ಕನ್ನಡಿಗ KL ರಾಹುಲ್​​ಗೆ ಮತ್ತೊಮ್ಮೆ ದೊಡ್ಡ ಜವಾಬ್ದಾರಿ.. ಭಾರೀ ಬದಲಾವಣೆ ನಿರೀಕ್ಷೆ..!

ಐಪಿಎಲ್​ ಸೀಸನ್​ 19ಕ್ಕೂ ಮುನ್ನ ಡೆಲ್ಲಿ ಮೇಜರ್​ ಸರ್ಜರಿ ಮಾಡಲು ಮುಂದಾಗಿದೆ. ಸರ್​​ಪ್ರೈಸ್​ ನಿರ್ಧಾರ ತೆಗೆದುಕೊಂಡಿರೋ ಮ್ಯಾನೇಜ್​ಮೆಂಟ್​​ ಅಕ್ಷರ್​ ಪಟೇಲ್​ಗೆ ನಾಯಕತ್ವದಿಂದ ಗೇಟ್​ ಪಾಸ್​​ ನೀಡಲು ರೆಡಿಯಾಗಿದೆ. ಪಟ್ಟದಿಂದ ಪಟೇಲ್​ನ ಕೆಳಗಿಳಿಸಿ ರಾಹುಲ್​ಗೆ ಸಾರಥ್ಯ ನೀಡೋ ಪ್ಲಾನ್ ಇದೆ

author-image
Ganesh Kerekuli
kl rahul delhi capitals (1)

ಕೆಎಲ್ ರಾಹುಲ್

Advertisment
  • ಅಕ್ಷರ್​ ಪಟೇಲ್​ಗೆ​ ಶಾಕ್​ ಕೊಡಲು ಮುಂದಾದ ಡೆಲ್ಲಿ​?
  • ನಾಯಕತ್ವದಿಂದ ಅಕ್ಷರ್​​ ಪಟೇಲ್​ಗೆ ಗೇಟ್​ಪಾಸ್?
  • ಕನ್ನಡಿಗನಿಗೆ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್​ ಪ್ಲಾನ್

ಇಂಡಿಯನ್ ಪ್ರೀಮಿಯರ್​ ಲೀಗ್​ ಮಿನಿ ಆಕ್ಷನ್​ ಮುಗಿದ್ರೂ ಫ್ರಾಂಚೈಸಿಗಳ​ ವಲಯದಲ್ಲಿ ಚಟುವಟಿಕೆಗಳು ನಿಂತಿಲ್ಲ. ಯಶಸ್ವಿಯಾಗಿ ಹರಾಜು ಪ್ರಕ್ರಿಯೆ​ ಮುಗಿಸಿದ ಫ್ರಾಂಚೈಸಿಗಳು ಮುಂದಿನ ಸೀಸನ್​ಗೆ ಬ್ಲ್ಯೂ ಪ್ರಿಂಟ್​ ರೆಡಿ ಮಾಡ್ತಿವೆ. ಇದ್ರ ನಡುವೆ ಮಹತ್ವದ ಬೆಳವಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ತಂಡಕ್ಕೆ ಮೇಜರ್​ ಸರ್ಜರಿ ಮಾಡಲು ಮುಂದಾಗಿದೆ. ಈ ಹಿಂದಿನ ಸೀಸನ್​ನಲ್ಲಿ ತಂಡವನ್ನ ಮುನ್ನಡೆಸಿದ್ದ ಅಕ್ಷರ್​ ಪಟೇಲ್​ಗೆ ಬಿಗ್​ ಶಾಕ್​ ಕಾಡಿದೆ.

ಅಕ್ಷರ್​ ಪಟೇಲ್​ಗೆ​ ಶಾಕ್​ ಕೊಡಲು ಮುಂದಾದ ಡೆಲ್ಲಿ?

