/newsfirstlive-kannada/media/media_files/2025/12/17/karthik-sharma-prashant-veer-mustifar-rahman-2025-12-17-12-59-34.jpg)
/newsfirstlive-kannada/media/media_files/2025/12/16/jacob-duffy-2025-12-16-16-49-21.jpg)
ಸರ್ಪ್ರೈಸ್ ಪಿಕ್
IPL ಮಿನಿ ಆಕ್ಷನ್ನಲ್ಲಿ ಹಣದ ಹೊಳೆ ಹರಿಯಿತು. ಜಿದ್ದಿಗೆ ಬಿದ್ದಂತೆ ಫೈಟ್ ನಡೆಸಿದ ಫ್ರಾಂಚೈಸಿಗಳು ಟಾರ್ಗೆಟ್ ಮಾಡಿದ್ದ ಪ್ಲೇಯರ್ಗಳ ಮೇಲೆ ಮುಂದೆ ನೋಡದೆ ಕೋಟಿ ಕೋಟಿ ಸುರಿದವು. ನಿರೀಕ್ಷೆಯಂತೆ ಕ್ಯಾಮರೂನ್ ಗ್ರೀನ್, ಮತಿಶಾ ಪತಿರಣ ಬಿಗ್ ಅಮೌಂಟ್ಗೆ ಸೇಲ್ ಆದ್ರೆ, ಇಂಡಿಯನ್ ಯಂಗ್ಸ್ಟರ್ಸ್ ಸರ್ಪ್ರೈಸ್ ಪಿಕ್ ಎನಿಸಿದ್ರು.
/newsfirstlive-kannada/media/media_files/2025/12/17/cameron-green-2025-12-17-11-29-49.jpg)
ಕ್ಯಾಮರೂನ್ ಗ್ರೀನ್, 25.20 ಕೋಟಿ
ನಿರೀಕ್ಷೆಯಂತೆ ಆಸಿಸ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಹರಾಜಿನ ಕಣದಲ್ಲಿ ಧೂಳೆಬ್ಬಿಸಿದ್ರು. 2 ಕೋಟಿ ಮೂಲ ಬೆಲೆಗೆ ಸೇಲ್ಗಿದ್ದ ಗ್ರೀನ್ ಹೆಸರು ಬಂದಾಕ್ಷಣ ಮೊದಲು ಪ್ಯಾಡೆಲ್ ಎತ್ತಿ ಮುಂಬೈ ಇಂಡಿಯನ್ಸ್ ಚೋಕ್ ನೀಡಿತು. ಆ ಬಳಿಕ ಆರಂಭವಾದ ಅಸಲಿ ಹರಾಜಿನಲ್ಲಿ ಆರಂಭದಿಂದಲೂ ಕೆಕೆಆರ್ ಜಿದ್ದಿಗೆ ಬಿದ್ದು ನಡೆಸಿತು. ರಾಜಸ್ಥಾನ್ ರಾಯಲ್ಸ್ 13.40 ಕೋಟಿಗೆ ಸುಸ್ತಾದ್ರೆ, ಆ ಬಳಿಕ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್ 25 ಕೋಟಿ ವರೆಗೆ ಬಿಡ್ ಮಾಡ್ತು. ಆದ್ರೆ, ಪಟ್ಟು ಬಿಡದ ಕೆಕೆಆರ್ 25.20 ಕೋಟಿ ನೀಡಿ ಕ್ಯಾಮರೂನ್ ಗ್ರೀನ್ ಖರೀದಿಸಿತು. ಈ ಮೂಲಕ ಗ್ರೀನ್ ಐಪಿಎಲ್ ಇತಿಹಾಸದ 3ನೇ ಎಕ್ಸ್ಪೆನ್ಸಿವ್ ಪ್ಲೇಯರ್ ಎನಿಸಿದ್ರು.
