/newsfirstlive-kannada/media/post_attachments/wp-content/uploads/2024/11/IPL_TROPHY.jpg)
ಐಪಿಎಲ್ ಸೀಸನ್-19 ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಪ್ಲೇಯರ್ಸ್ ರಿಟೇನ್, ರಿಲೀಸ್, ಟ್ರೇಡ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದೀಗ ಮಿನಿ ಹರಾಜಿನಲ್ಲಿ ಸೂಪರ್​ಸ್ಟಾರ್ ಆಟಗಾರರನ್ನ ಬೇಟೆಯಾಡಲು, ಫ್ರಾಂಚೈಸಿಗಳು ಮುಂದಾಗಿವೆ. ಆಕ್ಷನ್​​​ನಲ್ಲಿ ಫ್ರಾಂಚೈಸಿಗಳು ಕಣ್ಣಿಟ್ಟಿರುವ ಆ ಟಾಪ್ 5 ಆಟಗಾರರು ಯಾರು ಗೊತ್ತಾ?
ಡಿಸೆಂಬರ್ 16, ಅಬುಧಾಬಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ, ಆಟಗಾರರ ಖರೀದಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗುವುದು. ಈ ಬಾರಿ ಮಿನಿ ಹರಾಜಿನಲ್ಲಿ ದೇಶಿ ಆಟಗಾರರಿಗಿಂತ ವಿದೇಶಿ ಆಟಗಾರರು ಹೆಚ್ಚು ಫ್ರಾಂಚೈಸಿ ಮಾಲೀಕರ ಗಮನ ಸೆಳೆಯಲಿದ್ದಾರೆ. ಅದ್ರಲ್ಲೂ 2 ಕೋಟಿ ಬ್ರ್ಯಾಕೆಟ್​​ನಲ್ಲಿರುವ ಫಾರಿನ್ ಪ್ಲೇಯರ್ಸ್​, ಹರಾಜಿನ ಪ್ರಮುಖ ಆಕರ್ಷಣೆ. ಈ ಆಟಗಾರರ ಖರೀದಿಗೆ, ಫ್ರಾಂಚೈಸಿಗಳು ಭಾರೀ ಪೈಪೋಟಿ ನಡೆಸಲಿವೆ.
ಕ್ಯಾಮರೂನ್ ಗ್ರೀನ್
ಆಸ್ಟ್ರೇಲಿಯಾದ ಯಂಗ್​ ಸೂಪರ್​ಸ್ಟಾರ್ ಆಲ್​ರೌಂಡರ್ ಕ್ಯಾಮರೂನ್ ಗ್ರೇನ್ ಖರೀದಿಗೆ ಫ್ರಾಂಚೈಸಿಗಳು ಸ್ಕೆಚ್ ಹಾಕಿವೆ. ಕಳೆದ ಸೀಸನ್​ನಲ್ಲಿ ಬ್ಯಾಕ್ ಇಂಜುರಿಯಿಂದ ಗ್ರೀನ್, ಐಪಿಎಲ್​​ಗೆ ಅಲಭ್ಯರಾಗಿದ್ರು. ಆದ್ರೀಗ ಗ್ರೀನ್ ಖರೀದಿಗೆ, ಐಪಿಎಲ್​ನ ಟಾಪ್ ಹೈಪ್ರೊಫೈಲ್ ಫ್ರಾಂಚೈಸಿಗಳು ಮುಂದಾಗಿವೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮಾಡೋ ಗ್ರೀನ್, ಫ್ರಾಂಚೈಸಿ ಫೇವರಿಟ್ ಆಗಿದ್ದಾರೆ.
ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್, ಈ ಬಾರಿ ಹಾರಾಜಿನಲ್ಲಿ ಹಾಟ್ ಕೋಕ್ ಆಗಿ ಸೇಲ್ ಆಗೋದ್ರಲ್ಲಿ ಎರಡು ಮಾತಿಲ್ಲ. ಗೇಮ್ ಚೇಂಜಿಂಗ್ ಮತ್ತು ಮ್ಯಾಚ್ ಫಿನಿಷಿಂಗ್ ಸ್ಕಿಲ್ಸ್​​ ಹೊಂದಿರುವ ಮಿಲ್ಲರ್, ಬೌಲರ್​ಗಳ ಪಾಲಿಗೆ ಕಿಲ್ಲರ್ ಕೂಡ ಹೌದು. ಟಿ-20 ಕ್ರಿಕೆಟ್​ನ ಅನುಭವಿ ಬ್ಯಾಟರ್ ಮಿಲ್ಲರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಇದನ್ನೂ ಓದಿ: ಮಂದಾನ ಜೊತೆ ಮದುವೆ ಕ್ಯಾನ್ಸಲ್, ‘ಕಠಿಣ ಕಾನೂನು ಕ್ರಮ’ ಎಂದ ಮುಚ್ಚಲ್..!
