/newsfirstlive-kannada/media/media_files/2025/12/03/virat-kohli-1-2025-12-03-16-07-28.jpg)
ರಾಯ್​ಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲೂ ಕಿಂಕ್ ಕೊಹ್ಲಿ ಬಿರುಸಿನ ಶತಕ ಬಾರಿಸಿ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲಿನ ಫಾರ್ಮ್​ ಕಂಟಿನ್ಯೂ ಮಾಡಿರುವ ಕೊಹ್ಲಿ, ODIನಲ್ಲಿ 53ನೇ ಶತಕ ಬಾರಿಸಿ ಮೈದಾನದಲ್ಲಿ ಸಂಭ್ರಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಅವರು ಸತತ ಎರಡನೇ ಶತಕ ಬಾರಿಸಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲೂ ಶತಕ ಪೂರೈಸಿದ್ದರು. ಇದೀಗ ಮತ್ತೊಂದು ಸೆಂಚುರಿ ಬಾರಿಸಿದ್ದಾರೆ. ವಿಶೇಷ ಅಂದ್ರೆ ಕೊಹ್ಲಿ ಟಿ-20 ಕ್ರಿಕೆಟ್​ನಂತೆ ಬ್ಯಾಟ್ ಬೀಸಿ ವೀಕ್ಷಕರನ್ನ ಸಖತ್ ಎಂಟರ್ಟೈನ್​ ಮಾಡಿದರು.
ಇದನ್ನೂ ಓದಿ: ಜೀವಾವಧಿ ಶಿಕ್ಷೆಯ ಅಮಾನತು ಅರ್ಜಿ ವಜಾ, ಜಾಮೀನು ನಿರೀಕ್ಷೆಯಲ್ಲಿದ್ದ ಪ್ರಜ್ವಲ್​​ಗೆ ಶಾಕ್..!
110.99 ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ 91 ಬಾಲ್ ಎದುರಿಸಿ 2 ಸಿಕ್ಸರ್, 7 ಬೌಂಡರಿಯೊಂದಿಗೆ 101 ರನ್​ ಚಚ್ಚಿದರು. ಶತಕ ಬಾರಿಸಿದ ಬಳಿಕ ಹೆಚ್ಚು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 93 ಬಾಲ್​ನಲ್ಲಿ 102 ರನ್​ಗಳಿಸಿ ಔಟ್ ಆದರು.
195 ರನ್​ಗಳ ಪಾರ್ಟ್ನರ್​ಶಿಪ್
ಇನ್ನು ಗಾಯಕ್ವಾಡ್ ಹಾಗೂ ಕೊಹ್ಲಿ 195 ರನ್​ಗಳ ಪಾರ್ಟ್ನರ್​ಶಿಪ್ ಕಲೆ ಹಾಕಿದ್ದಾರೆ. 156 ಬಾಲ್​ನಲ್ಲಿ 195 ರನ್​ಗಳಿಸಿದರು. ಈ ಅವಧಿಯಲ್ಲಿ ಗಾಯಕ್ವಾಡ್, 83 ಬಾಲ್​ನಲ್ಲಿ 105 ರನ್​​ಗಳಿಸಿದರೆ, ಕೊಹ್ಲಿ 73 ಬಾಲ್​ನಲ್ಲಿ 83 ರನ್​ಗಳಿಸಿದರು.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us