/newsfirstlive-kannada/media/post_attachments/wp-content/uploads/2025/03/Dhoni-3.jpg)
ಡ್ಯಾಡಿಸ್​ ಆರ್ಮಿ. ಚೆನ್ನೈ ಸೂಪರ್​ ಕಿಂಗ್ಸ್​ಗೆ ಇದ್ದ ಇನ್ನೊಂದು ಹೆಸರು. 2 ವರ್ಷ ನಿಷೇಧ ಶಿಕ್ಷೆ ಮುಗಿಸಿ ಕಮ್​ಬ್ಯಾಕ್​ ಮಾಡಿದ ಚೆನ್ನೈ 2018ರ ಆಕ್ಷನ್​ನಲ್ಲಿ ಅನುಭವಿಗಳಿಗೆ ಮಣೆ ಹಾಕಿತ್ತು. 30ರ ಗಡಿದಾಟಿದ ಆಟಗಾರ ದಂಡೇ ತಂಡದಲ್ಲಿತ್ತು. ಅಂದಿನಿಂದಲೂ ಡ್ಯಾಡಿಸ್​ ಆರ್ಮಿ ಅನ್ನೋ ಟ್ಯಾಗ್​ಲೈನ್​ ಚೆನ್ನೈ ತಂಡಕ್ಕೆ ಅಂಟಿಕೊಂಡಿತ್ತು. ಇದೀಗ ಆ ಟ್ಯಾಗ್​ಲೈನ್​​ನ ಫ್ರಾಂಚೈಸಿ ಕಿತ್ತು ಬಿಸಾಕಿದೆ.
ಡ್ಯಾಡಿಸ್​ ಆರ್ಮಿ ಈಗ ಯಂಗ್​ ಬ್ರಿಗೆಡ್!
ಡ್ಯಾಡಿಸ್​ ಆರ್ಮಿ ಚೆನ್ನೈ ಸೂಪರ್​ ಕಿಂಗ್ಸ್​ ಮುಂದಿನ ಸೀಸನ್​ಗೂ ಮುನ್ನ ಯಂಗ್​ ಬ್ರಿಗೆಡ್​ ಆಗಿ ಬದಲಾಗಿದೆ. ಕಳೆದ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್​ ನೀಡಿದ ಸಿಎಸ್​ಕೆ ಸೀನಿಯರ್ಸ್​​ನ ಟಾಟಾ ಹೇಳಿ ಯುವ ಆಟಗಾರರಿಗೆ ಹಾಯ್​ ಹೇಳಿದೆ. ಮಿನಿ ಹರಾಜಿನಲ್ಲಿ ಯುವ ಆಟಗಾರರನ್ನೇ ಬೇಟೆಯಾಡಿದ ಸಿಎಸ್​ಕೆ ತಂಡದಲ್ಲೀಗ ಯಂಗ್​ ಕ್ರಿಕೆಟರ್ಸ್​ದ್ದೇ​ ದರ್ಬಾರ್​.
ಆಯುಷ್​ ಮ್ಹಾತ್ರೆ, 18 ವರ್ಷ
ವಯಸ್ಸಿನ್ನೂ 18 ವರ್ಷ. ಬ್ಯಾಟಿಂಗ್​ ತಾಕತ್ತು, ಟ್ಯಾಲೆಂಟ್​ ಮಾತ್ರ ಸೀನಿಯರ್​ ಆಟಗಾರರನ್ನೇ ಮೀರಿಸುವಂತಿದೆ. ಆಯುಷ್​​ ಮ್ಹಾತ್ರೆ ಕಳೆದ ಸೀಸನ್​ನಲ್ಲಿ ಸಿಕ್ಕ ಕೆಲವೇ ಅವಕಾಶಗಳಲ್ಲಿ ತನ್ನ ತಾಖತ್ತು ಏನು ಅನ್ನೋದನ್ನ ಬಿಗ್​ಸ್ಟೇಜ್​ನಲ್ಲಿ ನಿರೂಪಿಸಿದ್ರು. ಐಪಿಎಲ್​ ಬಳಿಕ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲೂ ಕನ್ಸಿಸ್ಟೆಂಟ್​​ ಬ್ಯಾಟಿಂಗ್​ ಮೂಲಕ ರನ್​ ಹೊಳೆ ಹರಿಸಿರೋ ಆಯುಷ್​, ನೆಕ್ಸ್ಟ್​​ ಸೀಸನ್​ನಲ್ಲಿ ಖಾಯಂ ಓಪನರ್​ ಆಗಿ ಕಣಕ್ಕಿಳಿಯೋದು ಫಿಕ್ಸ್​.!
