾಡಿದರು. ಶಫಾಲಿಗೆ ಒಳ್ಳೆ ಸಾಥ್ ನೀಡಿ ಮೊದಲ ವಿಕೆಟ್​ಗೆ 104 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದರು.

45 ರನ್​ಗಳಿಸಿ ಸ್ಮೃತಿ ಔಟ್, ಕಾಕಾ ಡಬಲ್ ಸ್ಟ್ರೈಕ್..!

58 ಎಸೆತಗಳಲ್ಲಿ 45 ರನ್​ಗಳಿಸಿದ್ದ ಸ್ಮೃತಿ, ಎಡಗೈ ಸ್ಪಿನ್ನರ್ ಕ್ಲೋಯ್‌ ಟ್ರಯಾನ್‌ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. 3ನೇ ವಿಕೆಟ್​ಗೆ ಶಫಾಲಿ ಮತ್ತು ಜೆಮಿಮಾ ರಾಡ್ರಿಗಸ್‌, 62 ರನ್​ಗಳ ಜೊತೆಯಾಟವಾಡಿದರು. ಈ ನಡುವೆ ಶಫಾಲಿ 87 ರನ್​ಗಳಿಸಿ, ಮೀಡಿಯಮ್ ಪೇಸರ್ ಕಾಕಾ ಬೌಲಿಂಗ್​ನಲ್ಲಿ ಔಟಾದರು. ಜೆಮಿಮಾ ಸಹ 24 ರನ್​ಗಳಿಸಿ, ಕಾಕಾಗೆ 2ನೇ ಬಲಿಯಾದರು.

Advertisment

ದೀಪ್ತಿ ಜವಾಬ್ದಾರಿಯುತ ಬ್ಯಾಟಿಂಗ್, ಎಡವಿದ ಹರ್ಮನ್..!   

ಜೆಮಿಮಾ ಔಟಾಗ್ತಿದಂತೆ ದೀಪ್ತಿ ಶರ್ಮಾ ಜೊತೆಯಾದ ನಾಯಕಿ ಹರ್ಮನ್​ಪ್ರೀತ್ ಕೌರ್, ಆರಂಭದಿಂದಲೇ ಡಿಫೆನ್ಸೀವ್ ಮೂಡ್​ನಲ್ಲಿದ್ದಂತೆ ಕಂಡರು. ನಂತರ ಗೇರ್ ಶಿಫ್ಟ್ ಮಾಡಿದ ಹರ್ಮನ್, ವೇಗಿವಾಗಿ ರನ್​ಗಳಿಸಲು ಶುರುಮಾಡಿದ್ರು. ದೀಪ್ತಿ ಜೊತೆಗೂಡಿ 52 ರನ್​​ ದಾಖಲಿಸಿದರು. 20 ರನ್​ಗಳಿಸಿದಾದ ಎಡಗೈ ಸ್ಪಿನ್ನರ್ ಮ್ಲಾಬಾ ಬೌಲಿಂಗ್​ನಲ್ಲಿ ಕಟ್ ಮಾಡಲು ಹೋದ ಹರ್ಮನ್​​ಪ್ರೀತ್, ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಅಮನ್​ಜೋತ್ ಕೌರ್, 12 ರನ್​ಗಳಿಸಿ ಡಿ ಕ್ಲಾಕ್ ಬೌಲಿಂಗ್​ನಲ್ಲಿ, ಕಾಟ್ ಌಂಡ್ ಬೌಲ್ಡ್ ಆದ್ರು.

South africa vs india (2)

ದೀಪ್ತಿ, ರಿಚಾ ಮಿಂಚು, ಭಾರತ 50 ಓವರ್​ಗಳಲ್ಲಿ 298/7

ಡೆತ್ ಓವರ್​ಗಳಲ್ಲಿ ರಿಚಾ ಘೋಷ್, ಬಿರುಸಿನ ಬ್ಯಾಟಿಂಗ್ ನಡೆಸಿದರು. 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ ರಿಚಾ ಘೋಷ್, 34 ರನ್​ಗಳಿಸಿ ಹೋರಾಟ ಅಂತ್ಯಗೊಳಿಸಿದರು. ಕೊನೆಯ ಎಸೆತದಲ್ಲಿ ದೀಪ್ತಿ ಶರ್ಮಾ ರನ್​ಔಟ್ ಆದ್ರು. 58 ಎಸೆತಗಳಲ್ಲಿ 58 ರನ್​ಗಳಿಸಿದ ದೀಪ್ತಿ, ತಂಡದ ಮೊತ್ತ 300ರ ಸಮೀಪ ಕೊಂಡೊಯ್ಯಲು ಕಾರಣರಾದ್ರು. ಅಂತಿಮವಾಗಿ ಭಾರತ ವನಿತೆಯರು 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 298 ರನ್​ಗಳಿಸಿದ್ರು.

