/newsfirstlive-kannada/media/media_files/2026/03/03/india-and-england-semi-final-match-2026-03-03-10-18-35.jpg)
ಟಿ20 ವಿಶ್ವಕಪ್ ನಲ್ಲಿ ಇಂಡಿಯಾ- ಇಂಗ್ಲೆಂಡ್ ಸೆಮಿ ಫೈನಲ್ ಪಂದ್ಯ
ಟಿ-20 ವಿಶ್ವಕಪ್​ ಮಹಾಸಮರ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಸೆಮಿಸ್​ ಸಮರಗಳಿಗೆ ಕೌಂಟ್​​ಡೌನ್​ ಆರಂಭವಾಗಿದ್ದು, ಟೀಮ್​ ಇಂಡಿಯಾಗೆ ಈ ಬಾರಿಯೂ ಇಂಗ್ಲೆಂಡ್ ಎದುರಾಳಿಯಾಗಿ ನಿಂತಿದೆ. ಟಿ20 ವಿಶ್ವಕಪ್​ ಟೂರ್ನಿಯ ಸೆಮಿಸ್​ನಲ್ಲಿ ಟೀಮ್​ ಇಂಡಿಯಾ ಹಾಗೂ ಇಂಗ್ಲೆಂಡ್​ನದ್ದು ಇಂಟರೆಸ್ಟಿಂಗ್​ ರೈವಲರಿ.! ಈ ರೈವಲರಿಯ ಸ್ಪೆಷಲ್​ ರಿಪೋರ್ಟ್​ ಇಲ್ಲಿದೆ ಓದಿ.
ಸೌತ್​​​ ಆಫ್ರಿಕಾ ಎದುರಿನ ಹೀನಾಯ ಸೋಲಿನ ಬಳಿಕ ಟೀಮ್​ ಇಂಡಿಯಾ ವಿಶ್ವಕಪ್​ನಿಂದ ಔಟ್​ ಎನ್ನಲಾಗಿತ್ತು. ಸೆಮಿಫೈನಲ್​ಗೆ ಎಂಟ್ರಿ ಕೊಡಲ್ಲ ಎಂಬ ಕಾಮನ್ ಚರ್ಚೆ ನಡೆದಿತ್ತು. ಆದ್ರೆ, ನಂತರದ 2 ಪಂದ್ಯಗಳಲ್ಲಿ ಸಾಲಿಡ್​ ಕಮ್​ಬ್ಯಾಕ್​ ಮಾಡಿದ ಮೆನ್​ ಇನ್​ ಬ್ಲ್ಯೂ ಪಡೆ ಸೆಮಿಸ್​ ಸೂಪರ್​ ಎಂಟ್ರಿಕೊಟ್ಟಿದೆ. ಈಡನ್​ ಗಾರ್ಡನ್ಸ್​ ಅಂಗಳದಲ್ಲಿ ಬಲಿಷ್ಠ ವಿಂಡೀಸ್​ ಪಡೆಯನ್ನ ಉಡೀಸ್​ ಮಾಡಿದ ಟೀಮ್​ ಇಂಡಿಯಾ ನಾಲ್ಕರ ಘಟ್ಟಕ್ಕೆ ರಾಯಲ್​ ಎಂಟ್ರಿ ಕೊಟ್ಟಿದೆ.
ಟಿ20 ವಿಶ್ವಕಪ್​ ಸೆಮಿಸ್​ಗೆ ಟೀಮ್​ ಇಂಡಿಯಾ ಸೂಪರ್​ ಎಂಟ್ರಿ.!
ಸತತ 3ನೇ ಬಾರಿ ಸೆಮಿಸ್​ನಲ್ಲಿ ಇಂಡೋ- ಇಂಗ್ಲೆಂಡ್​ ಫೈಟ್.!