ಕಾರ್ತಿಕ್​ ಶರ್ಮಾ, 19 ವರ್ಷ
ಕಾರ್ತಿಕ್​ ಶರ್ಮಾ. ಐಪಿಎಲ್​ ಮಿನಿ ಹರಾಜಿನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ ಹೆಸರು. ಸಿಎಸ್​​ಕೆ ಈ 19 ವರ್ಷದ ಯುವ ಆಟಗಾರನ ಮೇಲೆ ಒಂದಲ್ಲ.. ಎರಡಲ್ಲ.. ಬರೋಬ್ಬರಿ 14.20 ಕೋಟಿ ಸುರಿದಿದೆ. ಸುಖಾಸುಮ್ಮನೆ ದೊಡ್ಡ ಮೊತ್ತವನ್ನ ಬಿಡ್​ ಮಾಡಿದ್ದಲ್ಲ. ಡೊಮೆಸ್ಟಿಕ್​ ಟಿ20ಯಲ್ಲಿ ಆಡಿದ 12 ಪಂದ್ಯಗಳಲ್ಲೇ 162.93ರ ಸ್ಟ್ರೇಕ್​ರೇಟ್​ನಲ್ಲಿ 334 ರನ್​ ಚಚ್ಚಿರೋ ಕಾರ್ತಿಕ್, ಲಿಸ್ಟ್​A ನಲ್ಲಿ 55.63, ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ 43.55ರ ಸರಾಸರಿ ಹೊಂದಿದ್ದಾರೆ.
Yet another young one enters the den! 🦁🏟️
— Chennai Super Kings (@ChennaiIPL) December 16, 2025
Whistle welcome, Kartik Sharma!🥳#WhistlePodu#IPLAuctionpic.twitter.com/1haBu8esPZ
ಪ್ರಶಾಂತ್​ ವೀರ್​, 20 ವರ್ಷ
ಮಿನಿ ಆಕ್ಷನ್​ನಲ್ಲಿ ಸಿಎಸ್​ಕೆ ಸೈನ್​ ಮಾಡಿದ ಮತ್ತೊಂದು ಬಿಗ್​ ಡೀಲ್​ ಈ ಪ್ರಶಾಂತ್​ ವೀರ್​. ಉತ್ತರ ಪ್ರದೇಶದ ಆಲ್​​ರೌಂಡರ್​​ಗೆ 14.20 ಕೋಟಿ ಹಣ ನೀಡಿ ಸಿಎಸ್​ಕೆ ಖರೀದಿಸಿದೆ. ಲೆಫ್ಟ್​ ಹ್ಯಾಂಡ್​ ಬ್ಯಾಟಿಂಗ್​, ಲೆಫ್ಟ್​ ಆರ್ಮ್​ ಸ್ಪಿನ್ನರ್​ ಆಗಿರೋ 20 ವರ್ಷದ ಪ್ರಶಾಂತ್​ ವೀರ್​ ಈ ಸೀಸನ್​ನ ಯುಪಿ ಟಿ20 ಲೀಗ್​ನಲ್ಲಿ ಧೂಳೆಬ್ಬಿಸಿದ್ರು. 10 ಪಂದ್ಯಗಳಲ್ಲೇ 320 ರನ್​ ಚಚ್ಚಿದ್ದ ಪ್ರಶಾಂತ್​, 10 ವಿಕೆಟ್​ಗಳನ್ನೂ ಬೇಟೆಯಾಡಿದ್ರು.
