Advertisment

ಪಾಕ್​ ವಿಕೆಟ್ಸ್​ ಪಟ ಪಟ ಉದುರಿಸಿದ ಕುಲ್ ದೀಪ್.. ಸಾಧಾರಣ ಟಾರ್ಗೆಟ್​ ಕೊಟ್ಟ ಸಲ್ಮಾನ್ ಪಡೆ

ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಎದುರಾಳಿ ಪಾಕಿಸ್ತಾನವನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಅದರಂತೆ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕಿಸ್ತಾನ ತಂಡ ಮೊದಲ ಬ್ಯಾಟಿಂಗ್ ಮಾಡಿತು.  ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಸಾಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ ಅತ್ಯುತ್ತಮ ಆರಂಭ ಕೊಟ್ಟಿದ್ದರು.

author-image
Bhimappa
KULDEEP_YADAV
Advertisment

ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ಟೀಮ್ ಸಾಧಾರಣ ಮೊತ್ತದ ಟಾರ್ಗೆಟ್​ ಅನ್ನು ಟೀಮ್ ಇಂಡಿಯಾಕ್ಕೆ ನೀಡಿದೆ. ಕುಲ್ ದೀಪ್ ಯಾದವ್ ಅವರ ಮಾರಕ ಸ್ಪಿನ್​ಗೆ ಪಾಕ್​ ವಿಕೆಟ್​ಗಳು ಪಟ ಪಟ ಎಂದು ಉದುರಿ ಹೋದವು.

Advertisment

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಎದುರಾಳಿ ಪಾಕಿಸ್ತಾನವನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಅದರಂತೆ ಸಲ್ಮಾನ್ ಅಲಿ ಆಘಾ ನೇತೃತ್ವದ ಪಾಕಿಸ್ತಾನ ತಂಡ ಮೊದಲ ಬ್ಯಾಟಿಂಗ್ ಮಾಡಿತು.  ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಸಾಹಿಬ್ಜಾದಾ ಫರ್ಹಾನ್ ಹಾಗೂ ಫಖರ್ ಜಮಾನ್ ಅತ್ಯುತ್ತಮ ಆರಂಭ ಕೊಟ್ಟಿದ್ದರು. 

KULDEEP_YADAV_New

ಓಪನರ್​ ಸಾಹಿಬ್ಜಾದಾ ಫರ್ಹಾನ್ 3 ಸಿಕ್ಸರ್​ಗಳಿಂದ 57, ಫಖರ್ ಜಮಾನ್ 2 ಸಿಕ್ಸರ್​ಗಳಿಂದ 46 ರನ್​ ಗಳಿಸಿದರು. ಆದರೆ ಅರ್ಧಶತಕದ ಸಮೀಪ ಬಂದಾಗ ಕುಲ್​ದೀಪ್ ಯಾದವ್ ಸ್ಪಿನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಸೈಮ್ ಅಯುಬ್ 14 ರನ್​ ಬಿಟ್ಟರೇ ಉಳಿದ ಬ್ಯಾಟರ್​ಗಳು ಕ್ರೀಸ್​ಗೆ ಹಾಗೇ ಬಂದು ಹೀಗೆ ಹೋದರು ಎನ್ನಬಹುದು. ಏಕೆಂದರೆ ಉಳಿದ ಬ್ಯಾಟ್ಸ್​ಮನ್​ಗಳು ಯಾರು 8 ರನ್​ಗಳ ಗಡಿ ದಾಟಲಿಲ್ಲ. ಇದರಿಂದ ಪಾಕಿಸ್ತಾನ 146 ರನ್​ಗೆ ಆಲೌಟ್​ ಆಯಿತು.​ 

ಟೀಮ್ ಇಂಡಿಯಾ ಪರ ಸ್ಪಿನ್ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆದ ಕುಲ್​ದೀಪ್ ಯಾದವ್​ ಪಾಕಿಗಳ ರೆಕ್ಕೆ ಮುರಿದು ಮೂಲೆಗೆ ಎಸೆದರು. ಕುಲ್​ದೀಪ್​ 4 ಓವರ್​ಗೆ 4 ವಿಕೆಟ್​ ಕಬಳಿಸಿದರು. ಪಂದ್ಯದಲ್ಲಿ ಕುಲ್​ದೀಪ್​ಗೆ ಸಾಥ್ ಕೊಟ್ಟ ಅಕ್ಷರ್​ ಪಟೇಲ್, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು ಸಂಭ್ರಮಿಸಿದರು. ಜಸ್​​ಪ್ರಿತ್ ಬೂಮ್ರಾ ಒಂದು ವಿಕೆಟ್​ ಉರುಳಿಸಿದರು. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

india vs pakistan asia cup Asia Cup 2025 Asia cup final
Advertisment
Advertisment
Advertisment