/newsfirstlive-kannada/media/media_files/2025/11/17/ksca-election-postponed-2025-11-17-15-12-16.jpg)
ಕೆಎಸ್‌ಸಿಎ ಪದಾಧಿಕಾರಿಗಳ ಚುನಾವಣೆ ಮುಂದೂಡಿಕೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ಚುನಾವಣೆ ಸ್ಪರ್ಧೆಗೆ ಅಭ್ಯರ್ಥಿಗಳ ಅರ್ಹತೆ ಬಗ್ಗೆ ಗೊಂದಲ ಉಂಟಾಗಿತ್ತು. ಹೀಗಾಗಿ ಡಿಸೆಂಬರ್ 30ಕ್ಕೆ ಚುನಾವಣೆಯನ್ನು ಮುಂದೂಡಿ ಚುನಾವಣಾ ಅಧಿಕಾರಿ ತೀರ್ಮಾನ ತೆಗೆದುಕೊಂಡಿದ್ದಾರೆ. ಅಭ್ಯರ್ಥಿಗಳ ಅರ್ಹತೆ ಬಗ್ಗೆ ಕೋರ್ಟ್​ನಲ್ಲಿ ಕೇಸ್​ ದಾಖಲಾಗಿದೆ. ಗೊಂದಲ ಬಗೆಹರಿಸಿಕೊಂಡು ಚುನಾವಣೆ ಮಾಡಿ ಎಂದು ಸೂಚನೆಯನ್ನು ಚುನಾವಣಾಧಿಕಾರಿ ನೀಡಿದ್ದಾರೆ. ಕೇಸ್ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಎಂದ ಚುನಾವಣಾ ಅಧಿಕಾರಿ ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ. ಈ ಮೊದಲು ನವೆಂಬರ್ 30 ಕ್ಕೆ ಕೆಎಸ್​ಸಿಎ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಾಗೂ ಉಳಿದ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಕೆ.ಎನ್.ಶಾಂತಕುಮಾರ್ ಹಾಗೂ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸ್ಪರ್ಧೆ ಮಾಡಿದ್ದರು. ಬ್ರಿಜೇಶ್ ಪಟೇಲ್ ಬಣದಿಂದ ಕೆ.ಎನ್.ಶಾಂತಕುಮಾರ್ ಸ್ಪರ್ಧೆ ಮಾಡಿದ್ದರು. ಎರಡು ಬಣಗಳು ಅಧಿಕೃತವಾಗಿ ಪ್ರಚಾರವನ್ನು ನಡೆಸುತ್ತಿವೆ. ಆದರೇ, ಈಗ ಚುನಾವಣೆ ಮುಂದೂಡಿಕೆಯಾಗಿದೆ.
/filters:format(webp)/newsfirstlive-kannada/media/media_files/2025/11/17/ksca-election-postponed02-2025-11-17-15-17-34.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us