/newsfirstlive-kannada/media/media_files/2025/08/10/dhoni_kohli_sachin-2025-08-10-11-55-44.jpg)
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಲೋಕದ ಕಿಂಗ್. ಮಾಡ್ರನ್ ಡೇ ಲೆಜೆಂಡ್ ಆಗಿ ಇನ್ನಿಲ್ಲದ ದಾಖಲೆಗಳನ್ನೆಲ್ಲಾ ಕಬ್ಜ ಮಾಡಿದ್ದಾರೆ. ದಿಗ್ಗಜ ಆಟಗಾರರನ್ನೆಲ್ಲಾ ಮೀರಿಸಿದ್ದಾರೆ. ಆದ್ರೆ, ವಿರಾಟ್ ಕೊಹ್ಲಿ ಎಷ್ಟೇ ಸಾಧನೆ ಮಾಡಿದರೂ ದಾಖಲೆಗಳನ್ನ ಬರೆದರೂ, ಈ ಒಂದು ವಿಚಾರದಲ್ಲಿ ಧೋನಿ, ಸಚಿನ್ರನ್ನ ಮಿರಿಸೋಕೆ ಆಗಿಲ್ಲ.
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಮಾಡ್ರನ್ ಡೇ ಲೆಜೆಂಡ್. ಬ್ಯಾಟಿಂಗ್ ವೈಖರಿ, ಅಗ್ರೆಸ್ಸಿವ್ ಆ್ಯಟಿಟ್ಯೂಡ್ನಿಂದಲೇ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನ ಸಂಪಾದಿಸಿರೋ ಕಿಂಗ್. ಆನ್ಫೀಲ್ಡ್ ಜೊತೆಗೆ ಆಫ್ ದ ಫೀಲ್ಡ್ನಲ್ಲಿ ಬರೆಯದ ದಾಖಲೆಗಳಿಲ್ಲ. ಫಾಲೋವರ್ಗಳಿಂದ ಹಿಡಿದು ಆನ್ಫೀಲ್ಡ್ನಲ್ಲಿ ಬರೆದ ದಾಖಲೆಗಳು ಲೆಕ್ಕಕ್ಕಿಲ್ಲ. ಆದ್ರೆ. ಸಂಪತ್ತಿನ ವಿಚಾರದಲ್ಲಿ, ಶ್ರೀಮಂತ ಕ್ರಿಕೆಟರ್ಗಳ ವಿಚಾರದಲ್ಲಂತೂ ಹಿಂದಿದ್ದಾರೆ.
ಒಂದಲ್ಲ.. ಎರಡಲ್ಲ ಬರೋಬ್ಬರಿ 170 ಮಿಲಿಯನ್ ಒಡೆಯ
ಸಚಿನ್ ತೆಂಡುಲ್ಕರ್ ಗಾಡ್ ಆಫ್ ಕ್ರಿಕೆಟ್. ದಾಖಲೆಗಳಿಗೆ ಕೇರ್ ಆಫ್ ಅಡ್ರೆಸ್. ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಕೆಯ ಒಡೆಯ. ಆದ್ರೆ, ರನ್ ಗಳಿಕೆಗೆ ಮಾತ್ರವೇ ಅಲ್ಲ. ಸಂಪತ್ತಿನ ವಿಚಾರದಲ್ಲೂ ನಂಬರ್- 1.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿ 12 ವರ್ಷಗಳಾದರು. ಬ್ರಾಂಡ್ ಅಂಬಾಸಡರ್ ಆಗಿ, ವ್ಯಾಪಾರ ಉದ್ಯಮಗಳಲ್ಲಿ ಕೋಟಿ ಕೋಟಿ ಗಳಿಸ್ತಾರೆ. ಸ್ಪೋರ್ಟ್ಸ್ ಅಕಾಡೆಮಿಗಳು, ಹೋಟೆಲ್ಸ್, ಸ್ಟಾರ್ಟ್ಅಪ್‌ಗಳಲ್ಲಿನ ಹೂಡಿಕೆಗಳಿಂದ ಕೋಟಿ ಕೋಟಿ ಗಳಿಸುವ ಮಾಸ್ಟರ್ ಬ್ಲಾಸ್ಟರ್ ಸಚಿನ್, ಬರೋಬ್ಬರಿ 170 ಮಿಲಿಯನ್ ಡಾಲರ್ ಒಡೆಯ. ಅಂದ್ರೆ, ಭಾರತೀಯ ರೂಪಾಯಿಗಳಲ್ಲಿ 1,491 ಕೋಟಿಗೂ ಅಧಿಕ ಮೌಲ್ಯದ ಸಂಪತ್ತು.
ಮಿಸ್ಟರ್ ಕೂಲ್ ಮಾಹಿಯೇ ನಂ.2 ರಿಚೆಸ್ಟ್ ಕ್ರಿಕೆಟರ್..!
