Advertisment

ಪ್ಯಾರಾ ಅಥ್ಲೀಟ್ ಗಂಗವ್ವ ನೀಲಪ್ಪ ಹರಿಜನಗೆ 1 ಲಕ್ಷ ರೂ. ಆರ್ಥಿಕ ನೆರವು : ಒಲಿಂಪಿಕ್ ಅಸೋಸಿಯೇಷನ್ ನಿಂದ ನೆರವು

ಪ್ಯಾರಾ ಅಥ್ಲೀಟ್ ಗಂಗವ್ವ ನೀಲಪ್ಪ ಹರಿಜನ ಸಾಕಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಚಾಂಪಿಯನ್ ಷಿಪ್ ಗಳಲ್ಲಿ ಭಾಗಿಯಾಗಿದ್ದಾರೆ. ಈಗ ಮುಂದಿನ ತರಬೇತಿಗಾಗಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.

author-image
Chandramohan
KOA FINANCIAL ASSISTANCE TO ATHLETE

KOA ನಿಂದ ಪ್ಯಾರಾ ಅಥ್ಲೀಟ್‌ಗೆ ಆರ್ಥಿಕ ನೆರವು

Advertisment
  • KOA ನಿಂದ ಪ್ಯಾರಾ ಅಥ್ಲೀಟ್‌ಗೆ ಆರ್ಥಿಕ ನೆರವು
  • ಗಂಗವ್ವ ನೀಲಪ್ಪ ಹರಿಜನಗೆ ತರಬೇತಿಗಾಗಿ 1 ಲಕ್ಷ ಆರ್ಥಿಕ ನೆರವು ನೀಡಿಕೆ

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಪ್ಯಾರಾ ಅಥ್ಲೀಟ್ ಗಂಗವ್ವ ನೀಲಪ್ಪ ಹರಿಜನ ಅವರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ. ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ 1 ಲಕ್ಷ ರೂಪಾಯಿ ಆರ್ಥಿಕ ನೆರವು ವಿತರಿಸಿದ್ದಾರೆ. ಗಂಗವ್ವ ನೀಲಪ್ಪ ಹರಿಜನ, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನವರು. ಈಗಾಗಲೇ ಗಂಗವ್ವ ನೀಲಪ್ಪ ಹರಿಜನ ಅವರು ಸಾಕಷ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಚಾಂಪಿಯನ್ ಷಿಪ್ ಗಳಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ಪದಕಗಳನ್ನು ಗೆದ್ದಿದ್ದಾರೆ. ಅಂಧರ ಕ್ರಿಕೆಟ್ ಚಾಂಪಿಯನ್ ಷಿಪ್ ನಲ್ಲಿ ಭಾಗಿಯಾಗಿದ್ದರು. 
ಗಂಗವ್ವ ನೀಲಪ್ಪ ಹರಿಜನ ಅವರ ಮುಂದಿನ ತರಬೇತಿಗಾಗಿ ಇಂದು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜ್ ಅವರು 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ. 

Advertisment

KOA FINANCIAL ASSISTANCE TO ATHLETE (1)



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

KARNATAKA OLYMPIC ASSOCIATION
Advertisment
Advertisment
Advertisment