/newsfirstlive-kannada/media/media_files/2025/12/16/matheesha-pathirana-2025-12-16-16-23-57.jpg)
ಮತೀಶಾ ಪತಿರಣ, 18 ಕೋಟಿ
ಶ್ರೀಲಂಕಾ ವೇಗಿ ಮತಿಶಾ ಪತಿರಣ ಕೂಡ ನಿರೀಕ್ಷೆಯಂತೆ ಕಮಾಲ್ ಮಾಡಿದ್ರು. 2 ಕೋಟಿ ಬೇಸ್ ಪ್ರೈಸ್ನೊಂದಿಗೆ ಸೇಲ್ಗಿದ್ದ ಪತಿರಣ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆರಂಭಿದಂದ ಫೈಟ್ ನಡೆಸಿದ್ವು. ಅಂತಿಮವಾಗಿ ಡೆಲ್ಲಿ 15.60 ಕೋಟಿಗೆ ಕೊನೆಯ ಬಿಡ್ ಮಾಡಿ ಹಿಂದೆ ಸರಿಯಿತು. ಆ ಬಳಿಕ ಎಂಟ್ರಿ ಕೊಟ್ಟ ಕೆಕೆಆರ್ ಪತಿರಣ ಖರೀದಿಸೋವರೆಗೂ ಬಿಡಲಿಲ್ಲ. ಬರೋಬ್ಬರಿ 18 ಕೋಟಿ ನೀಡಿ ಲಂಕನ್ ವೇಗಿಯನ್ನ ಖರೀದಿಸಿತು.
/newsfirstlive-kannada/media/media_files/2025/12/17/karthik-sharma-2025-12-17-13-03-32.jpg)
ಕಾರ್ತಿಕ್ ಶರ್ಮಾ, 14.20 ಕೋಟಿ
ರಾಜಸ್ಥಾನ್ನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಾರ್ತಿಕ್ ಶರ್ಮಾ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಗೆ ಕಾರಣರಾದ್ರು. 19 ವರ್ಷದ ಅನ್ಕ್ಯಾಪ್ಡ್ ಪ್ಲೇಯರ್ಗಾಗಿ ಬಿಡ್ಡಿಂಗ್ ವಾರ್ ಜೋರಾಗಿ ನಡೆಯಿತು. ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ರೈರ್ಸರ್ ಹೈದ್ರಾಬಾದ್ ಯುವ ಆಟಗಾರನ ಖರೀದಿಗೆ ಫೈಟ್ ನಡೆಸಿದ್ವು. 30 ಲಕ್ಷ ಬೇಸ್ ಪ್ರೈಸ್ಗೆ ಸೇಲ್ಗಿದ್ದ ಕಾರ್ತಿಕ್ ಶರ್ಮಾ ಅಂತಿಮವಾಗಿ 14.20 ಕೋಟಿಗೆ ಚೆನ್ನೈ ಪಾಲಾದ್ರು. ಮಿನಿ ಆಕ್ಷನ್ನ 3ನೇ ಎಕ್ಸ್ಪೆನ್ಸಿವ್ ಬೈ ಎನಿಸಿದ್ರು.
/newsfirstlive-kannada/media/media_files/2025/12/17/prashant-veer-2025-12-17-13-05-06.jpg)
ಪ್ರಶಾಂತ್ ವೀರ್, 14.20 ಕೋಟಿ
ಉತ್ತರ ಪ್ರದೇಶದ ಯುವ ಆಟಗಾರ ಪ್ರಶಾಂತ್ ವೀರ್ ಕೂಡ ಆಕ್ಷನ್ ಅಖಾಡದಲ್ಲಿ ಧೂಳೆಬ್ಬಿಸಿದ್ರು. 30 ಲಕ್ಷಕ್ಕೆ ಸೇಲ್ಗಿದ್ದ ಪ್ರಶಾಂತ್ ಖರೀದಿಗೆ ತಂಡಗಳು ನಾ ಮುಂದು ತಾ ಮುಂದು ಎಂದು ಫೈಟ್ಗಿಳಿದ್ವು. ಟಿ20 ಫಾರ್ಮೆಟ್ನಲ್ಲಿ 167ರ ಸ್ಟ್ರೈಕ್ರೇಟ್ ಹೊಂದಿರೋ ಈ ಅನ್ಕ್ಯಾಪ್ಡ್ ಆಟಗಾರನ ಖರೀದಿಗೂ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಬಿಡ್ಡಿಂಗ್ ವಾರ್ ನಡೆಸಿದ್ವು. ಅಂತಿಮವಾಗಿ ಪ್ರಶಾಂತ್ ವೀರ್ಗೆ 14.20 ಕೋಟಿ ನೀಡಿ ಸಿಎಸ್ಕೆ ಖರೀದಿಸುವಲ್ಲಿ ಯಶಸ್ವಿಯಾಯ್ತು.