ಮಿನಿ ಆಕ್ಷನ್​ ಮುಗಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ನಾಯಕ ಅಕ್ಷರ್​ ಪಟೇಲ್​ನ ಪಟ್ಟದಿಂದ ಕೆಳಗಿಳಿಸಲು ಮುಂದಾಗಿದೆ. ಸೀಸನ್​ 18ಕ್ಕೂ ಮುನ್ನ ಅಚ್ಚರಿಯ ಆಯ್ಕೆ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಅಕ್ಷರ್​ಗೆ ನಾಯಕತ್ವ ನೀಡಿತ್ತು. 6 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್  ಕಟ್ಟಾಳಾಗಿದ್ದ ಉಪನಾಯಕ ಅಕ್ಷರ್ ಪಟೇಲ್​ಗೆ​ ಪ್ರಮೋಷನ್​ ನೀಡಿತ್ತು. ಆದ್ರೀಗ ಮುಂದಿನ ಸೀಸನ್​ಗೂ ಮುನ್ನ ಸರ್​​ಪ್ರೈಸ್​ ರೀತಿಯಲ್ಲಿ ನಾಯಕತ್ವದಿಂದ ಕೆಳಗಿಳಿಸೋಕೆ ಚರ್ಚಿಸಿದೆ.

ಕನ್ನಡಿಗನಿಗೆ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್​ ಪ್ಲಾನ್

ಅಕ್ಷರ್​ ಪಟೇಲ್​ನ ಪಟ್ಟದಿಂದ ಇಳಿಸಲು ಮುಂದಾಗಿರೋ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಕನ್ನಡಿಗನ ತಲೆಗೆ ಕಿರೀಟ ಹಾಕೋಕೆ ಪ್ಲಾನ್​ ಮಾಡಿಕೊಂಡಿದೆ. ಕನ್ನಡಿಗ ಕೆ.ಎಲ್​ ರಾಹುಲ್​ನ ನೂತನ ನಾಯಕನನ್ನಾಗಿ ಫ್ರಾಂಚೈಸಿ ನೇಮಿಸಲು ಚಿಂತಿಸಿದೆ. 2025ರಲ್ಲಿ ಅಕ್ಷರ್​​ ನಾಯಕತ್ವದಲ್ಲಿ ಅದ್ಭುತ ಆರಂಭ ಪಡೆದಿದ್ದ ಡೆಲ್ಲಿ ಸತತ 4 ಪಂದ್ಯ ಗೆದ್ದಿತ್ತು. ಅಂತಿಮ ಹಂತದಲ್ಲಿ ಎಡವಿ 5 ಸ್ಥಾನಿಯಾಗಿ ಟೂರ್ನಿಗೆ ಗುಡ್​ ಬೈ ಹೇಳಿತ್ತು. ನಾಯಕ ಅಕ್ಷರ್​ ಪಟೇಲ್​ ಅನಾನುಭವ ಕೂಡ ಹಿನ್ನಡೆಗೆ ಮುಖ್ಯ ಕಾರಣವಾಗಿತ್ತು. ಹೀಗಾಗಿಯೇ ಮುಂದಿನ ಸೀಸನ್​​ಗೂ ಮುನ್ನ ಡೆಲ್ಲಿ ಅನುಭವಿ ಆಟಗಾರ ರಾಹುಲ್​​ ಹೆಗಲಿಗೆ ಮಹತ್ವದ ಜವಾಬ್ದಾರಿ ಹೊರಿಸಲು ಮುಂದಾಗಿದೆ. 

ಇದನ್ನೂ ಓದಿ: ದೇವರ ದರ್ಶನ ಮುಗಿಸಿ ಬರ್ತಿದ್ದಾಗ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ನಿಧನ

KL Rahul (1)

