/newsfirstlive-kannada/media/media_files/2025/10/03/ravindra_jadeja-2025-10-03-16-39-07.jpg)
ಧೃವ್ ಜುರೆಲ್ ಬೆನ್ನಲ್ಲೇ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ವೆಸ್ಟ್​ ಇಂಡೀಸ್​ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ್ದಾರೆ. ವೆಸ್ಟ್​ ಇಂಡೀಸ್ ಜೊತೆಗಿನ ಈ ಒಂದು ಇನ್ನಿಂಗ್ಸ್​ನಲ್ಲಿ ಮೂರನೇ ಬ್ಯಾಟರ್​ನ ಸೆಂಚುರಿ ಆಗಿರುವುದು ವಿಶೇಷ ಎನಿಸಿದೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದು ವೆಸ್ಟ್​ ಇಂಡೀಸ್ ಕ್ಯಾಪ್ಟನ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದರ ಫಲವಾಗಿ ಕೇವಲ 162 ರನ್​ಗೆ ವೆಸ್ಟ್​ ಇಂಡೀಸ್​​ ಬ್ಯಾಟರ್ಸ್ ಆಲೌಟ್​ ಆಗಿದ್ದರು. ಇದಾದ ಮೇಲೆ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಆಟಗಾರರು ಮೊದಲ ಇನ್ನಿಂಗ್ಸ್​ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಸಿಡಿಸುತ್ತಿದ್ದಾರೆ.
ಕೆ.ಎಲ್ ರಾಹುಲ್ ಅವರು ಈ ಇನ್ನಿಂಗ್ಸ್​ನಲ್ಲಿ ಮೊದಲ ಸೆಂಚುರಿ ಬಾರಿಸಿ ಸಂಭ್ರಮಿಸಿದ್ದರು. ಬಳಿಕ ರಾಹುಲ್ ವಿಕೆಟ್ ಒಪ್ಪಿಸಿದರು. ಕ್ಯಾಪ್ಟನ್​ ಶುಭ್​ಮನ್ ಗಿಲ್ ಅವರು 50 ರನ್​ಗಳನ್ನು ಗಳಿಸಿ ಆಡುವಾಗ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟ್ ಆದರು. ಬಳಿಕ ಕ್ರೀಸ್​ಗೆ ಆಗಮಿಸಿದ್ದ ಧೃವ್ ಜುರೇಲ್ ಅವರು ರವೀಂದ್ರ ಜಡೇಜಾ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಿದ್ದರು. ಇದರ ಫಲವೇ ರವೀಂದ್ರ ಜಡೇಜಾ ಅವರು ಶತಕ ಬಾರಿಸಿದ್ದಾರೆ.
ಈ ಇನ್ನಿಂಗ್ಸ್​ನಲ್ಲಿ ವೆಸ್ಟ್​ ಇಂಡೀಸ್​ ಬೌಲರ್​ಗಳನ್ನು ಸರಿಯಾಗಿ ಕಾಡಿದ ವೀಂದ್ರ ಜಡೇಜಾ 168 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಬಿಗ್​ ಸಿಕ್ಸರ್​ಗಳಿಂದ 100 ರನ್​ಗಳನ್ನು ಚಚ್ಚಿದರು. ಇದು ಜಡೇಜಾ ಅವರ 6ನೇ ಟೆಸ್ಟ್​ ಶತಕವಾಗಿದೆ. ಸದ್ಯ ಟೀಮ್ ಇಂಡಿಯಾ 5 ವಿಕೆಟ್​ಗೆ 448 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದೆ. 286 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