ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಕೆ.ಗೌತಮ್ : 14 ವರ್ಷದ ಕ್ರಿಕೆಟ್ ಕೆರಿಯರ್‌ ಗೆ ವಿದಾಯ

ಕರ್ನಾಟಕ ರಣಜಿ ಟೂರ್ನಿ ಮತ್ತು ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರಾಗಿ ಹೆಸರು ಮಾಡಿದ್ದ ಕೆ.ಗೌತಮ್ ಇಂದು ಅಧಿಕೃತವಾಗಿ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ. ಸುದೀರ್ಘ 14 ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್ ನಿಂದ ಹಿಡಿದು ಕರ್ನಾಟಕ ತಂಡ, ಟೀಮ್ ಇಂಡಿಯಾ ಪರ ಆಟಗಾರನಾಗಿ ಕೆ.ಗೌತಮ್ ಆಟವಾಡಿದ್ದಾರೆ.

author-image
Chandramohan
K.Goutham retires from cricket

ಕ್ರಿಕೆಟ್‌ಗೆ ವಿದಾಯ ಹೇಳಿದ ಕೆ.ಗೌತಮ್

Advertisment


ಟೀಮ್ ಇಂಡಿಯಾ ಹಾಗೂ ಕರ್ನಾಟಕ ತಂಡದ ಸ್ಟಾರ್ ಆಲ್​ರೌಂಡರ್ ಕೃಷ್ಣಪ್ಪ ಗೌತಮ್, ಕ್ರಿಕೆಟ್​​ಗೆ ಗುಡ್​​ಬೈ ಹೇಳಿದ್ದಾರೆ. 14 ವರ್ಷಗಳ ಕ್ರಿಕೆಟ್​​​ ಕರಿಯರ್​ನಲ್ಲಿ ಗೌತಮ್, ಭಾರತ ಏಕದಿನ ತಂಡ, ಇಂಡಿಯಾ ಎ, ಕರ್ನಾಟಕ, ಐಪಿಎಲ್​​​​​​​​​​​​ ತಂಡಗಳನ್ನ ಪ್ರತಿನಿಧಿಸಿದ್ರು. ಫಿಯರ್​ಲೆಸ್ ಌಂಡ್ ಅಗ್ರೆಸಿವ್ ಕ್ರಿಕೆಟರ್ ಆಗಿದ್ದ ಗೌತಮ್, ನವೆಂಬರ್ 17, 2012ರಲ್ಲಿ ಉತ್ತರ ಪ್ರದೇಶ ವಿರುದ್ಧ ರಣಜಿ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರು. ಚೊಚ್ಚಲ ಪಂದ್ಯದಲ್ಲೇ ಆಫ್​ಸ್ಪಿನ್ನರ್, ಸುರೇಶ್ ರೈನಾ ಮತ್ತು ಭುವೇಶ್ವರ್ ಕುಮಾರ್​ರಂತಹ ಸೂಪರ್​ಸ್ಟಾರ್ ಕ್ರಿಕೆಟಿಗರ ವಿಕೆಟ್ ಪಡೆದು ಮಿಂಚಿದ್ರು.
2016-17ರ ರಣಜಿ ಸೀಸನ್​ನಲ್ಲಿ ಗೌತಮ್, 8 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಗಮನ ಸೆಳೆದಿದ್ರು. 2017-18ರಲ್ಲಿ ಮೈಸೂರಿನಲ್ಲಿ ಅಸ್ಸಾಂ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಗೌತಮ್, ಚೊಚ್ಚಲ ಶತಕ ಸಿಡಿಸಿ ಮಿಂಚಿದ್ರು. ಹೀಗೆ 2023ರವರೆಗೂ ದೇಸಿ ಕ್ರಿಕೆಟ್​ನಲ್ಲಿ ಬ್ಯಾಟ್ ಮತ್ತು ಬಾಲ್ ಮೂಲಕ ಕಾಣಿಕೆ ನೀಡಿದ್ದ ಗೌತಮ್, ನಂತರ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. 59 ಫಸ್ಟ್​ ಕ್ಲಾಸ್ ಮತ್ತು 68 ಲಿಸ್ಟ್ ಎ ಪಂದ್ಯಗಳಲ್ಲಿ ಗೌತಮ್, 320ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ರು.


ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಆಲ್​ರೌಂಡ್ ಪ್ರದರ್ಶನ ನೀಡಿದ್ದ ಕೆ.ಗೌತಮ್, ಇಂಡಿಯಾ ಎ ತಂಡಕ್ಕೂ ಆಯ್ಕೆಯಾದ್ರು. ನ್ಯೂಜಿಲೆಂಡ್ ಎ, ವೆಸ್ಟ್ ಇಂಡೀಸ್ ಎ, ಆಸ್ಟ್ರೇಲಿಯಾ ಎ ಮತ್ತು ಇಂಗ್ಲೆಂಡ್ ಲಯನ್ಸ್ ವಿರುದ್ಧ ಬಾಲ್ ಮತ್ತು ಬ್ಯಾಟ್​​ನಿಂದ ಗೌತಮ್, ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಿದ್ರು. 
2021ರಲ್ಲಿ ಟೀಮ್ ಇಂಡಿಯಾ ನೆಟ್​​​​​​​​ ಬೌಲರ್​ ಆಗಿ ಕಾಣಿಸಿಕೊಂಡಿದ್ದ ಆಲ್​ರೌಂಡರ್ ಗೌತಮ್, ನಂತರ ಅದೇ ವರ್ಷ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೂ ಆಯ್ಕೆಯಾದ್ರು. ಕೊಲಂಬೋದಲ್ಲಿ ಲಂಕಾ ವಿರುದ್ಧ ಏಕೈಕ ಟಿ-ಟ್ವೆಂಟಿ ಪಂದ್ಯ ಆಡಿದ್ದ ಗೌತಮ್, ಒಂದು ವಿಕೆಟ್ ಪಡೆದಿದ್ರು. ಆ ಸರಣಿಯ ನಂತರ ನಂತರ ಗೌತಮ್, ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಲೇ ಇಲ್ಲ.
ಕೆ. ಗೌತಮ್ ಐಪಿಎಲ್ ಫ್ರಾಂಚೈಸಿಗಳ ಫೇವರಿಟ್ ಕ್ರಿಕೆಟರ್ ಆಗಿದ್ದರು. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಲಕ್ನೋ ಸೂಪರ್​ಜೈಂಟ್ಸ್​ ಸೇರಿದಂತೆ ಒಟ್ಟು 5 ತಂಡಗಳನ್ನ ಗೌತಮ್​​ ಪ್ರತಿನಿಧಿಸಿದ್ರು. 2017ರಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ 2 ಕೋಟಿ ರೂಪಾಯಿಗೆ ಸೇಲಾಗಿದ್ದ ಗೌತಮ್, 2018ರಲ್ಲಿ 6 ಕೋಟಿ 20 ಲಕ್ಷಕ್ಕೆ ರಾಜಸ್ಥಾನ್ ರಾಯಲ್ಸ್​ ತಂಡದ ಪಾಲಾಗಿದ್ರು. 2019ರಲ್ಲಿ ಆರ್​ಆರ್ ಅದೇ ಮೊತ್ತಕ್ಕೆ ಗೌತಮ್​ರನ್ನ ತಂಡದಲ್ಲಿ ಉಳಿಸಿಕೊಂಡಿತ್ತು. ಆದ್ರೆ  2020ರಲ್ಲಿ ಗೌತಮ್ ರಾಜಸ್ಥಾನ್ ತಂಡದಿಂದ ಪಂಜಾಬ್ ಕಿಂಗ್ಸ್​ಗೆ ಮತ್ತೆ 6 ಕೋಟಿ 20 ಲಕ್ಷ ರೂಪಾಯಿಗೆ ಟ್ರೇಡ್ ಆದ್ರು. 2021ರ ಐಪಿಎಲ್​ನಲ್ಲಿ ಗೌತಮ್ ಚೆನ್ನೈ ಸೂಪರ್​ಕಿಂಗ್ಸ್​ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಸೇಲಾಗಿದ್ರು. 9 ಕೋಟಿ 25 ಲಕ್ಷ ರೂಪಾಯಿಗೆ ಸೇಲ್​ ಆಗಿದ್ದ ಗೌತಮ್, ಆಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ್ರು. ಇದುವರೆಗೂ 9 ಐಪಿಎಲ್ ಸೀಸನ್​ ಅಡಿರುವ ಗೌತಮ್, 35 ಕೋಟಿಗೂ ಅಧಿಕ ಹಣ ಪಡೆದಿದ್ದಾರೆ.

