/newsfirstlive-kannada/media/media_files/2025/12/15/skating-championship-2025-12-15-15-39-17.jpg)
ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಂಚು ಗೆದ್ದ ಕರ್ನಾಟಕ ತಂಡ
63 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್​ಶಿಪ್-2025 ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಿತು. ಕರ್ನಾಟಕ ಸಬ್ ಜೂನಿಯರ್ ಹುಡುಗಿಯರ ವಿಭಾಗ ಈ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದೆ. ಡಿಸೆಂಬರ್ 5 ರಿಂದ ಆರಂಭವಾಗಿರುವ ಈ ಚಾಂಪಿಯನ್​ಶಿಪ್ ಇಂದು ಮುಕ್ತಾಯವಾಗುತ್ತಿದೆ. ಪಂಜಾಬ್, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಚಂಡೀಗಢ, ತಮಿಳುನಾಡು, ಕೇರಳ ಸೇರಿದಂತೆ 8 ರಾಜ್ಯಗಳ ನಡುವೆ ಪ್ರಬಲ ಸ್ಫರ್ಧೆ ನಡೆಯುತ್ತಿದೆ. ಕರ್ನಾಟಕ ಪಡೆಗೆ ಸೆಮಿಫೈನಲ್​ ಹಂತದಲ್ಲಿ ಕೇರಳದ ವಿರುದ್ಧ 4-3 ಅಂತರದಲ್ಲಿ ಫೈನಲ್ ಪ್ರವೇಶ ಕೈ ತಪ್ಪಿದೆ. ಸ್ಫರ್ಧೆ ಮೊದಲು ಡ್ರಾಗೊಂಡರೂ ನಂತರ ಹೆಚ್ಚುವರಿ ಅವಧಿಯ ಸ್ಫರ್ಧೆಯಲ್ಲಿ ಪ್ರಬಲ ಪೈಪೋಟಿ ನಡುವೆ ರಾಜ್ಯ ತಂಡಕ್ಕೆ ಕಂಚಿನ ಪದಕ ದೊರೆತಿದೆ. ಕೋಚ್ ದಿಲೀಪ್ ಹನ್ ಬಾರ್ ಸಾರಥ್ಯದಲ್ಲಿ ಆದ್ಯಾ ಮಂಜಪ್ಪ ತಂಡವನ್ನು ಮುನ್ನಡೆಸಿದ್ರು. ಕೆ.ಎಂ. ಭವಾನಿತಾ, ದೇದೀಪ್ಯಾ ಆರಾಧ್ಯ ಪ್ರಮೋದ್, ಅಕ್ಷರ ರಮೇಶ್, ಕುಶಾಲಾ, ಪ್ರತೀಕ್ಷಾ ವಿಜಯ್​ಕುಮಾರ್, ಹರಿಪ್ರಿಯಾ ಮುರಳೀಧರ್, ಆರ್ಯ ಮಂಜುನಾಥ್ ಹಾಗೂ ಸಿ.ಎನ್ ದಿಂಪನಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us