/newsfirstlive-kannada/media/media_files/2025/09/21/ind_vs_pak_new-2025-09-21-22-19-18.jpg)
ಟೀಮ್ ಇಂಡಿಯಾ ಜೊತೆಗಿನ ಏಷ್ಯಾಕಪ್​ ಸೂಪರ್​-4 ಪಂದ್ಯದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್​ ರೌಫ್​ ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಸದ್ಯ ಈ ಸಂಬಂಧ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹ್ಯಾರಿಸ್​ ರೌಫ್​ಗೆ ಬಿಗ್ ಶಾಕ್​ ಕೊಟ್ಟಿದೆ. ಇನ್ನೊಬ್ಬ ಆಟಗಾರ ಸಾಹಿಬ್‌ಜಾದಾ ಫರ್ಹಾನ್​ಗೆ ವಾರ್ನಿಂಗ್ ಮಾಡಿದೆ.
ಸೆಪ್ಟೆಂಬರ್ 21 ರಂದು ಭಾರತದ ಜೊತೆಗೆ ನಡೆದಿದ್ದ ಪಂದ್ಯದಲ್ಲಿ ಬೌಂಡರಿ ಲೈನ್​ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹ್ಯಾರಿಶ್​ ರೌಫ್ ಭಾರತದ 6 ಯುದ್ಧ ವಿಮಾನಗಳನ್ನ ಹೊಡೆದುಳಿಸಿದ್ದೇವೆ ಎಂದು ಸನ್ನೆಗಳನ್ನು ಮಾಡಿ ನರಿ ಬುದ್ಧಿ ತೋರಿಸಿದ್ದ. ಇದು ಅಲ್ಲದೇ ಅಭಿಷೇಕ್ ಶರ್ಮಾ, ಗಿಲ್ ಬ್ಯಾಟಿಂಗ್ ಮಾಡುವಾಗ ಬೇಕಂತಲೇ ರೌಫ್ ಕೆಣಕಿದ್ದನು. ಇದಕ್ಕಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಐಸಿಸಿ ಗೆ ದೂರು ನೀಡಿತ್ತು.
ಈ ಸಂಬಂಧ ಮ್ಯಾಚ್ ರೆಫರಿ ರಿಚಿ ರಿಚರ್ಡ್​​ಸನ್​ ಅವರ ಅಧ್ಯಕ್ಷತೆಯಲ್ಲಿ ಇಂದು ಹೋಟೆಲ್​ನಲ್ಲಿ ಅಧಿಕೃತ ವಿಚಾರಣೆ ನಡೆಯಿತು. ಈ ವಿಚಾರಣೆಗೆ ಹಾಜರಾಗಿದ್ದ ಹ್ಯಾರಿಸ್​ ರೌಫ್, ಸಾಹಿಬ್‌ಜಾದಾ ಫರ್ಹಾನ್​ಗೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳಲಾಗಿದೆ. ನಿಮ್ಮಿಂದ ಕೆಟ್ಟ ಸಂದೇಶ ಹೋಗುತ್ತದೆ ಅಂತ ಬುದ್ಧಿವಾದ ಹೇಳಿದೆ. ಇನ್ನೊಮ್ಮೆ ಹೀಗೆ ಮಾಡದಂತೆ ಪಾಕ್​ ಆಟಗಾರರಿಗೆ ಎಚ್ಚರಿಕೆ ಕೂಡ ಕೊಟ್ಟು ಕಳುಹಿಸಲಾಗಿದೆ.
ಮೈದಾನದಲ್ಲಿ ಕೋತಿಚೇಷ್ಟೇ ಮಾಡಿದ್ದ ಹ್ಯಾರಿಸ್ ರೌಫ್​ಗೆ ಪಂದ್ಯದ ಶೇಕಡಾ 30 ರಷ್ಟು ದಂಡವನ್ನು ವಿಧಿಸಲಾಗಿದೆ. ಇನ್ನು ಬ್ಯಾಟ್​ ಅನ್ನು ಗನ್​ ರೀತಿ ಹಿಡಿದು ಸಂಭ್ರಮಿಸಿದ್ದ ಸಾಹಿಬ್‌ಜಾದಾ ಫರ್ಹಾನ್​ಗೆ ಬಿಗ್ ವಾರ್ನಿಂಗ್ ಮಾಡಲಾಗಿದೆ. ವಿಚಾರಣೆ ವೇಳೆ ಪಾಕ್ ಟೀಮ್ ಮ್ಯಾನೇಜರ್ ನವೀದ್​ ಅಕ್ರಮ್ ಚೀಮಾ ಕೂಡ ಹಾಜರಾಗಿದ್ದರು ಎಂದು ಹೇಳಲಾಗಿದೆ.
ವಿಚಾರಣೆ ಮಾಡುವಾಗ ಸಾಹಿಬ್‌ಜಾದಾ ಫರ್ಹಾನ್, ಬ್ಯಾಟ್​ ಗನ್​ ರೀತಿ ಹಿಡಿದು ಸಂಭ್ರಮಿಸಿದ್ದು ಉದ್ದೇಶ ಪೂರ್ವಕವಾಗಿ ಅಲ್ಲ. ಪಾಕಿಸ್ತಾನದ ಪಖ್ತುನ್​ನಲ್ಲಿರುವ ಬುಡಕಟ್ಟು ಜನಾಂಗದವರ ಸಂಪ್ರದಾಯಿಕ ಸೆಲೆಬ್ರೆಷನ್ ಆಗಿದೆ. ಹೀಗಾಗಿ ಅದರಂತೆ ಮಾಡಿದೆ. ಈ ಹಿಂದೆ ವಿರಾಟ್ ಕೊಹ್ಲಿ ಅವರು ಈ ರೀತಿಯಾಗಿ ಮಾಡಿದ್ದರು ಎಂದು ಅಧಿಕಪ್ರಸಂಗ ವ್ಯಕ್ತಪಡಿಸಿದ್ದನು. ಇದಕ್ಕೆ ಐಸಿಸಿ ಬಾಯಿ ಮುಚ್ಚುವಂತೆ ಹೇಳಿ, ವಾರ್ನಿಂಗ್ ಕೊಟ್ಟು ಕಳಿಸಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