ವಿಂಡೀಸ್​​ ಚಿಂದಿ ಉಡಾಯಿಸಿದ ಟೀಮ್ ಇಂಡಿಯಾ ಸತತ 3ನೇ ಬಾರಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿದೆ. ವಿಶೇಷ ಏನಂದ್ರೆ, 3 ಬಾರಿ ಕೂಡ ಟೀಮ್​ ಇಂಡಿಯಾ ಎದುರಿಸಿರೋದು ಇಂಗ್ಲೆಂಡ್​ ತಂಡವನ್ನೆ, 2022, 2024 ಇದೀಗ 2026ರ ವಿಶ್ವಕಪ್​ನಲ್ಲೂ ಟೀಮ್​ ಇಂಡಿಯಾಗೆ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ತಂಡವೇ ಎದುರಾಳಿಯಾಗಿದೆ. ಇನ್ನೂ, ವಿಶೇಷ ಏನಂದ್ರೆ, ಇವರಿಬ್ಬರ ಕಾಳಗದಲ್ಲಿ ಗೆದ್ದವರೇ ವಿಶ್ವಕಪ್​ ಟ್ರೋಫಿ ಕೂಡ ಗೆಲ್ತಾರೆ.!
2022ರ ವಿಶ್ವಕಪ್​
ಟೀಮ್​ ಇಂಡಿಯಾಗೆ ಹೀನಾಯ ಸೋಲು
ಆಸ್ಟ್ರೇಲಿಯಾದ ಅಡಿಲೇಡ್​​ನಲ್ಲಿ ನಡೆದಿದ್ದ ಸೆಮಿಫೈನಲ್​ ಕದನಲ್ಲಿ ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್​ ನಡೆಸಿತ್ತು. ಭಾರತದ ಪರ ಕೆ.ಎಲ್​ ರಾಹುಲ್​, ರೋಹಿತ್ ಶರ್ಮಾ, ಸೂರ್ಯಕುಮಾರ್​ ವೈಫಲ್ಯ ಅನುಭವಿಸಿದ್ರು. ಹೋರಾಟ ನಡೆಸಿದ್ದ ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ರು. ಅಂತಿಮವಾಗಿ 20 ಓವರ್​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ 168 ರನ್​ಗಳಿಸಿತ್ತು.
169 ರನ್​ಗಳ ಚೇಸಿಂಗ್​ಗಿಳಿದ ಇಂಗ್ಲೆಂಡ್​ ಸ್ಪೋಟಕ ಬ್ಯಾಟಿಂಗ್ ನಡೆಸಿತು. ಇಂಡಿಯನ್ ಬೌಲರ್ಸ್​ ಮೇಲೆ ಸವಾರಿ ಮಾಡಿದ ಇಂಗ್ಲೆಂಡ್​ ಓಪನರ್ಸ್​ ಅಡಿಲೇಡ್​ ಅಂಗಳದಲ್ಲಿ ಬೌಂಡರಿ, ಸಿಕ್ಸರ್​ ಸುರಿಮಳೆ ಸುರಿಸಿದ್ರು. ಜೋಸ್​ ಬಟ್ಲರ್​ 9 ಬೌಂಡರಿ, 3 ಸಿಕ್ಸರ್​ ಸಹಿತ ಅಜೇಯ 80 ರನ್​ಗಳಿಸಿದ್ರೆ, 7 ಸಿಕ್ಸ್​​, 4 ಬೌಂಡರಿ ಬಾರಿಸಿದ ಅಲೆಕ್ಸ್​ ಹೇಲ್ಸ್​ ಅಜೇಯ 86 ರನ್​ಗಳಿಸಿದ್ರು. ಒಂದೇ ಒಂದು ವಿಕೆಟ್​ ಕಬಳಿಸೋಕೂ ಟೀಮ್​ ಇಂಡಿಯಾಗೆ ಸಾಧ್ಯವಾಗಲಿಲ್ಲ. 16 ಓವರ್​ಗಳಲ್ಲಿ ಟಾರ್ಗೆಟ್​ ಚೇಸ್​ ಮಾಡಿದ ಇಂಗ್ಲೆಂಡ್​ ಫೈನಲ್ ಗೆ ಎಂಟ್ರಿ ಕೊಡ್ತು.