ಶೆಫಾಲಿ ಸ್ಪಿನ್​ ಮ್ಯಾಜಿಕ್​.. ಸೌತ್​​ ಆಫ್ರಿಕಾಗೆ ಡಬಲ್​ ಶಾಕ್​.!​

ದಕ್ಷಿಣ ಆಫ್ರಿಕಾ ಪರ ವೇಗಿ ಕಾಕಾ 3 ವಿಕೆಟ್ ಪಡೆದರು. ಆ ಮೂಲಕ ಟೀಮ್ ಇಂಡಿಯಾ, ಸೌತ್ ಆಫ್ರಿಕಾ ತಂಡಕ್ಕೆ 299 ರನ್​ಗಳ ಟಾರ್ಗೆಟ್ ಸೆಟ್ ಮಾಡಿತ್ತು. ಬ್ಯಾಟಿಂಗ್​ನಲ್ಲಿ ಬಿಗ್​ ಟಾರ್ಗೆಟ್​ ಸೆಟ್​ ಮಾಡಿದ ಟೀಮ್​ ಇಂಡಿಯಾ ಆಟಗಾರ್ತಿಯರು ಬೌಲಿಂಗ್​ನಲ್ಲೂ ಚಮತ್ಕಾರ ಮಾಡಿದ್ರು. ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಶ್ರೀ ಚರಣಿಯ ಸ್ಪಿನ್​ ಮೋಡಿಗೆ ಸೌತ್​ ಆಫ್ರಿಕಾ ಬ್ಯಾಟರ್ಸ್​ ಸ್ಟನ್​ ಆದರು. 

Advertisment

ಸೆಕೆಂಡ್​ ಹಾಫ್​ನಲ್ಲೂ ಬೊಂಬಾಟ್​ ಪರ್ಫಾಮೆನ್ಸ್​ ನೀಡಿ ಭಾರತೀಯ ನಾರಿಯರು ಕೋಟ್ಯಂತರ ಅಭಿಮಾನಿಗಳ ಕನಸನ್ನ ನನಸು ಮಾಡಿದ್ರು. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಕಮಾಲ್ ಮಾಡಿದ್ದ ಶೆಫಾಲಿ ವರ್ಮಾ, ಬೌಲಿಂಗ್‌ನಲ್ಲೂ ಸೌತ್​ ಆಫ್ರಿಕಾಗೆ ಡಬಲ್​ ಶಾಕ್​ ನೀಡಿದ್ರು.

ಇದನ್ನೂ ಓದಿ:ನಿಂತಿದ್ದ ಟ್ರಕ್​ಗೆ ಭೀಕರವಾಗಿ ಮಿನಿ ಬಸ್ ಡಿಕ್ಕಿ.. ಸ್ಥಳದಲ್ಲೇ ಪ್ರಾಣ ಬಿಟ್ಟ 15 ಯಾತ್ರಿಗಳು​

WORLD_CUP_IND_1

42ನೇ ಓವರ್​​ನಲ್ಲಿ ಗೇಮ್​ ಚೇಂಜ್​ ಮಾಡಿದ ದೀಪ್ತಿ.!

42 ಓವರ್​​ನಲ್ಲಿ ದಾಳಿಗಿಳಿದ ದೀಪ್ತಿ ಶರ್ಮಾ ಸೌತ್​ ಆಫ್ರಿಕಾದ ಗೆಲುವಿನ ಕನಸನ್ನ ನುಚ್ಚು ನೂರು ಮಾಡಿದ್ರು. ಮೊದಲ ಎಸೆತದಲ್ಲೇ ನಾಯಕಿ ವೋಲ್ವಾರ್ಟ್​ ಅಮನ್​ಜೋತ್​ ಕೌರ್​ ಹಿಡಿದ ಮ್ಯಾಜಿಕಲ್​ ಕ್ಯಾಚ್​ಗೆ ಬಲಿಯಾದರು. 4ನೇ ಎಸೆತದಲ್ಲಿ ಚೋಲೆ ಟ್ರೈಯನ್​​ ಆಟಕ್ಕೆ ದೀಪ್ತಿ ಅಂತ್ಯ ಹಾಡಿದ್ರು. ಈ 2 ವಿಕೆಟ್​ ಪತನ ಟೀಮ್​ ಇಂಡಿಯಾವನ್ನ ಗೆಲುವಿನ ಹೊಸ್ತಿನಲ್ಲಿ ತಂದು ನಿಲ್ಲಿಸ್ತು.

Advertisment

ಅಯಾಬೊಂಗಾ ಕಾಕಾ ರನೌಟ್​ ಆದ್ರೆ, ನದೀನ್​ ಡಿ ಕ್ಲರ್ಕ್​ 18 ರನ್​ಗಳಿಗೆ ಅಂತ್ಯವಾಯ್ತು. 45.3ನೇ ಓವರ್​​ನಲ್ಲಿ ಡಿ ಕ್ಲರ್ಕ್​ ವಿಕೆಟ್ ಪತನದೊಂದಿಗೆ ಟೀಮ್​ ಇಂಡಿಯಾ ಇತಿಹಾಸ ಸೃಷ್ಟಿಸಿತು. 52 ರನ್​ಗಳ ಗೆಲುವಿನೊಂದಿಗೆ ಚೊಚ್ಚಲ ಏಕದಿನ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿತು. ಅಸಂಖ್ಯ ಭಾರತೀಯ ಅಭಿಮಾನಿಗಳ ಕನಸು ನನಸಾಯ್ತು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Women's World Cup ODI World Cup 2025
Advertisment
Advertisment
Advertisment