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಕಳೆದ ಸೀಸನ್​ನಲ್ಲೇ ಕೆ.ಎಲ್​ ರಾಹುಲ್​ ಡೆಲ್ಲಿ ಕ್ಯಾಪಿಟಲ್ಸ್​ ಸಾರಥಿಯಾಗಬೇಕಿತ್ತು. ನಾಯಕತ್ವ ನೀಡೋ ಉದ್ದೇಶದಿಂದಲೇ ಕಳೆದ ಸೀಸನ್​ನಲ್ಲಿ ಐಪಿಎಲ್​ ಮೆಗಾ ಆಕ್ಷನ್​ನಲ್ಲಿ ಜಿದ್ದಿಗೆ ಬಿದ್ದು ರಾಹುಲ್​ನ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ಖರೀದಿಸಿತ್ತು. ರಿಷಭ್​ ಪಂತ್​ ತಂಡ ತೊರೆದಿದ್ರಿಂದ, ಉತ್ತರಾಧಿಕಾರಿಯಾಗಿ ರಾಹುಲ್​ ಖರೀದಿಸಿತ್ತು. ಐಪಿಎಲ್​ಗೂ ಕೆಲ ತಿಂಗಳ ಹಿಂದಷ್ಟೇ ಅಪ್ಪನಾಗಿ ರಾಹುಲ್​ ಆರಂಭಿಕ ಕೆಲ ಪಂದ್ಯದಿಂದ ಹೊರಗುಳಿದಿದ್ರು. ಈ ಕಾರಣದಿಂದಲೇ ಡಿಸಿ ಆಫರ್​ ರಿಜೆಕ್ಟ್​ ಮಾಡಿದ್ದ ರಾಹುಲ್​, ಸಾಮಾನ್ಯ ಆಟಗಾರನಾಗಿ ಆಡೋದಾಗಿ ತಿಳಿಸಿದ್ರು. 

ನಾಯಕನಾಗಿ ರಾಹುಲ್​ಗೆ ಅಪಾರ ಅನುಭವ

ಕನ್ನಡಿಗ ಕೆ.ಎಲ್​ ರಾಹುಲ್​ಗೆ ನಾಯಕನಾಗಿ ಡಿಸೆಂಟ್​ ರೆಕಾರ್ಡ್​ ಹೊಂದಿದ್ದಾರೆ. ಟೀಮ್​ ಇಂಡಿಯಾ ಜೊತೆಗೆ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​, ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನ ಮುನ್ನಡೆಸಿದ ಅನುಭವ ರಾಹುಲ್​ಗಿದೆ. ಐಪಿಎಲ್​ನಲ್ಲಿ ಒಟ್ಟು 64 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿರೋ ಕೆ.ಎಲ್​ ರಾಹುಲ್ 32 ಪಂದ್ಯಗಳಲ್ಲಿ ತಂಡವನ್ನ ಗೆಲ್ಲಿಸಿದ್ರೆ, 32 ಪಂದ್ಯದಲ್ಲಿ ಸೋಲುಂಡಿದ್ದಾರೆ. ಶೇಕಡಾ 50ರಷ್ಟು ಗೆಲುವಿನ ಸರಾಸರಿ ಹೊಂದಿದ್ದಾರೆ. 

ಇದನ್ನೂ ಓದಿ:ದೇವರ ದರ್ಶನ ಮುಗಿಸಿ ಬರ್ತಿದ್ದಾಗ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ನಿಧನ

2008ರಿಂದ 2025ರವರೆಗೆ. ಚೊಚ್ಚಲ ಆವೃತ್ತಿಯಿಂದಲೂ ಡೆಲ್ಲಿ ಐಪಿಎಲ್​ ಭಾಗವಾಗಿದೆ. ಆದ್ರೆ, ಕಪ್​ ಗೆಲುವು ಮಾತ್ರ ಮರೀಚಿಕೆಯಾಗಿದೆ. ಚಾಂಪಿಯನ್​ ಪಟ್ಟದ ಕನಸಿನೊಂದಿಗೆ ಪ್ರತಿ ಸೀಸನ್​ನಲ್ಲಿ ಕಣಕ್ಕಿಳಿದು, 18 ಸೀಸನ್​ಗಳಲ್ಲೂ ಕಾಲಿ ಕೈಯಲ್ಲಿ ವಾಪಾಸ್ಸಾಗಿದೆ. ಮುಂದಿನ ಸೀಸನ್​​ಗೂ ಮುನ್ನ ಬಲಿಷ್ಠ ತಂಡವನ್ನೇ ಕಟ್ಟಿರೋ ಡೆಲ್ಲಿ ಫ್ರಾಂಚೈಸಿ, ಕನ್ನಡಿಗನ ಮುಂದಾಳತ್ವದಲ್ಲಿ ಚೊಚ್ಚಲ ಕಪ್​ ಗೆಲ್ಲೋ ಕನಸು ಕಾಣ್ತಿದೆ. ಆ ಮಹಾ ಕನಸನ್ನ ರಾಹುಲ್​ ನನಸು ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ.  

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KL Rahul IPL delhi capitals IPL 2026
Advertisment