/newsfirstlive-kannada/media/media_files/2026/03/09/gambhir-and-dhoni-2026-03-09-15-20-14.jpg)
ಕ್ರಿಕೆಟ್ ಜಗತ್ತಿನಲ್ಲಿ ಎಂ.ಎಸ್. ಧೋನಿ ಮತ್ತು ಗೌತಮ್ ಗಂಭೀರ್ ನಡುವಿನ ಬಾಂಧವ್ಯದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಸಿಡಿಸಿದ ಆ ಐತಿಹಾಸಿಕ ಸಿಕ್ಸರ್ ಬಗ್ಗೆ ಗಂಭೀರ್ ನೀಡಿದ್ದ ಹೇಳಿಕೆಗಳು ಅಭಿಮಾನಿಗಳ ನಡುವೆ ಇಂದಿಗೂ ಬಿಸಿಬಿಸಿ ಚರ್ಚೆಯ ವಿಷಯ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ (T20 World Cup 2026) ಇಬ್ಬರು ದಿಗ್ಗಜರ ನಡುವೆ ಅರಳಿದ ಸುಂದರ ಸ್ನೇಹ, ಹಳೆಯ ವಿವಾದಗಳೆಲ್ಲಕ್ಕೂ ತೆರೆ ಎಳೆದಿದೆ.
ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿ, ಐತಿಹಾಸಿಕ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಸಂಭ್ರಮದ ಬೆನ್ನಲ್ಲೇ, ಸ್ಟೇಡಿಯಂನಲ್ಲೇ ಹಾಜರಿದ್ದ ಎಂ.ಎಸ್. ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮುಖದಲ್ಲಿ ಸದಾ ನಗು ಇರಲಿ ಎಂದು ಧೋನಿ ಬರೆದುಕೊಂಡಿರುವ ಸಾಲುಗಳು ಇದೀಗ ವೈರಲ್ ಆಗುತ್ತಿವೆ.
ಧೋನಿ ಪೋಸ್ಟ್‌ನಲ್ಲೇನಿದೆ?
ವಿಶ್ವಕಪ್ ವಿಜೇತ ಭಾರತ ತಂಡದ ಫೋಟೋವನ್ನು ಹಂಚಿಕೊಂಡಿರುವ ಧೋನಿ, ಹೀಗೆ ಬರೆದುಕೊಂಡಿದ್ದಾರೆ: ‘ಅಹಮದಾಬಾದ್‌ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಟೀಮ್ ಇಂಡಿಯಾ ಆಟಗಾರರಿಗೆ, ಸಪೋರ್ಟ್ ಸ್ಟಾಫ್‌ಗೆ ಹಾಗೂ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ದೊಡ್ಡ ಅಭಿನಂದನೆಗಳು. ನೀವೆಲ್ಲರೂ ಆಡಿದ ರೀತಿಯನ್ನು ನೋಡುವುದೇ ಒಂದು ಅದ್ಭುತ ಆನಂದ. ಕೋಚ್ ಸಾಹೇಬ್ರೆ (ಗೌತಮ್ ಗಂಭೀರ್), ನಿಮ್ಮ ಮುಖದಲ್ಲಿ ನಗು ತುಂಬಾ ಚೆನ್ನಾಗಿ ಕಾಣುತ್ತದೆ. ಆ ನಿಮ್ಮ ತೀಕ್ಷ್ಣತೆ (Intensity) ಜೊತೆಗೆ ಮುಖದಲ್ಲಿ ನಗು ಸೇರಿದರೆ ಅದೊಂದು ‘ಕಿಲ್ಲರ್ ಕಾಂಬೊ’. ವೆರಿ ವೆಲ್ ಡನ್. ಎಂಜಾಯ್ ಮಾಡಿ ಗಾಯ್ಸ್. ಇನ್ನು ಬುಮ್ರಾ ಬಗ್ಗೆ ನಾನು ಏನೂ ಬರೆಯದೇ ಇರುವುದೇ ಒಳಿತು... ಆತ ಚಾಂಪಿಯನ್ ಬೌಲರ್ (CHAMPION BOWLER).
Look what all the World Cup win has given us. A heartwarming Thala x Gauti moment on Instagram. We have seen it all! 🥹😂 pic.twitter.com/CHlpgZBkkL
— Mama (@SriniMaama16) March 9, 2026
ಧೋನಿಗೆ ಗಂಭೀರ್ ಕೊಟ್ಟ ರಿಪ್ಲೈ ಏನು?
ವಿಶ್ವಕಪ್ ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಕೋಚ್ ಗೌತಮ್ ಗಂಭೀರ್, ಧೋನಿಯವರ ಈ ಮುದ್ದಾದ ಕಾಲೆಳೆಯುವಿಕೆಗೆ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಧೋನಿ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಗಂಭೀರ್, ‘ನಗಲು ಎಂಥದ್ದೊಂದು ಅದ್ಭುತ ಕಾರಣ ಸಿಕ್ಕಿದೆ, ನಿಮ್ಮನ್ನು ನೋಡಿದ್ದು ತುಂಬಾ ಖುಷಿಯಾಯಿತು’ ಎಂದು ರಿಪ್ಲೈ ಮಾಡಿದ್ದಾರೆ. ಇಬ್ಬರು ಲೆಜೆಂಡ್‌ಗಳ ಈ ಮಾತುಕತೆ ಕಂಡು ಫ್ಯಾನ್ಸ್ ಫುಲ್ ದಿಲ್ ಖುಷ್ ಆಗಿದ್ದಾರೆ.
ರೋಹಿತ್-ಧೋನಿ ಗ್ರ್ಯಾಂಡ್ ಎಂಟ್ರಿ
ಫೈನಲ್ ಪಂದ್ಯದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಟ್ರೋಫಿಯ ಅನಾವರಣ. ಬ್ಲಾಕ್‌ಬಸ್ಟರ್ ಫೈನಲ್ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದ 2007ರ ಟಿ20 ವಿಶ್ವಕಪ್ ವಿಜೇತ ನಾಯಕ ಎಂ.ಎಸ್. ಧೋನಿ ಹಾಗೂ 2024ರ ಟಿ20 ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾ, ಒಟ್ಟಿಗೆ ಟ್ರೋಫಿ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿತು.
ಇದನ್ನೂ ಓದಿ: ಟೀಮ್ ಇಂಡಿಯಾದ ‘ಲಕ್ಕಿ ಚಾರ್ಮ್’ ಆದ ಪುಟಾಣಿ: ಸ್ವಂತ ಖರ್ಚಿನಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿ ಫೈನಲ್‌ಗೂ ಕರೆಸಿದ ಸಂಜು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us