ಶ್ರೇಯಸ್ ಅಯ್ಯರ್​​, ರವಿ ಬಿಷ್ಣೋಯ್​​ಗೆ ಚಿನ್ನದಂಥ ಅವಕಾಶ..!

ಅಂತೂ ಇಂತೂ ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ನೋಯ್ ಅದೃಷ್ಟ ಖುಲಾಯಿಸಿದೆ. T20 ವಿಶ್ವಕಪ್ ಆಡೋ ಕನಸು ಕಾಣ್ತಿದ್ದ ಉಭಯ ಆಟಗಾರರಿಗೆ, ಸೆಲೆಕ್ಟರ್ಸ್ ಬಿಗ್ ಶಾಕ್ ನೀಡಿದ್ರು. ಶ್ರೇಯಸ್ ಮತ್ತು ಬಿಷ್ನೋಯ್ ಕನಸು ನನಸಾಗೋ ಸಮಯ ಬಂದಿದೆ.

author-image
Ganesh Kerekuli
Ravi Bisnoi Shreyas Iyer
Advertisment
  • ಅಯ್ಯರ್ T20 ತಂಡದಿಂದ ಡ್ರಾಪ್ ಆಗಿದ್ದೇಕೆ..?
  • T20 ವಿಶ್ವಕಪ್ ಆಡೋಕೆ ಶ್ರೇಯಸ್​​ಗೆ ಬಿಗ್ ಚಾನ್ಸ್..?
  • ಸುಂದರ್, ತಿಲಕ್ ವರ್ಮಾ ಫಿಟ್ ಆದ್ರೆ ಮುಂದೇನು..?

T20 ವಿಶ್ವಕಪ್​ಗೆ ತಯಾರಿ ನಡೆಸಿಕೊಳ್ತಿದ್ದ ಟೀಮ್ ಇಂಡಿಯಾಗೆ ಮೆಗಾ ಟೂರ್ನಿಗೂ ಮುನ್ನ ತೀವ್ರ ಆಘಾತ ಎದುರಾಗಿತ್ತು. ತಂಡದ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡು, ವಿಶ್ವಕಪ್​ನಿಂದಲೇ ಹೊರಗುಳಿಯೋ ಸಾಧ್ಯತೆ ಹೆಚ್ಚಿದೆ. ಆ ಇಬ್ಬರು ಆಟಗಾರರ ರೀಪ್ಲೇಸ್​ಮೆಂಟ್​​ ಅನ್ನ, ಸೆಲೆಕ್ಟರ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಅಚ್ಚುಕಟ್ಟಾಗಿ ನಿಭಾಯಿಸಿದೆ.   

780 ದಿನಗಳ ಬಳಿಕ ಅಯ್ಯರ್​ ಕಮ್​ಬ್ಯಾಕ್

ಅನುಭವಿ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ತಿಲಕ್​​ ವರ್ಮಾಗೆ ಬೆಸ್ಟ್ ರೀಪ್ಲೇಸ್​ಮೆಂಟ್ ಆಟಗಾರ. ಟಾಪ್ ಆರ್ಡರ್​​ಗೆ ಹೇಳಿ ಮಾಡಿಸಿದಂತಿರುವ ಶ್ರೇಯಸ್, T20 ಫಾರ್ಮೆಟ್​​ನ ಬೆಸ್ಟ್ ಪ್ಲೇಯರ್. 780 ದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡ್ತಿರುವ ಮುಂಬೈಕರ್ ಮತ್ತೆ ಶಾರ್ಟರ್ ಫಾರ್ಮೆಟ್​​​ನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ರೆಡಿಯಾಗಿದ್ದಾರೆ. ಈ ಬಾರಿ ಶ್ರೇಯಸ್ 2.0 ಅಲ್ಲ ಶ್ರೇಯಸ್ 3.0 ಬ್ಯಾಟಿಂಗ್ ಪಕ್ಕಾ ನೋಡಬಹುದು.

ಅಯ್ಯರ್ T20 ತಂಡದಿಂದ ಡ್ರಾಪ್ ಆಗಿದ್ದೇಕೆ?

ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್, T20 ತಂಡದಿಂದ ಡ್ರಾಪ್ ಆಗಿದ್ದೇ ವಿಚಿತ್ರ. ಅಯ್ಯರ್​​​​​​​​​​​​ ಗೇಟ್​ಪಾಸ್​​ಗೆ ಇದುವರೆಗೂ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಶ್ರೇಯಸ್​ರನ್ನ ಟಾರ್ಗೆಟ್​ ಮಾಡೇ, ತಂಡದಿಂದ ಹೊರಗಿಡಲಾಗಿತ್ತು ಅಂತ ಹೇಳಲಾಗ್ತಿದೆ. 2023, ಡಿಸೆಂಬರ್ 3ರಂದು ಶ್ರೇಯಸ್ ಚಿನ್ನಸ್ವಾಮಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ T20 ಪಂದ್ಯವನ್ನಾಡಿದ್ರು. ಆ ಪಂದ್ಯದಲ್ಲಿ ಅಯ್ಯರ್ 37 ಎಸೆತಗಳಲ್ಲಿ 53 ರನ್​ ಸಿಡಿಸಿದ್ರು. ಅದಾದ ನಂತರ ಮುಂಬೈ ಬ್ಯಾಟ್ಸ್​ಮನ್​​, T20 ತಂಡದಲ್ಲಿ ಕಾಣಿಸಿಕೊಂಡೇ ಇಲ್ಲ.

ಇದನ್ನೂ ಓದಿ:Breaking news :ರಾಜ್ಯದ ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ಬಿಡುಗಡೆ : ಪೊಲೀಸ್ ಡ್ರೆಸ್ ನಲ್ಲಿ ಕಚೇರಿಯಲ್ಲಿ ರಾಸಲೀಲೆ!

Iyer

ಎಡಗೈ ಬ್ಯಾಟರ್ ತಿಲಕ್ ವರ್ಮಾ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ತಿದ್ದಾರೆ. ಸದ್ಯ ಹೈದ್ರಾಬಾದ್​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ತಿಲಕ್, ಸಂಪೂರ್ಣ ಚೇತರಿಕೆಯ ಬಳಿಕ ಬೆಂಗಳೂರಿನ COEಗೆ ಆಗಮಿಸಲಿದ್ದಾರೆ. ಆದ್ರೆ ತಿಲಕ್, ಶೀಘ್ರ ಗುಣಮುಖರಾಗೋದು ಅನುಮಾನವಾಗಿದೆ. ಒಂದು ವೇಳೆ ವಿಶ್ವಕಪ್ ವೇಳೆಗೆ ತಿಲಕ್ ಫಿಟ್ ಆಗದೇ ಇದ್ರೆ ಶ್ರೇಯಸ್ ಅಯ್ಯರ್​​​​​​​​​​​​​​​​​​ಗೆ ವಿಶ್ವಕಪ್ ಆಡೋ ಗ್ರೇಟ್ ಚಾನ್ಸ್ ಲಭಿಸಲಿದೆ.

ರವಿ ಬಿಷ್ಣೋಯ್

ಫಾರ್ಮ್ ಮತ್ತು ಫಿಟ್ನೆಸ್ ಸಮಸ್ಯೆಯಿಂದ ಲೆಗ್​ಸ್ಪಿನ್ನರ್ ರವಿ ಬಿಷ್ಣೋಯ್, T20 ತಂಡದಿಂದ ಕಿಕ್​ಔಟ್ ಆಗಿದ್ರು. ಒಂದೆಡೆ ತಂಡದಲ್ಲಿ ನಡೆಯುತ್ತಿದ್ದ ಸ್ಪಿನ್ನರ್ಸ್​ ಕಾಂಪಿಟೇಷನ್​ನಿಂದ ಬಿಷ್ನೊಯ್, ಅವಕಾಶವಂಚಿತರಾಗಿದ್ರು. ಆದ್ರೀಗ ಬಿಷ್ಣೋಯ್​​ಗೆ ಕಮ್​​ಬ್ಯಾಕ್ ಮಾಡೋಕೆ ಗೋಲ್ಡ್ ಚಾನ್ಸ್ ಸಿಕ್ಕಿದೆ. ನ್ಯೂಜಿಲೆಂಡ್ T20 ಸರಣಿಯಲ್ಲಿ ವಾಶಿಂಗ್ಟನ್ ಸುಂದರ್​ರನ್ನ ರೀಪ್ಲೇಸ್ ಮಾಡಿರುವ ಲೆಗ್ಗಿ, ಗ್ರೇಟ್ ಕಮ್​ಬ್ಯಾಕ್ ನಿರೀಕ್ಷೆಯಲ್ಲಿದ್ದಾರೆ.  