ಮಥೀಶ ಪತಿರಣ
ಶ್ರೀಲಂಕಾದ ಯಂಗ್ ಪೇಸರ್ ಮಥೀಶ ಪತಿರಣ, ಹರಾಜಿನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆದ್ರೂ ಆಶ್ಚರ್ಯವಿಲ್ಲ. ಈ ಹಿಂದೆ ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಪರ ಅದ್ಭುತ ಪ್ರದರ್ಶನ ನೀಡಿರುವ ಪತಿರಣ, ಟಿ-ಟ್ವೆಂಟಿ ಕ್ರಿಕೆಟ್​ನ ಡೇಂಜರಸ್ ಬೌಲರ್. ನ್ಯೂ ಬಾಲ್ ಮತ್ತು ಡೆಥ್ ಓವರ್​ಗಳಲ್ಲಿ ತಂಡಕ್ಕೆ ಬ್ರೇಕ್ ನೀಡೋ ಪತಿರಣ, ಈ ಬಾರಿ ಹರಾಜಿನಲ್ಲಿ ಬಹು ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮುರಿದು ಬಿದ್ದ ಮದ್ವೆ.. ‘ಮದುವೆ ರದ್ದಾಗಿದೆ’ ಎಂದು ಮೌನ ಮುರಿದ ಸ್ಮೃತಿ ಮಂದಾನ
ವೆಂಕಟೇಶ್ ಅಯ್ಯರ್
ಕಳೆದ ಐಪಿಎಲ್ ಸೀಸನ್​​ನಲ್ಲಿ ಆಲ್​ರೌಂಡರ್ ವೆಂಕಟೇಶ್ ಅಯ್ಯರ್, ದಾಖಲೆಯ ಮೊತ್ತಕ್ಕೆ ಕೆಕೆಆರ್​​ ಪಾಲಾಗಿದ್ರು. ಡೀಸೆಂಟ್ ಮಿಡಲ್ ಆರ್ಡರ್ ಬ್ಯಾಟರ್ ಮತ್ತು ಪಾರ್ಟ್​​ಟೈಮ್ ಮೀಡಿಯಮ್ ಪೇಸರ್​ ವೆಂಕಿ ಅಯ್ಯರ್, ಇಂಡಿಯನ್ ಪಿಚ್​​​​ಗಳಲ್ಲಿ ಡೇಂಜರಸ್ ಪ್ಲೇಯರ್. ಸದ್ಯ ವೆಂಕಿ ಅಯ್ಯರ್ ಖರೀದಿಸಲು, ಹಲವು ಫ್ರಾಂಚೈಸಿಗಳು ಆಸಕ್ತಿ ತೋರುತ್ತಿದೆ. ಅಯ್ಯರ ಲೋಕಲ್ ಪ್ಲೇಯರ್​ ಆಗಿರೋದ್ರಿಂದ, ಇವ್ರಿಗೆ ಡಿಮ್ಯಾಂಡ್ ಇದ್ದಿದ್ದೆ.
ರೆಹಮಾನ್
ಬಾಂಗ್ಲಾದ ಎಡಗೈ ಮೀಡಿಯಮ್ ಪೇಸರ್​​​​​​​ ಮುಸ್ತಫಿಝುರ್ ರೆಹಮಾನ್, ಟಿ-20 ಕ್ರಿಕೆಟ್​​​ಗೆ ಹೇಳಿ ಮಾಡಿಸಿದ ಬೌಲರ್. ತನ್ನ ಮೀಡಿಯಮ್ ಪೇಸ್ ಮತ್ತು ವೇರಿಯೇಷನ್ಸ್​ನಿಂಧ ಮುಸ್ತಾಫಿಝುರ್, ಬ್ಯಾಟರ್​ಗಳಿಗೆ ಸಿಕ್ಕಾಪಟ್ಟೆ ಕಾಟ ನೀಡಿದ್ದಾರೆ. ಡೆಥ್ ಓವರ್​ನಲ್ಲಿ ಫಿಝ್​​​, ಮೋಸ್ಟ್ ಎಕಾನಮಿಕಲ್ ಬೌಲರ್. ಹಾಗಾಗಿ ಫಿಝ್ ಮೇಲೆ ಫ್ರಾಂಚೈಸಿಗಳು ಆಸಕ್ತಿ ತೋರಲು ಮುಂದಾಗಿವೆ.
ನ್ಯೂಜಿಲೆಂಡ್​​​​​ ಆಲ್​ರೌಂಡರ್ ರಚಿನ್ ರವೀಂದ್ರ, ಸೌತ್ ಆಫ್ರಿಕನ್ ಪೇಸರ್ ಎನ್ರಿಚ್ ನೋಕಿಯಾ ಲಂಕಾ ಆಲ್​ರೌಂಡರ್ ವನಿಂದು ಹಸರಂಗ ಸೇರಿದಂತೆ, ಇತರೆ ಆಟಗಾರರೂ ಕೋಟಿ ಬೇಟೆಯಾಡಲು ಕಾಯ್ತಿದ್ದಾರೆ. ಹರಾಜಿನಲ್ಲಿ ಈ ಸ್ಟಾರ್​ ಆಟಗಾರರು ಎಷ್ಟು ಕೋಟಿ ಬಾಜಿಕೊಳ್ತಾರೆ, ಕಾದುನೋಡೋಣ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us