/newsfirstlive-kannada/media/media_files/2025/12/04/prathyoosha-kumara-2025-12-04-14-28-47.jpg)
ಮಹಿಳಾ ಪ್ರೀಮಿಯರ್​ ಲೀಗ್​ ಆಕ್ಷನ್​ನಲ್ಲಿ ಆರ್​ಸಿಬಿ ತಂಡಕ್ಕೆ ಆಯ್ಕೆಯಾದ ಕನ್ನಡತಿ ಪ್ರತ್ಯೂಷ ಕುಮಾರ್​ ಸಂತಸ ವ್ಯಕ್ತಪಡಿಸಿದ್ದಾರೆ. ಆರ್​​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಕ್ಕೆ ನನಗೆ ತುಂಬಾ ಖುಷಿಯಾಗ್ತಿದೆ. ನನ್ನ ಕನಸು ನನಸಾಗಿದೆ ಎಂದು ಸಂತೋಷಗೊಂಡಿದ್ದಾರೆ.
ಆರ್​ಸಿಬಿ ತಂಡದ ಭಾಗವಾಗಿರೋದಕ್ಕೆ ನಾನು ಫ್ರಾಂಚೈಸಿಗೆ ಕೃತಜ್ಞರಾಗಿರುತ್ತೇನೆ. ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ ಜೊತೆಗೆ ಆಡಲು ಉತ್ಸುಕನಾಗಿದ್ದೇನೆ ಎಂದು ಪತ್ಯೂಷ ಹೇಳಿಕೊಂಡಿದ್ದಾರೆ. ಮೆಗಾ ಆಕ್ಷನ್​ನಲ್ಲಿ ವಿಕೆಟ್​ ಕೀಪರ್​ ಬ್ಯಾಟರ್​​ ಪ್ರತ್ಯೂಷನ ಬೇಸ್​ ಪ್ರೈಸ್​ಗೆ ಆರ್​​ಸಿಬಿ ಖರೀದಿಸಿದೆ.
ಪ್ರತ್ಯೂಷ ಕುಮಾರ್ ಮೂಲತಃ ಬೆಂಗಳೂರಿನವರು. 2015-2016 ರಿಂದ ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಕರ್ನಾಟಕ ಪರ ಆಡುತ್ತಿದ್ದಾರೆ. ರೈಟ್ ಹ್ಯಾಂಡ್ ಬ್ಯಾಟ್ಸಮನ್ ಆಗಿರುವ ಇವರು, ವಿಕೆಟ್ ಕೀಪರ್ ಕೂಡ ಹೌದು. 2017-2018ರ ರಣಜಿ ಟ್ರೋಫಿ ಇವರ ಕ್ರಿಕೆಟ್ ಕರಿಯರ್​​ಗೆ ದೊಡ್ಡ ಬ್ರೇಕ್​ಥ್ರೂ ತಂದುಕೊಟ್ಟಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Prathyoosha couldn’t be more elated to be part of RCB! 🫶
— Royal Challengers Bengaluru (@RCBTweets) December 2, 2025
Let’s give her a BOLD welcome, 12th Man Army. ❤️🔥
ನಮ್ಮ ಹೆಮ್ಮೆಯ ಕನ್ನಡತಿ, ಪ್ರತ್ಯೂಷ ಕುಮಾರ್, ಈಗ ನಮ್ಮ ತಂಡದಲ್ಲಿ. 😍
This is Royal Challenge presents RCB Shorts.#PlayBold#ನಮ್ಮRCBpic.twitter.com/MavDh3TTt6
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us