Entering the world of yellove and how?🥳🔥
— Chennai Super Kings (@ChennaiIPL) December 16, 2025
Prashant Veer, the most expensive uncapped player in the IPL!📈📈#WhistlePodu#IPLAuctionpic.twitter.com/OwJY0FhoZK
ನೂರ್​ ಅಹ್ಮದ್, 20 ವರ್ಷ
ಅಫ್ಘನ್ ಗನ್​ ನೂರ್​ ಅಹ್ಮದ್​ ಬಗ್ಗೆ ಹೆಚ್ಚು ಎಕ್ಸ್​ಪ್ಲೇನ್​ ಮಾಡೋ ಅಗತ್ಯಾನೇ ಇಲ್ಲ. ಸ್ಪಿನ್ ಜಾದೂವಿನಿಂದಲೇ ಮೋಡಿ ಮಾಡೋ ಮಾಂತ್ರಿಕ. 20 ವರ್ಷಕ್ಕೆ ಫ್ರಾಂಚೈಸಿ ಟಿ20 ಕ್ರಿಕೆಟ್​​ನಲ್ಲಿ ಫ್ರಾಂಚೈಸಿಗಳ ಪಾಲಿನ ಡಾರ್ಲಿಂಗ್ ಆಗಿದ್ದಾರೆ. ಈವರೆಗೆ ವಿಶ್ವಾದ್ಯಂತ 22 ತಂಡಗಳ ಪರ ಆಡಿರೋ ಅನುಭವಿ ನೂರ್​ ಅಹ್ಮದ್​​, ಚೆನ್ನೈನ ಸ್ಪಿನ್​ ಫ್ರೆಂಡ್ಲಿ ಹೋಮ್​ಗ್ರೌಂಡ್​​ ಚೆಪಾಕ್​ಗೆ ಹೇಳಿ ಮಾಡಿಸಿದ ಪ್ಲೇಯರ್​​.!
ಡೆವಾಲ್ಡ್​ ಬ್ರೆವಿಸ್​, 22 ವರ್ಷ
ಬೇಬಿ ಎಬಿಡಿ.. ಕಳೆದ ಸೀಸನ್​ನ ಅರ್ಧಕ್ಕೆ ರಿಪ್ಲೇಸ್​ಮೆಂಟ್​ ಪ್ಲೇಯರ್​ ಆಗಿ ಯೆಲ್ಲೋ ಆರ್ಮಿಗೆ ಎಂಟ್ರಿ ಕೊಟ್ಟ ಡೆವಾಲ್ಡ್​ ಬ್ರೆವಿಸ್​ ವಿಸ್ಪೋಟಕ ಬ್ಯಾಟಿಂಗ್​ನಿಂದ ಸದ್ದು ಮಾಡಿದ್ರು. ಹೀಗಾಗಿಯೇ ಚೆನ್ನೈ 18 ಸೀಸನ್​ ಮುಗಿತಿದ್ದಂತೆ ಬ್ರೆವಿಸ್​ ಒಪ್ಪಂದ ಮಾಡಿಕೊಂಡು ರಿಟೈನ್ ಮಾಡಿಕೊಂಡಿದೆ. 22 ವರ್ಷಕ್ಕೆ ಇಂಟರ್​ನ್ಯಾಷನಲ್​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿರೋ ಡೆವಾಲ್ಡ್​ ಬ್ರೆವಿಸ್​ ಚೆನ್ನೈ ತಂಡದ ಬ್ಯಾಟಿಂಗ್​ ಬಲ ಅಂದ್ರೆ ತಪ್ಪಾಗಲ್ಲ.
ಫಿಯರ್​​ಲೆಸ್​ ಬ್ರ್ಯಾಂಡ್​​ ಆಫ್​ ಕ್ರಿಕೆಟ್​ ಆಡೋ ಲೆಕ್ಕಾಚಾರದಲ್ಲೇ ಸಿಎಸ್​ಕೆ ಥಿಂಕ್​​ಟ್ಯಾಂಕ್ಸ್​​ ಯಂಗಸ್ಟರ್ಸ್​ ಮೇಲೆ ಇನ್ವೆಸ್ಟ್​​ ಮಾಡಿದ್ದಾರೆ. ಹೀಗಾಗಿ ಈ ಐವರೂ ಯಂಗ್​ಸ್ಟರ್ಸ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us