/newsfirstlive-kannada/media/media_files/2025/12/16/liam-livingstone-2025-12-16-15-43-54.jpg)
ಲಿಯಮ್ ಲಿವಿಂಗ್ಸ್ಟೋನ್, 13 ಕೋಟಿ
ಫಸ್ಟ್ ರೌಂಡ್ನಲ್ಲಿ ಅನ್ಸೋಲ್ಡ್ ಆಗಿದ್ದ ಲಯಾಮ್ ಲಿವಿಂಗ್ಸ್ಟೋನ್ಗೆ ಲಾಸ್ಟ್ ರೌಂಡ್ನಲ್ಲಿ ಲಕ್ ಖುಲಾಯಿಸಿತು. ಆರಂಭದಲ್ಲಿ ಬಿಡ್ ಮಾಡಿದ ಕೆಕೆಆರ್, ಗುಜರಾತ್ ಬೇಗನ ಸೈಡ್ಗೆ ಸರಿದ್ವು. ಸನ್ರೈಸರ್ಸ್ ಹೈದ್ರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಪೈಪೋಟಿ ನಡೆಸಿದ್ವು. ಅಂತಿಮವಾಗಿ ಇಂಗ್ಲೆಂಡ್ ಸ್ಪಿನ್ ಆಲ್ರೌಂಡರ್ಗೆ 13 ಕೋಟಿ ನೀಡಿ ಸನ್ರೈಸರ್ಸ್ ಹೈದ್ರಾಬಾದ್ ಖರೀದಿಸಿತು. ಕಳೆದ ಸೀಸನ್ನಲ್ಲಿ 8.75 ಕೋಟಿಗೆ ಸೇಲಾಗಿದ್ದ ಲಿವಿಂಗ್ಸ್ಟೋನ್ಗೆ 49% ಹೈಕ್ ಸಿಕ್ಕಂತಾಯಿತು.
/newsfirstlive-kannada/media/media_files/2025/12/17/mustifar-rahman-2025-12-17-13-07-02.jpg)
ಮುಸ್ತಫಿಜುರ್ ರೆಹಮಾನ್, 9.20 ಕೋಟಿ
ನಿರೀಕ್ಷೆಯಂತೆ ಬಾಂಗ್ಲಾದೇಶದ ಪ್ರೀಮಿಯಂ ವೇಗಿ ಮುಸ್ತಫಿಜುರ್ ರೆಹಮಾನ್ ಬಿಗ್ ಅಮೌಂಟ್ ಜೇಬಿಗಿಳಿಸಿಕೊಂಡ್ರು. ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮುಸ್ತಫಿಜುರ್ ರೆಹಮಾನ್ ಖರೀದಿಗೆ ತ್ರಿಕೋನ ಫೈಟ್ ನಡೀತು. ಅಂತಿಮವಾಗಿ 9.20 ಕೋಟಿ ನೀಡಿ ಅನುಭವಿ ವೇಗಿಯನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸುವಲ್ಲಿ ಯಶಸ್ವಿಯಾಯ್ತು.
/newsfirstlive-kannada/media/media_files/2025/12/17/rcb-5-2025-12-17-08-14-39.jpg)
ಒಟ್ಟಿನಲ್ಲಿ ಐಪಿಎಲ್ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಫುಲ್ ಡಿಮ್ಯಾಂಡ್ ಅನ್ನೋ ಸಂಪ್ರದಾಯ ಇತ್ತು. ಆದ್ರೆ, ಈ ಬಾರಿ ವಿದೇಶಿ ಆಟಗಾರರ ಜೊತೆಗೆ ಭಾರತದ ಲೋಕಲ್ ಪ್ಲೇಯರ್ಸ್ ಕೂಡ ಕಮಾಲ್ ಮಾಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us