/newsfirstlive-kannada/media/media_files/2025/09/18/mohammad_nabi-2025-09-18-23-26-36.jpg)
ಏಷ್ಯಾಕಪ್ನ ಟಿ20 ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ಲಂಕಾದ ಸ್ಪಿನ್ನರ್ಗೆ ಬ್ಯಾಕ್ ಟು ಬ್ಯಾಕ್ 5 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ಆರಂಭ ಏನು ಉತ್ತಮವಾಗಿರಲಿಲ್ಲ. ಶ್ರೀಲಂಕಾದ ಬೌಲರ್ಗಳು ಮೇಲುಗೈ ಸಾಧಿಸಿದ್ದರು. ಈ ಪಂದ್ಯದಲ್ಲಿ ನುವಾನ್ ತುಷಾರ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಅಫ್ಘಾನ್ 136 ರನ್ ಗಳಿಸಿತ್ತು. ಈ ವೇಳೆ ಕ್ರೀಸ್ನಲ್ಲಿದ್ದ ಆಲ್ರೌಂಡರ್ ಮೊಹಮ್ಮದ್ ನಬಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡದ ಮೊತ್ತ ಹಿಗ್ಗಿಸಿದರು.
ಪಂದ್ಯದ ವೇಳೆ ಮೊಹಮ್ಮದ್ ನಬಿ ಸ್ಟ್ರೈಕ್ನಲ್ಲಿ ಇರುವಾಗ, 20ನೇ ಓವರ್ ಮಾಡಲು ಬಂದ ಶ್ರೀಲಂಕಾದ ಪರ ಸ್ಪಿನ್ನರ್ ದುನಿತ್ ವೆಲ್ಲಾಲ ಭಾರೀ ಮುಖಭಂಗ ಅನುಭವಿಸಿದರು. ಏಕೆಂದರೆ ಮೊದಲ ಮೂರು ಬಾಲ್ಗಳು ಸಿಕ್ಸರ್ಗಳು ಆಗಿದ್ದವು. 4ನೇ ಬಾಲ್ ನೋಬಾಲ್ ಆಗಿತ್ತು. ಹೀಗಾಗಿ ಫ್ರೀಹಿಟ್ನಲ್ಲಿ ಮೊಹಮ್ಮದ್ ನಬಿ ಬಾಲ್ ಅನ್ನು ಸಿಕ್ಸ್ ಸಿಡಿಸಿದರು.
ಇದಾದ ಮೇಲೆ 5ನೇ ಬಾಲ್ ಕೂಡ ಬಿಗ್ ಸಿಕ್ಸರ್ ಆಯಿತು. ಆ ಮೇಲೆ 6ನೇ ಎಸೆತವನ್ನು ಸಿಕ್ಸರ್ ಟ್ರೈ ಮಾಡಿದ ಮೊಹಮ್ಮದ್ ನಬಿ ವಿಫಲವಾದರು. ಕೊನೆಯ ಬಾಲ್ನಲ್ಲಿ ಕುಸಲ್ ಪೆರೆರಾ ಹಾಗೂ ಕುಸಲ್ ಮೆಂಡಿಸ್ ಸೇರಿ ರನ್ಔಟ್ ಮಾಡಿದರು. ಪಂದ್ಯದಲ್ಲಿ ಕೇವಲ 22 ಬಾಲ್ ಎದುರಿಸಿ 3 ಬೌಂಡರಿ, 6 ಸಿಕ್ಸರ್ಗಳಿಂದ 60 ರನ್ ಚಚ್ಚಿದರು. 136 ರನ್ಗಳ ಆಸುಪಾಸಿನಲ್ಲಿ ಆಟ ಮುಗಿಸಬೇಕಿದ್ದ ಅಫ್ಘಾನಿಸ್ತಾನ 169 ರನ್ಗಳ ಟಾರ್ಗೆಟ್ ಅನ್ನು ಶ್ರೀಲಂಕಾಗೆ ನೀಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