ಎಂ.ಎಸ್.ಧೋನಿ ವಿಶ್ವ ಕ್ರಿಕೆಟ್‌ನ ಗ್ರೇಟ್ ಕ್ಯಾಪ್ಟನ್ & ಲೀಡರ್. ವಿಶ್ವ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳಿ 6 ವರ್ಷವಾಯ್ತು. ಈಗಲೂ ಗಳಿಕೆಯಲ್ಲಿ ಧೋನಿ ಹಿಂದೆ ಬಿದ್ದಿಲ್ಲ. ಕೇವಲ ಐಪಿಎಲ್ ಆಡಿದ್ರೂ, ಕಾರ್ಪೋರೇಟ್ ಜಗತ್ತಿನ ಡಾರ್ಲಿಂಗ್ ಆಗಿದ್ದಾರೆ. ಫಿಟ್ನೆಸ್, ಸಿನಿಮಾ ಸೇರಿದಂತೆ ಕೆಲ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಧೋನಿ, ಬಿಗ್ ಬ್ರಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ. ಇದರಿಂದ ಕೋಟಿ ಕೋಟಿ ಗಳಿಸುವ ಧೋನಿಯ ಒಟ್ಟು ಆಸ್ತಿ ಮೌಲ್ಯ, 111 ಮಿಲಿಯನ್ ಯುಎಸ್ ಡಾಲರ್. ಅಂದ್ರೆ,
ಟಾಪ್-10ನಲ್ಲಿ ಭಾರತೀಯ ಕ್ರಿಕೆಟರ್ಗಳದ್ದೇ ಸಿಂಹಪಾಲು
ಸದ್ಯ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಲೋಕದ ಕಿಂಗ್. ಆದ್ರೆ, ಸೋಶಿಯಲ್ ಮೀಡಿಯಾದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ವಿರಾಟ್, One8, Wrogn ಫ್ಯಾಷನ್ ಬ್ರಾಂಡ್‌ಗಳ ಮಾಲೀಕತ್ವ ಹೊಂದಿದ್ದಾರೆ. ಯಶಸ್ಸು ಗಳಿಸ್ತಿದ್ದಾರೆ. ಸದ್ಯ ಕೇವಲ ಏಕದಿನ, ಐಪಿಎಲ್ನಲ್ಲಿ ಮಾತ್ರವೇ ಆಡ್ತಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ಲೋಕದ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಆನ್ಫೀಲ್ಡ್ಗಿಂತ ಆಫ್ ದಿ ಫೀಲ್ಡ್ನಲ್ಲೇ ಹೆಚ್ಚು ಗಳಿಕೆ ಮಾಡುವ ಕೊಹ್ಲಿಯ ನಿವ್ವಳ ಸಂಪತ್ತು 92 ಮಿಲಿಯನ್ ಯುಎಸ್ ಡಾಲರ್.
ವಿಶ್ವದ ಶ್ರೀಮಂತ ಕ್ರಿಕೆಟರ್ಗಳ ಪಟ್ಟಿ
ಆಟಗಾರರ ಹೆಸರು | ಸ್ಥಾನ | ನಿವ್ವಳ ಆಸ್ತಿ ಮೌಲ್ಯ |
ರಿಕಿ ಪಾಂಟಿಂಗ್ | 4 | $70M |
ಬ್ರಿಯಾನ್ ಲಾರಾ | 5 | $60M |
ಶೇನ್ ವಾರ್ನ್ | 6 | $50M |
ಜಾಕ್ ಕಾಲಿಸ್ | 7 | $48M |
ವಿರೇಂದ್ರ ಸೆಹ್ವಾಗ್ | 8 | $40M |
ಶೇನ್ ವಾಟ್ಸಾನ್ | 9 | $40M |
ಯುವರಾಜ್ ಸಿಂಗ್ | 10 | $35M |
ಟಾಪ್-10 ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಬಿಟ್ರೆ, ಉಳಿದೆಲ್ಲ ಆಟಗಾರರು ಕ್ರಿಕೆಟ್ನಿಂದ ದೂರ ಉಳಿದವರೇ ಆಗಿರುವುದು ವಿಶೇಷ. ಆನ್ಫೀಲ್ಡ್ನಿಂದ ನೇಮ್, ಫೇಮು ಗಳಿಸುವ ಕ್ರಿಕೆಟರ್ಸ್, ಕ್ರಿಕೆಟ್ನಿಂದ ದೂರ ಉಳಿದಷ್ಟು ಹೆಚ್ಚೆಚ್ಚು ಲಾಭ ಗಳಿಸಬಲ್ಲರು. ಶ್ರೀಮಂತರಾಗಬಹುದು ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