K.Goutham retires from cricket (1)


ಕರ್ನಾಟಕ ಪ್ರೀಮಿಯರ್ ಲೀಗ್​ T20 ಟೂರ್ನಿಯಲ್ಲೂ ಕೆ.ಗೌತಮ್, ಮಿಂಚು ಹರಿಸಿದ್ದಾರೆ. ಗೌತಮ್ ಮಾಡಿರುವ ದಾಖಲೆಗಳನ್ನ ಯಾರೂ ಅಳಿಸೋಕೆ ಸಾಧ್ಯವಿಲ್ಲ. 2019ರ ಕೆಪಿಎಲ್​​​​ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಬ್ಯಾಟ್ ಬಿಸಿದ್ದ ಗೌತಮ್, ಕೇವಲ 39 ಎಸೆತಗಳಲ್ಲಿ ವೇಗಿವಾಗಿ ಶತಕ ಸಿಡಿಸಿದ್ರು. ಒಟ್ಟು 56 ಎಸೆತಗಳಲ್ಲಿ 134 ರನ್​ ಬಾರಿಸಿದ್ದ ಗೌತಮ್, 13 ಸಿಕ್ಸರ್​ಗಳನ್ನ ಸಿಡಿಸಿದ್ರು. ವಿಶೇಷ ಅಂದ್ರೆ ಬೌಂಡರಿಗಳಿಂದಲೇ  ಗೌತಮ್, 106 ರನ್​ ಕಲೆಹಾಕಿದ್ರು. ಅದೇ ಪಂದ್ಯದಲ್ಲಿ ಗೌತಮ್ 4 ಓವರ್ ಬೌಲ್ ಮಾಡಿ ಕೇವಲ 15 ರನ್​ ನೀಡಿ 8 ವಿಕೆಟ್ ಸಹ ಪಡೆದಿದ್ರು.  


ಒಟ್ನಲ್ಲಿ..! ಗೌತಮ್ ಒಬ್ಬ HIGHLY SKILLED ಕ್ರಿಕೆಟರ್. ಬ್ಯಾಟಿಂಗ್​ನಲ್ಲಿ ಫಿಯರ್​ಲೆಸ್, ಅಗ್ರೆಸಿವ್, ಪವರ್ ಹಿಟ್ಟರ್ ಆಗಿದ್ದ ಗೌತಮ್, ಬೌಲಿಂಗ್​ನಲ್ಲೂ ಅದ್ಭುತ ವೇರಿಯೇಷನ್ಸ್​ ಮತ್ತು ಟ್ಯಾಲೆಂಟ್ ಹೊಂದಿದ್ದರು. ಇದಷ್ಟೇ ಅಲ್ಲ..! ಗೌತಮ್ ಮೆಂಟಲಿ ಟಫ್ ಕ್ರಿಕೆಟರ್ ಕೂಡ. ಹಾಗಾಗಿ ಟೀಕೆಗಳು ಎದುರಾದ್ರು ಕುಗ್ಗದ ಗೌತಮ್, ತನ್ನ ಪರ್ಫಾಮೆನ್ಸ್ ಮೂಲಕವೇ ಎಲ್ಲದಕ್ಕೂ ಉತ್ತರ ನೀಡ್ತಿದ್ರು. ಸದ್ಯ ಗೌತಮ್ ಕ್ರಿಕೆಟ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಗೌತಮ್​​ ಸೆಕೆಂಡ್ ಇನ್ನಿಂಗ್ಸ್​ಗೆ, ಆಲ್​ ದ ಬೆಸ್ಟ್ ಹೇಳೋಣ..! ಥ್ಯಾಂಕ್ ಯೂ ಗೌತಮ್. ವಿ ಮಿಸ್ ಯು ಆನ್ ದ ಫೀಲ್ಡ್​...!

G.S.ಗಂಗಾಧರ್, ಸ್ಪೋರ್ಟ್ಸ್ ಬ್ಯೂರೋ ಮುಖ್ಯಸ್ಥರು
ನ್ಯೂಸ್ ಫಸ್ಟ್, ಬೆಂಗಳೂರು. 



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

k Goutham retires from cricket career
Advertisment