ಇದನ್ನೂ ಓದಿ:  ಚಿನ್ನದ ಬೆಲೆ 10 ಗ್ರಾಂಗೆ 1.45 ಲಕ್ಷ ರೂ.ಗೆ ಏರಿಕೆ : ಬೆಳ್ಳಿ ಬೆಲೆ 3.05 ಲಕ್ಷ ರೂ.ಗೆ ಏರಿಕೆ!

ಟೀಮ್ ಇಂಡಿಯಾ ಪರ ಲೆಗ್​ಸ್ಪಿನ್ನರ್ ರವಿ ಬಿಷ್ಣೋಯ್  ಸಾಕಷ್ಟು T20 ಪಂದ್ಯಗಳನ್ನ ಆಡಿದ್ದಾರೆ. ಇನ್​ಕನ್ಸಿಸ್ಟೆನ್ಸಿ, ಬಿಷ್ನೊಯ್​ಗೆ ಭಾರಿ ಹೊಡೆತ ಕೊಟ್ಟಿದೆ. ಕವೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಬಿಷ್ನೊಯ್, ಪ್ಲೇಯಿಂಗ್ ಇಲೆವೆನ್​​ನ ಸ್ಟ್ರಾಂಗ್ ಕಂಟೆಂಡರ್. ಒಂದು ವೇಳೆ ರಾಜಸ್ಥಾನ್ ಲೆಗ್ಗಿಗೆ ತಂಡದಲ್ಲಿ ಅವಕಾಶ ಸಿಕ್ಕಿದ್ರೆ, ಎರಡೂ ಕೈಗಳಿಂದ ಬಾಚಿಕೊಳ್ಳಬೇಕು. ಇಲ್ದಿದ್ರೆ ಬಿಷ್ನೊಯ್ ಮತ್ತೆ ತಂಡದಿಂದ ಹೊರಗುಳಿಯಬೇಕಾಗುತ್ತದೆ. 

ಸುಂದರ್, ತಿಲಕ್ ವರ್ಮಾ ಫಿಟ್ ಆದ್ರೆ ಮುಂದೇನು..?

ಬಿಸಿಸಿಐ ಮೂಲಕಗಳ ಪ್ರಕಾರ ವಾಶಿಂಗ್ಟನ್ ಸುಂದರ್ T20 ವಿಶ್ವಕಪ್​​​ಗೂ ಮುನ್ನ ಫಿಟ್ ಆಗೋದು ಅನುಮಾನ. ಆದ್ರೆ ತಿಲಕ್ ವರ್ಮಾ, ವಿಶ್ವಕಪ್​ಗೆ ಕಮ್​ಬ್ಯಾಕ್ ಮಾಡೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಕಿವೀಸ್ T20 ಸರಣಿಯಲ್ಲಿ ಶ್ರೇಯಸ್ ಮತ್ತು ಬಿಷ್ಣೋಯ್ ಸಾಲಿಡ್ ಪರ್ಫಾಮೆನ್ಸ ನೀಡಿದ್ರೆ, ಸೆಲೆಕ್ಟರ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್​​ಗೆ ಮತ್ತೆ ತಲೆಬಿಸಿ ಹೆಚ್ಚಾಗೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಇಂದೋರ್ ಭಿಕ್ಷುಕ ಮೂರು ಮನೆ, ಕಾರ್‌, ಆಟೋ ಮಾಲೀಕ! ಬಡ್ಡಿಗೆ ಸಾಲ ಕೊಡ್ತಾರೆ: ಆದರೂ ಭಿಕ್ಷಾಟನೆ ನಿಲ್ಲಿಸಿಲ್ಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Cricket news in Kannada Shreyas Iyer Ravi bishnoi
Advertisment