/newsfirstlive-kannada/media/media_files/2026/01/03/cricketer-mustafizur-rehaman-out-of-ipl-2026-01-03-11-59-33.jpg)
ಈ ಭಾರಿಯ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜೂರ್ ರೆಹಮಾನ್ ನನ್ನು ಖರೀದಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಸಿಸಿಐ ಮಹತ್ವದ ಸೂಚನೆ ನೀಡಿದೆ. 2026 ರ ಐಪಿಎಲ್ ನಲ್ಲಿ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜೂರ್ ರೆಹಮಾನ್ ನನ್ನು ಕೆಕೆಆರ್ ತಂಡದಿಂದ ಕೈ ಬಿಡುವಂತೆ ಇಂದು ಬಿಸಿಸಿಐ, ಸೂಚನೆ ನೀಡಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ದಬ್ಬಾಳಿಕೆ, ದೌರ್ಜನ್ಯ, ಹತ್ಯೆಗಳು ನಡೆಯುತ್ತಿವೆ. ಜೊತೆಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಕೂಡ ಭಾರತ ವಿರೋಧಿ ನಿಲುವು ಹೊಂದಿದೆ. ಹೀಗಾಗಿ ಬಾಂಗ್ಲಾದೇಶದ ಆಟಗಾರನಿಗೆ ಐಪಿಎಲ್ ನಲ್ಲಿ ಅವಕಾಶ ಕೊಡದಿರಲು ಬಿಸಿಸಿಐ ನಿರ್ಧರಿಸಿದೆ. ಭಾರತದಲ್ಲಿ ಸಾರ್ವಜನಿಕರ ಒತ್ತಾಯ, ಅಭಿಪ್ರಾಯಕ್ಕೆ ಈಗ ಬಿಸಿಸಿಐ ಕೂಡ ಮನ್ನಣೆ ನೀಡಿದೆ. ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜೂರ್ ರೆಹಮಾನ್ ನನ್ನು ಐಪಿಎಲ್ ನಿಂದ ಕೈ ಬಿಡುವಂತೆ ಕೆಕೆಆರ್ ಗೆ ಬಿಸಿಸಿಐ ಕಾರ್ಯದರ್ಶ ದೇವದತ್ತ ಸೈಕಿಯಾ ಅಧಿಕೃತವಾಗಿ ಸೂಚನೆ ನೀಡಿದ್ದಾರೆ. KKR ತಂಡಕ್ಕೆ ಬಾಲಿವುಡ್ ನಟ ಶಾರೂಖ್ ಖಾನ್ ಸಹ ಮಾಲೀಕರಾಗಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗಾಗಲೇ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ಬಾಂಗ್ಲಾದೇಶಕ್ಕೆ ಸಂದೇಶ ರವಾನಿಸಲು ಭಾರತದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
/filters:format(webp)/newsfirstlive-kannada/media/media_files/2026/01/03/cricketer-mustafizur-rehaman-out-of-ipl-1-2026-01-03-12-00-53.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us