2024ರ ವಿಶ್ವಕಪ್​
ಟೀಮ್​ ಇಂಡಿಯಾಗೆ ಭರ್ಜರಿ ಗೆಲುವು
2024 ಟಿ20 ವಿಶ್ವಕಪ್​ನಲ್ಲೂ ಭಾರತ - ಇಂಗ್ಲೆಂಡ್​ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಿದ್ವು. ಗಯಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಟೀಮ್​ ಇಂಡಿಯಾ ಕಾಂಪಿಟೇಟಿವ್ ಸ್ಕೋರ್​ ಕಲೆ ಹಾಕಿತ್ತು. ರೋಹಿತ್​ ಶರ್ಮಾ 57 ರನ್​ಗಳಿಸಿದ್ರೆ, ಸೂರ್ಯಕುಮಾರ್​ 47 ರನ್​ಗಳಿಸಿ ಶೈನ್​ ಆಗಿದ್ರು. 7 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 171 ರನ್​ಗಳ ಸ್ಕೋರ್​ ಕಲೆ ಹಾಕಿತ್ತು.
172 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಇಂಗ್ಲೆಂಡ್​ ಇಂಡಿಯನ್​ ಬೌಲರ್​​ಗಳ ದಾಳಿಗೆ ತತ್ತರಿಸಿತು. ಬೂಮ್ರಾ ಆರಂಭದಲ್ಲೇ ಶಾಕ್​ ನೀಡಿದ್ರೆ, ಬಳಿಕ ಅಕ್ಷರ್​ ಪಟೇಲ್​, ಕುಲ್​​ದೀಪ್​ ಯಾದವ್ ಸ್ಪಿನ್ ಶಾಕ್​ ನೀಡಿದ್ರು. ಕೇವಲ 16.4 ಓವರ್​ಗಳಲ್ಲೇ ಆಂಗ್ಲರ ಬ್ಯಾಟಿಂಗ್​ ಲೈನ್​ ಅಪ್​ನ​ ಇಂಡಿಯನ್​ ಬೌಲರ್ಸ್​ ಉಡಾಯಿಸಿದ್ರು. 103 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​ ಆದ್ರೆ, 68 ರನ್​ಗಳ ಜಯ ಸಾಧಿಸಿದ ಟೀಮ್​ ಇಂಡಿಯಾ ಫೈನಲ್​ಗೆ ಎಂಟ್ರಿ ಕೊಡ್ತು.
ಇಂಡಿಯಾ VS ಇಂಗ್ಲೆಂಡ್​.. ಗೆದ್ದವರೇ ವಿಶ್ವ ಚಾಂಪಿಯನ್​.!
ಭಾರತ - ಇಂಗ್ಲೆಂಡ್​ ನಡುವಿನ ಸೆಮಿಸ್​ ಸಮರದಲ್ಲಿ ಗೆದ್ದವರೇ ವಿಶ್ವ ಚಾಂಪಿಯನ್ ಆಗೋದು. 2022ರಲ್ಲಿ ಇಂಗ್ಲೆಂಡ್ ಚಾಂಪಿಯನ್​ ಆಗಿ ಹೊರಹೊಮ್ಮಿದ್ರೆ, 2024ರಲ್ಲಿ ಟೀಮ್​ ಇಂಡಿಯಾ ವಿಶ್ವಕಪ್​ ಕಿರೀಟಕ್ಕೆ ಮುತ್ತಿಕ್ಕಿತು. ಇದೀಗ 2026ರಲ್ಲಿ ಉಭಯ ತಂಡಗಳು ಮತ್ತೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗ್ತಿವೆ. ಎರಡೂ ತಂಡಗಳೂ ಟೂರ್ನಿಯಲ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿರೋದ್ರಿಂದ, ವಾಂಖೆಡೆ ಅಂಗಳದಲ್ಲಿ ಜಿದ್ದಾಜಿದ್ದಿನ ಫೈಟ್​​ ನಡೆಯೋದು ಕನ್​​​ಫರ್ಮ್​.! ಈ ಬಾರಿಯೂ ಸೆಮಿಸ್ ಗೆದ್ದವರೇ ಚಾಂಪಿಯನ್ ಆಗ್ತಾರಾ ಅನ್ನೋದು ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us