T20 World Cup: ಗಿಲ್ ಕಿಕ್​​ಔಟ್! ಕ್ರಿಕೆಟ್ ಲೋಕದ ಪ್ರಿನ್ಸ್​ಗೆ ದೊಡ್ಡ ಆಘಾತ..!

ಟಿ-20 ವಿಶ್ವಕಪ್​​-2026ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯು 15 ಸದಸ್ಯರುಳ್ಳ ಆಟಗಾರರ ತಂಡವನ್ನು ಪ್ರಕಟಿಸಿದೆ. ರಿಂಕು ಸಿಂಗ್, ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅಚ್ಚರಿಯ ಆಯ್ಕೆ ಅಂದ್ರೆ ಕ್ರಿಕೆಟ್ ಲೋಕದ ಪ್ರಿನ್ಸ್ ಗಿಲ್​​ಗೆ ಸ್ಥಾನ ಇಲ್ಲ.

author-image
Ganesh Kerekuli
Gill (1)
Advertisment

ಟಿ-20 ವಿಶ್ವಕಪ್​​-2026ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ಅಜಿತ್ ಅಗರ್ಕರ್​ ನೇತೃತ್ವದ ಆಯ್ಕೆ ಸಮಿತಿಯು 15 ಸದಸ್ಯರುಳ್ಳ ಆಟಗಾರರ ತಂಡವನ್ನು ಪ್ರಕಟಿಸಿದೆ. ರಿಂಕು ಸಿಂಗ್, ಇಶಾನ್ ಕಿಶನ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅಚ್ಚರಿಯ ಆಯ್ಕೆ ಅಂದ್ರೆ ಕ್ರಿಕೆಟ್ ಲೋಕದ ಪ್ರಿನ್ಸ್ ಶುಬ್ಮನ್​ ಗಿಲ್​​ಗೆ ಸ್ಥಾನ ಇಲ್ಲ. 

ಟಿ-20 ವಿಶ್ವಕಪ್ ತಂಡದಿಂದ ಶುಬ್ಮನ್ ಗಿಲ್ ಹೊರ ಬಿದ್ದಿದ್ದಾರೆ. ಜತೆಗೆ ಯಶಸ್ವಿ ಜೈಸ್ವಾಲ್​ಗೂ ಕೂಡ ತಂಡದಲ್ಲಿ ಜಾಗವಿಲ್ಲ. ವಿಶೇಷ ಅಂದ್ರೆ ಅಕ್ಸರ್ ಪಟೇಲ್​ಗೆ ಉಪನಾಯಕನ ಜವಾಬ್ದಾರಿ ಸಿಕ್ಕಿದೆ. ಹಾಗೆ ಬಹುದಿನಗಳ ನಂತರ ಇಶಾನ್ ಕಿಶನ್, ರಿಂಕು ಸಿಂಗ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. 

ಕ್ಯಾಪ್ಟನ್ ಕನಸಿಗೆ ಕೊಕ್ಕೆ

ಶುಬ್ಮನ್ ಗಿಲ್ ಮೂರು ಮಾದರಿಯ ಕ್ರಿಕೆಟ್​ಗೆ ಕ್ಯಾಪ್ಟನ್ ಆಗುವ ಕನಸು ಕಂಡಿದ್ದರು. ಈಗಾಗಲೇ ಏಕದಿನ, ಟೆಸ್ಟ್​ಗೆ ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಮ್ಯಾಚ್​ಗೆ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಟಿ-20 ಮಾದರಿಯಲ್ಲಿ ಫಾರ್ಮ್ ಕಳೆದುಕೊಂಡ ಹಿನ್ನೆಲೆಯಲ್ಲಿ ಡ್ರಾಪ್ ಮಾಡಲಾಗಿದೆ. ಇದು ಗಿಲ್ ಅವರಿಗೆ ನುಂಗಲಾರದ ತುತ್ತಾಗಿದೆ. 

ತಂಡದಲ್ಲಿ ಯಾಱರು..?  

ತಂಡದಲ್ಲಿ ಯಾರಿಗೆಲ್ಲ ಚಾನ್ಸ್ ಸಿಕ್ಕಿದೆ ಎಂದು ನೋಡೋದಾದರೆ.. ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ,  ಶಿವಂ ದುಬೆ, ಅಕ್ಷರ್ ಪಟೇಲ್ (ವಾಯ್ಸ್ ಕ್ಯಾಪ್ಟನ್, ಇಶಾನ್ ಕಿಶನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಆರ್ಷ್​ದೀಪ್ ಸಿಂಗ್, ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL Rahul T20 Shubman Gill T20I T20 world cup team india squad
Advertisment