/newsfirstlive-kannada/media/media_files/2025/12/20/hardik-pandya-12-2025-12-20-09-15-48.jpg)
Photograph: (ಬಿಸಿಸಿಐ)
ಟಿ20 ವಿಶ್ವಕಪ್ 2026ರ (T20 World Cup) ರಣರೋಚಕ ಹಂತ ತಲುಪಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಪಂದ್ಯಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಾಗಲೇ ಟೀಮ್ ಇಂಡಿಯಾ ಶಿಬಿರದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅಭ್ಯಾಸದ ವೇಳೆ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಗಾಯಗೊಂಡಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಆಟಗಾರರು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಉಪನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬ್ಯಾಟಿಂಗ್ ಮಾಡುತ್ತಿದ್ದರು. ಪಾಂಡ್ಯ ಬಲವಾಗಿ ಬಾರಿಸಿದ ಚೆಂಡು (Shot) ನೇರವಾಗಿ ಎದುರುಗಡೆ ಇದ್ದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಬಲವಾಗಿ ತಗುಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮುಂದಿನ 5 ವರ್ಷಗಳಲ್ಲಿ ರಸ್ತೆಗಿಳಿಯಲಿವೆ ಶೇ.30 ರಷ್ಟು ಎಲೆಕ್ಟ್ರಿಕ್ ವಾಹನಗಳು; EV Expoದಲ್ಲಿ ಸುಲಜಾ ಮೋಟ್ವಾನಿ ಆಶಯ
/filters:format(webp)/newsfirstlive-kannada/media/media_files/2025/10/22/siraj-arshadeep-2025-10-22-10-13-32.jpg)
ಮೈದಾನದಲ್ಲೇ ಕುಸಿದ ಸಿರಾಜ್
ಹಾರ್ದಿಕ್ ಪಾಂಡ್ಯ ಬಾರಿಸಿದ ಚೆಂಡು ತಗುಲಿದ ರಭಸಕ್ಕೆ ಸಿರಾಜ್ ವಿಲವಿಲ ಒದ್ದಾಡಿದ್ದಾರೆ. ತಕ್ಷಣವೇ ಬ್ಯಾಟ್ ಕೆಳಗಿಟ್ಟು ಹಾರ್ದಿಕ್ ಪಾಂಡ್ಯ ಮತ್ತು ಇತರ ಆಟಗಾರರು ಸಿರಾಜ್ ಬಳಿ ಓಡಿ ಹೋಗಿದ್ದಾರೆ. ಕೂಡಲೇ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ (Physio) ಮೈದಾನಕ್ಕೆ ದೌಡಾಯಿಸಿ ಸಿರಾಜ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನೋವಿನಿಂದಾಗಿ ಸಿರಾಜ್ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರನಡೆದರು ಎನ್ನಲಾಗಿದೆ.
ಮುಂದಿನ ಪಂದ್ಯ ಆಡುವುದು ಡೌಟ್?
ಸಿರಾಜ್ ಅವರ ಕಾಲಿಗೆ ಅಥವಾ ಮಂಡಿಗೆ ಚೆಂಡು ತಗುಲಿದ್ದು, ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಗಾಯ ಗಂಭೀರವಾಗಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಿಂದ ಸಿರಾಜ್ ಹೊರಗುಳಿಯುವ ಸಾಧ್ಯತೆಯಿದೆ. ಇದು ಸೂರ್ಯ ಪಡೆಗೆ ದೊಡ್ಡ ಹಿನ್ನಡೆಯಾಗಲಿದ್ದು, ಅವರ ಸ್ಥಾನಕ್ಕೆ ಯಾರು ಆಡಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಬಿಸಿಸಿಐನಿಂದ ಸಿರಾಜ್ ಅವರ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ:EV ಮಾರಾಟದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ; GDPಗೆ ಆಟೋಮೊಬೈಲ್ ಕೊಡುಗೆ ಶೇ.7 : ಕೆ.ಎನ್. ರಾಧಾಕೃಷ್ಣನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us